ಕೂಚ್ ಬೆಹಾರ್ ಅಕ್ಟೋಬರ್ 12: ಉತ್ತರ ಬಂಗಾಳದ ಅಭಿವೃದ್ಧಿ ಸಚಿವ ಉದಯನ್ ಗುಹಾ (Udayan Guha) ಅವರ ಸೊಸೆ ಅಪೂರ್ಬಾ ಗುಹಾ, ಬಿಜೆಪಿ ನಾಯಕ ಸುವೇಂದು ಅಧಿಕಾರಿ (Suvendu Adhikari) ಮತ್ತು ಅವರ ಬೆಂಬಲಿಗರ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (MGNREGS) ಪಾವತಿಗೆ ಬೇಡಿಕೆಯ ಕುರಿತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಗೆ ಸಂದೇಶ ಕಳುಹಿಸಿದ ನಂತರ ವಿರೋಧ ಪಕ್ಷದ ನಾಯಕ ಆಕೆಯ ಮೊಬೈಲ್ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಂದಿನಿಂದ ಆಕೆಗೆ ವಾಟ್ಸಾಪ್ ಮತ್ತು ಫೋನ್ ಕರೆಗಳ ಮೂಲಕ ಅಶ್ಲೀಲ ಸಂದೇಶಗಳು ಮತ್ತು ಬೆದರಿಕೆಗಳು ಬರುತ್ತಿವೆ. ಈ ಬಗ್ಗೆ ಫೂಲ್ಬಗಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತೃಣಮೂಲ ಕಾಂಗ್ರೆಸ್ (TMC) MGNREGS ಅಡಿಯಲ್ಲಿ ಬಾಕಿ ಪಾವತಿಗಳನ್ನು ಒತ್ತಾಯಿಸಲು ಚಳುವಳಿಯನ್ನು ಪ್ರಾರಂಭಿಸಿದೆ. ಶನಿವಾರ, ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಎಂಜಿಎನ್‌ಆರ್‌ಇಜಿಎ ಪಾವತಿಯನ್ನು ಪಡೆಯದಿರುವವರು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಮತ್ತು ರಾಜ್ಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಗೆ ಕರೆ ಮಾಡಿ ತಮ್ಮ ಹಣಕ್ಕಾಗಿ ಬೇಡಿಕೆಯಿಡುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಅಪೂರ್ವ ಗುಹಾ ಅವರು ಸುವೇದು ಅಧಿಕಾರಿಗೆ ವಾಟ್ಸಾಪ್‌ನಲ್ಲಿ ನನಗೆ 100 ದಿನಗಳ ಕೆಲಸಕ್ಕೆ ಪಾವತಿ ಮಾಡಬೇಕು ಎಂದು ಸಂದೇಶ ಕಳುಹಿಸಿದ್ದಾರೆ.
ಇದಾದ ನಂತರ ತೃಣಮೂಲ ಕಾಂಗ್ರೆಸ್ ಮೇಲೆ ವಾಗ್ದಾಳಿ ಮಾಡಿದ ಬಿಜೆಪಿ ನಾಯಕ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅಪೂರ್ಬಾ ಅವರ ಸಂಖ್ಯೆಯನ್ನು ಪೋಸ್ಟ್ ಮಾಡಿದ್ದಾರೆ.
ಸುವೇಂದು ಅಧಿಕಾರಿ ಅವರು ತಮ್ಮ ಅಧಿಕೃತ ಪುಟದಲ್ಲಿ ನನ್ನ ಫೋನ್ ಸಂಖ್ಯೆಯನ್ನು ಪೋಸ್ಟ್ ಮಾಡಿದ ನಂತರ, ನನಗೆ ನಿಂದನೀಯ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಅಷ್ಟೇ ಅಲ್ಲ, ಬೆದರಿಕೆ ಕರೆಗಳು ಬರುತ್ತಿರುವ ಕಾರಣ ನನಗೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಬೇಕಾಗಿ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲೂ ಜಾತಿ ಗಣತಿ ನಡೆಸಲಾಗುವುದು: ಪ್ರಿಯಾಂಕಾ ಗಾಂಧಿ
ನಾನು ಭಾನುವಾರ ಮತ್ತೆ ಫೋನ್ ಆನ್ ಮಾಡಿದಾಗಲೂ ಅದೇ ರೀತಿಯಲ್ಲಿ ಸಂದೇಶಗಳು ಮತ್ತು ಕರೆಗಳನ್ನು ಬಂದಿವೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ನಂಬರ್ ಪೋಸ್ಟ್ ಮಾಡುವುದನ್ನು ಒಪ್ಪಲಾಗದು. ಹೀಗಾಗಿ ಲಿಖಿತ ದೂರು ನೀಡಿದ್ದೇನೆ’ ಎಂದು ಹೇಳಿದ್ದಾರೆ.
ಆದಾಗ್ಯೂ, ಕೂಚ್ ಬೆಹಾರ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿರಾಜ್ ಬೋಸ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇವು ತೃಣಮೂಲ ಕಾಂಗ್ರೆಸ್ನ ಸುಳ್ಳು ಕತೆ , ಇವೆಲ್ಲವೂ ಪ್ರಚಾರಕ್ಕಾಗಿ ಮಾಡಿದ್ದು, ಟಿಎಂಸಿ ಜನರಿಗಾಗಿ ಏನೂ ಮಾಡುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ