Jamnagar: ಪೂಜೆ ಹೆಸರಲ್ಲಿ ಶಾಸಕರಿಗೆ ಟೋಪಿ ಹಾಕಲು ಹೋಗಿ ಸಿಕ್ಕಿ ಬಿದ್ದ ತಾಂತ್ರಿಕರು
ಶಾಸಕರಿಗೆ ಪೂಜೆ ಹೆಸರಿನಲ್ಲಿ ಟೋಪಿ ಹಾಕಲು ಹೋಗಿ ಮೂವರು ತಾಂತ್ರಿಕರು ಸಿಕ್ಕಿಬಿದ್ದಿರುವ ಘಟನೆ ಜಾಮ್ನಗರದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ, ಪೂಜೆಗಳ ನೆಪವೊಡ್ಡಿ ಜನರಿಂದ ಸುಲಿಗೆ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಕಮಲೇಶ್ ಎಂದು ಗುರುತಿಸಿಕೊಂಡಿರುವ ವ್ಯಕ್ತಿ ಜಾಮ್ನಗರದ ಶಾಸಕ ದಿವ್ಯೇಶ್ ಅಕ್ಬರಿಗೆ ಕರೆ ಮಾಡಿ, ತಾವು ಜೈನ ಮುನಿಗಳು ಎಂದು ಹೇಳಿಕೊಂಡಿದ್ದಾರೆ. ಆಗಲೇ ಶಾಸಕರಿಗೆ ಅನುಮಾನ ಬಂದಿತ್ತು, ಜೈನ ಮುನಿಗಳು ಫೋನ್ನಲ್ಲಿ ಮಾತನಾಡುವುದಿಲ್ಲ ನಮಗೆ ಮೋಸ ಮಾಡುವ ಆಲೋಚನೆಯೇ ಇರಬೇಕು ಎಂದು ಅರಿತುಕೊಂಡರು.

ನೀವು ತೊಂದರೆಯಲ್ಲಿದ್ದೀರಿ, ನಿಮ್ಮ ಇಷ್ಟಾರ್ಥ ಇಡೇರಲು ಜೈನ ದಿಗಂಬರರ ಹೆಸರಿನಲ್ಲಿ ಪೂಜೆ ನಡೆಸಬೇಕು ಅದರಿಂದ ನಿಮಗೆ ಒಳ್ಳೆಯದಾಗುತ್ತದೆ, 51 ಸಾವಿರದ ಮೂರು ಕವರ್ಗಳನ್ನು ನಮಗೆ ಕಳುಹಿಸಿಕೊಡಿ ಎಂದು ಕೇಳಿದ್ದಾರೆ, ಆಗುವುದಿಲ್ಲ ಎಂದು ಶಾಸಕರು ಹೇಳಿದಾಗ 21 ಸಾವಿರ ಕೊಡುವಂತೆ ಕೇಳಿದ್ದಾರೆ, ಬಳಿಕ 5 ಸಾವಿರ ಕೊಡುವಂತೆ ಕೇಳಿದ್ದಾರೆ.
ನಾಲ್ಕು ದಿನ ಬೇರೆ ಬೇರೆ ನೆಪದಲ್ಲಿ ಶಾಸಕರು ಆ ಕಳ್ಳರ ಗುಂಪಿನೊಂದಿಗೆ ಮಾತುಕತೆ ನಡೆಸುತ್ತಿದ್ದರು, ಕೊನೆಗೆ ಹಣ ತೆಗೆದುಕೊಳ್ಳಲು ಜಾಮ್ನಗರಕ್ಕೆ ಬನ್ನಿ ಎಂದು ಹೇಳಿದ್ದರು, ಈ ವೇಳೆ ಪೊಲೀಸರು ಕಟ್ಟೆಚ್ಚರವಹಿಸಿದ್ದರು.
ಮತ್ತಷ್ಟು ಓದಿ: ಬಂಬಲ್ ಡೇಟಿಂಗ್ ಆ್ಯಪ್ನಲ್ಲಿ ಭೇಟಿ, ವ್ಯಕ್ತಿಯಿಂದ ಚಿನ್ನ, ನಗದು, ಐಫೋನ್ ಕದ್ದು ಮಹಿಳೆ ಪರಾರಿ
ಬಳಿಕ ಅಕ್ಬರಿ ಅವರು ಪೊಲೀಸರಿಗೆ ವಿಷಯ ತಿಳಿಸಿ, ಫೋನ್ ನಂಬರ್ ಹಾಗೂ ಇತರೆ ವಿವರಗಳನ್ನು ನೀಡಿದ್ದಾರೆ. ಶಾಸಕರ ದೂರಿನಂತೆ ಮೊಬೈಲ್ ನಂಬರ್ ಆಧರಿಸಿ ತನಿಖೆ ನಡೆಸಿದ್ದಾರೆ, ಅಮ್ರೇಲಿಯಲ್ಲಿ ಮೂವರನ್ನು ಬಂಧಿಸಿದ್ದಾರೆ. ಅವರನ್ನು ಅಭಯ್ ಸೋಮಾನಿ, ಅಜುಮ್ ಜುನೇಜಾ ಹಾಗೂ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಮೂವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಕಪಟಿಗಳು ನಾನಾ ಕತೆಗಳನ್ನು ಕಟ್ಟಿ ಜನರಿಗೆ ವಂಚಿಸಿ ಆರ್ಥಿಕ ಲಾಭ ಮಾಡಿಕೊಳ್ಳುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ