ಅಶೋಕ್ ಗೆಹ್ಲೋಟ್ ರಾಜಸ್ಥಾನ ಸಿಎಂ ಆಗಿ ಉಳಿಯುತ್ತಾರೋ ಇಲ್ಲವೋ?; ಇನ್ನೆರಡು ದಿನಗಳಲ್ಲಿ ನಿರ್ಧಾರ

Rajasthan Congress Crisis ಗೆಹ್ಲೋಟ್ ಸಿಎಂ ಸ್ಥಾನದಲ್ಲಿ ಉಳಿಯುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಅಶೋಕ್ ಗೆಹ್ಲೋಟ್ ರಾಜಸ್ಥಾನ ಸಿಎಂ ಆಗಿ ಉಳಿಯುತ್ತಾರೋ ಇಲ್ಲವೋ?; ಇನ್ನೆರಡು ದಿನಗಳಲ್ಲಿ ನಿರ್ಧಾರ
ಅಶೋಕ್ ಗೆಹ್ಲೋಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 29, 2022 | 6:53 PM

ದೆಹಲಿ: ಸೋನಿಯಾ ಗಾಂಧಿಯವರ (Sonia Gandhi) ಕ್ಷಮೆಯಾಚಿಸುವ ಮೂಲಕ ಅಶೋಕ್ ಗೆಹ್ಲೋಟ್ (Ashok Gehlot) ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಇದಾದ ನಂತರ ಮಾಧ್ಯಮದವರಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕೆಸಿ ವೇಣುಗೋಪಾಲ್, ಗೆಹ್ಲೋಟ್  ರಾಜಸ್ಥಾನ  ಸಿಎಂ ಸ್ಥಾನದಲ್ಲಿ ಉಳಿಯುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಸೋನಿಯಾ ಗಾಂಧಿ ಒಂದೆರಡು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಭಾನುವಾರದ ಘಟನೆ ಬಗ್ಗೆ ತಾನು ಸೋನಿಯಾ ಗಾಂಧಿಯವರಲ್ಲಿ ಕ್ಷಮೆಯಾಚಿಸಿರುವುದಾಗಿ ಗೆಹ್ಲೋಟ್ ಹೇಳಿದ್ದಾರೆ. ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅಜಯ್ ಮಾಕೇನ್ , ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದ ಸಭೆಯಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್‌ಗೆ ನಿಷ್ಠರಾಗಿರುವ ಶಾಸಕರು ಬಹಿರಂಗ ಬಂಡಾಯವೆದ್ದಿದ್ದರು. ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ರಾಜಸ್ಥಾನ ಸಿಎಂ ಸ್ಥಾನಕ್ಕೆ ಸಚಿನ್ ಪೈಲಟ್ ಬರಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ರಾಜಸ್ಥಾನದಲ್ಲಿ 90ಕ್ಕೂ ಹೆಚ್ಚು ಶಾಸಕರು ಭಾನುವಾರ ರಾಜೀನಾಮೆ ಬೆದರಿಕೆ ಒಡ್ಡಿದ್ದರು. ಆದಾಗ್ಯೂ,ಗೆಹ್ಲೋಟ್ ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯಲಿದ್ದಾರೆಯೇ ಎಂದು ಕೇಳಿದಾಗ ಆ ಬಗ್ಗೆ ನಿರ್ಧಾರ ಸೋನಿಯಾ ಗಾಂಧಿ ಅವರದ್ದು ಎಂದು ವೇಣುಗೋಪಾಲ್ ಹೇಳಿದ್ದಾರೆ.

ನಾನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತನಾಡಿದ್ದೇನೆ. ರಾಜಸ್ಥಾನದಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ಬೆಳವಣಿಗೆಯಿಂದಾಗಿ ಆಘಾತವಾಗಿದೆ. ನಾನು ಸಿಎಂ ಆಗಿ ಉಳಿಯಬೇಕೆಂಬ ಬಯಕೆಯಿಂದ ಇದೆಲ್ಲ ನಡೆದಿದೆ . ನಾನು ಅವರಲ್ಲಿ ಕ್ಷಮೆ ಕೇಳಿದ್ದೇನೆ ಎಂದುಸೋನಿಯಾರನ್ನು ಭೇಟಿಮಾಡಿದ ನಂತರ ಗೆಹ್ಲೋಟ್ ಹೇಳಿದ್ದಾರೆ. ರಾಜಸ್ಥಾನ ಸಿಎಂ ಆಗಿ ನೀವು ಮುಂದುವರಿಯುತ್ತೀರಾ ಎಂದು ಕೇಳಿದಾಗ, ಈ ಬಗ್ಗೆ ನಾನು ನಿರ್ಧರಿಸುವುದಿಲ್ಲ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಗಾಗಿ ಮುಂದಿನ ತಿಂಗಳ ನಡೆಯಲಿರುವ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಉತ್ತರಾಧಿಕಾರಿಯಾಗಲು ಗೆಹ್ಲೋಟ್ ಫೇವರಿಟ್ ಆಗಿಗದ್ದರು.  ಆದಾಗ್ಯೂ, ಅವರಿಗೆ ನಿಷ್ಠಾವಂತರಾಗಿದ್ದ  ಶಾಸಕರು ಬಂಡಾಯವೆದ್ದಾಗ  ಎಲ್ಲವೂ ಹಳಿತಪ್ಪಿತು.

ತಮ್ಮ ಶಾಸಕರ ದಂಗೆಯ ಬಗ್ಗೆ, ಪೈಲಟ್ ಅವರನ್ನು ಬದಲಿಸಲು ಅವಕಾಶ ನೀಡುವ ‘ಸಾಂಪ್ರದಾಯಿಕ’ ಒಂದು ಸಾಲಿನ ನಿರ್ಣಯ ಬಗ್ಗೆ ಮಾತನಾಡಿದ ಗೆಹ್ಲೋಟ್ ಒಂದು ಸಾಲಿನ ನಿರ್ಣಯವು ನಮ್ಮ ಸಂಪ್ರದಾಯವಾಗಿದೆ. ನಿರ್ಣಯವನ್ನು ಅಂಗೀಕರಿಸದ ಪರಿಸ್ಥಿತಿ ಉದ್ಭವಿಸಿದೆ, ಇದು ನನ್ನ ನೈತಿಕ ಹೊಣೆಗಾರಿಕೆಯಾಗಿದೆ ಸಿಎಂ ಆಗಿದ್ದರೂ ನಾನು ನಿರ್ಣಯವನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ.ಇವುಗಳನ್ನು ವಿರೋಧಿಸುವುದಿಲ್ಲ. ಈ ವಾತಾವರಣದಲ್ಲಿ ಚುನಾವಣೆ ನಡೆಸಲಾಗುವುದು ಎಂದಿದ್ದಾರೆ.

ತಮ್ಮನ್ನು  ‘ಬಂಡಾಯಗಾರ’ ಎಂದು ಅಪಖ್ಯಾತಿ ಮಾಡುವ ‘ಪ್ರೇರಿತ ಪ್ರಯತ್ನ’ವನ್ನು ಬಿಜೆಪಿ ಮಾಡುತ್ತಿದೆ ಎಂದು ಗೆಹ್ಲೋಟ್ ಈ  ಹಿಂದೆ  ಆರೋಪಿಸಿದ್ದರು.  ಪಕ್ಷದ ಮುಖ್ಯಸ್ಥ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಹೀಗೆ ಎರಡೆರಡು ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಪುನರುಚ್ಛರಿಸಿದ್ದರು.

Published On - 6:15 pm, Thu, 29 September 22