Air India ವಿಮಾನ ಪತನ ದುರಂತ: ಸಾವಿನ ಸಂಖ್ಯೆ 17ಕ್ಕೆ ಏರಿಕೆ

|

Updated on: Aug 08, 2020 | 7:18 AM

ತಿರುವನಂತಪುರಂ: ಕೇರಳದಲ್ಲಿ Air India ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ. ಜೊತೆಗೆ, 123 ಪ್ರಯಾಣಿಕರಿಗೆ ಗಾಯಗಳಾಗಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಯಿಕ್ಕೋಡ್​ನ ಕರಿಪುರ ಏರ್​ಪೋರ್ಟ್​ನಲ್ಲಿ ವಿಮಾನ ಪತನಗೊಂಡಿದೆ. ರನ್​ವೇಯಿಂದ ಪ್ರಪಾತಕ್ಕೆ ಜಾರಿದ್ದ ಏರ್ ಇಂಡಿಯಾ ವಿಮಾನ ಎರಡು ತುಂಡಾಗಿದೆ. ವಿಮಾನದಲ್ಲಿ ಒಟ್ಟು 190 ಜನ ಪ್ರಯಾಣಿಸುತ್ತಿದ್ದು ಅದರಲ್ಲಿ 174 ಪ್ರಯಾಣಿಕರು ಹಾಗೂ 10 ಹಸುಗೂಸುಗಳು ಇದ್ದವು. ಇಬ್ಬರು ಪೈಲಟ್, ವಿಮಾನದಲ್ಲಿ ನಾಲ್ವರು […]

Air India ವಿಮಾನ ಪತನ ದುರಂತ: ಸಾವಿನ ಸಂಖ್ಯೆ 17ಕ್ಕೆ ಏರಿಕೆ
Follow us on

ತಿರುವನಂತಪುರಂ: ಕೇರಳದಲ್ಲಿ Air India ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ. ಜೊತೆಗೆ, 123 ಪ್ರಯಾಣಿಕರಿಗೆ ಗಾಯಗಳಾಗಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋಯಿಕ್ಕೋಡ್​ನ ಕರಿಪುರ ಏರ್​ಪೋರ್ಟ್​ನಲ್ಲಿ ವಿಮಾನ ಪತನಗೊಂಡಿದೆ. ರನ್​ವೇಯಿಂದ ಪ್ರಪಾತಕ್ಕೆ ಜಾರಿದ್ದ ಏರ್ ಇಂಡಿಯಾ ವಿಮಾನ ಎರಡು ತುಂಡಾಗಿದೆ. ವಿಮಾನದಲ್ಲಿ ಒಟ್ಟು 190 ಜನ ಪ್ರಯಾಣಿಸುತ್ತಿದ್ದು ಅದರಲ್ಲಿ 174 ಪ್ರಯಾಣಿಕರು ಹಾಗೂ 10 ಹಸುಗೂಸುಗಳು ಇದ್ದವು. ಇಬ್ಬರು ಪೈಲಟ್, ವಿಮಾನದಲ್ಲಿ ನಾಲ್ವರು ಸಹ ಸಿಬ್ಬಂದಿಯಿದ್ದರು

ವಿಮಾನ ಪತನಗೊಂಡ ಹಿನ್ನೆಲೆಯಲ್ಲಿ ಕರಿಪುರಕ್ಕೆ ಬರುವ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ವಿಮಾನಗಳನ್ನು ಬೇರೆ ಏರ್​ಪೋರ್ಟ್​ಗಳಿಗೆ ಡೈವರ್ಟ್​ ಮಾಡಲಾಗಿದೆ.

ಇನ್ನು ದುರಂತದಲ್ಲಿ ಮೃತಪಟ್ಟವರಿಗೆ ಅಮರಿಕಾ ಸಂತಾಪ ಸೂಚಿಸಿದೆ. ಜೊತೆಗೆ, ಅಮೆರಿಕಾ ರಾಯಭಾರಿ ಕೆನ್​ ಜಸ್ಟರ್​ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

Published On - 7:18 am, Sat, 8 August 20