chandrayaan-3: ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ: ಸ್ವಾಮಿ ಚಕ್ರಪಾಣಿ ಮಹಾರಾಜ್

|

Updated on: Aug 28, 2023 | 12:40 PM

Moon Hindu Rashtra: ಚಂದ್ರಯಾನ-3 (chandrayaan-3) ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ತನ್ನ ಕಾರ್ಯಚರಣೆಯನ್ನು ನಡೆಸುತ್ತಿದೆ. ಲ್ಯಾಂಡಿಂಗ್​​​ ಪಾಯಿಂಟ್​​ನ್ನು ಶಿವಶಕ್ತಿ ಎಂದು ಪ್ರಧಾನಿ ಮೋದಿ ಅವರು ಹೆಸರಿಸಿದ್ದಾರೆ. ಇದೀಗ ಅದನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಿ ಎಂದು ಸ್ವಾಮಿ ಚಕ್ರಪಾಣಿ ಮಹಾರಾಜ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

chandrayaan-3: ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ: ಸ್ವಾಮಿ ಚಕ್ರಪಾಣಿ ಮಹಾರಾಜ್
ಸ್ವಾಮಿ ಚಕ್ರಪಾಣಿ ಮಹಾರಾಜ್
Follow us on

ಚಂದ್ರಯಾನ-3 (chandrayaan-3) ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದ್ದು, ತನ್ನ ಕಾರ್ಯಚರಣೆಯನ್ನು ನಡೆಸುತ್ತಿದೆ. ಈ ಸಾಧನೆಯ ಮೂಲಕ ವಿಶ್ವದಲ್ಲೇ ದೊಡ್ಡಮಟ್ಟದ ಇತಿಹಾಸವನ್ನು ಭಾರತ ನಿರ್ಮಿಸಿದೆ. ಇಸ್ರೋ ಸಾಧನೆಯ ಬಗ್ಗೆ ವಿಜ್ಞಾನಿಗಳನ್ನು ಅಭಿನಂದಿಸಲು ಶನಿವಾರದಂದು (ಆ.26) ಬೆಂಗಳೂರಿನಲ್ಲಿರುವ ಇಸ್ರೋ ಮುಖ್ಯಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ವಿಕ್ರಮ್​​​ ಲ್ಯಾಂಡಿಂಗ್​​​ ಪಾಯಿಂಟ್​​ನ್ನು ಶಿವಶಕ್ತಿ ಹೆಸರಿಸಿದ್ದಾರೆ. ಇನ್ನು ಆಗಸ್ಟ್​​ 23ನ್ನು ರಾಷ್ಟ್ರೀಯ ಬಾಹ್ಯಕಾಶ ದಿನ ಎಂದು ಆಚರಣೆ ಮಾಡಲು ಕರೆ ನೀಡಿದ್ದಾರೆ. ಇನ್ನು ಈ ಬಗ್ಗೆಯು ವಾದ-ವಿವಾದಗಳು ಕೂಡ ಸೃಷ್ಟಿಯಾಗಿತ್ತು. ಇದೀಗ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು ಚಂದ್ರನನ್ನು ‘ಹಿಂದೂ ರಾಷ್ಟ್ರ’ (Moon Hindu Rashtra) ಎಂದು ಘೋಷಿಸಲು ಮತ್ತು ಚಂದ್ರಯಾನ -3 ರ ಲ್ಯಾಂಡಿಂಗ್ ಸ್ಪಾಟ್​​ನ್ನು ಅದರ ರಾಜಧಾನಿಯನ್ನಾಗಿ ಮಾಡಬೇಕೆಂದು ಕರೆ ನೀಡಿದರು.

ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರ ಇಂತಹ ವಿವಾದತ್ಮಕ ಹೇಳಿಕೆಗಳು ಹೊಸದೇನಲ್ಲ, ಇತರ ಧರ್ಮಗಳಿಗಿಂತ ಮೊದಲು ಭಾರತ ಸರ್ಕಾರವು ಚಂದ್ರನ ಮೇಲೆ ತನ್ನ ಮಾಲೀಕತ್ವವನ್ನು ಸ್ಥಾಪಿಸಿಬೇಕು ಮತ್ತು ಇದನ್ನು ಸಂಸತ್ತಿನ ನಿರ್ಣಯವಾಗಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

ಸ್ವಾಮಿ ಚಕ್ರಪಾಣಿ ಮಹಾರಾಜ್ ಟ್ವೀಟ್​​

ಸಂಸತ್ತಿನಲ್ಲಿ ಚಂದ್ರನನ್ನು ಹಿಂದೂ ಸನಾತನ ರಾಷ್ಟ್ರ ಎಂದು ಘೋಷಿಸಬೇಕು. ಚಂದ್ರಯಾನ 3 ಇಳಿದ ಸ್ಥಳವನ್ನು ಅದರ ರಾಜಧಾನಿ ‘ಶಿವಶಕ್ತಿ ಪಾಯಿಂಟ್’ ಆಗಿ ನಿರ್ಮಾಣ ಮಾಡಬೇಕು. ಇನ್ನು ಅಲ್ಲಿಗೆ ಜಿಹಾದಿ ಮನಸ್ಥಿತಿಯ ಯಾವುದೇ ಭಯೋತ್ಪಾದಕರು ಹೋಗಬಾರದು ಎಂದು ಹೇಳಿರುವ ವೀಡಿಯೊವನ್ನು ಟ್ವಿಟರ್​​​ನಲ್ಲಿ ಪೋಸ್ಟ್​​ ಮಾಡಲಾಗಿದೆ.

ಇದನ್ನೂ ಓದಿ:ಅಲ್ಲಿ ಶಿವಶಕ್ತಿ ಸ್ಥಳ ಎಂದು ನಾಮಕರಣ; ಇಲ್ಲಿ ಯಾದಗಿರಿಯಲ್ಲಿ ನವಜಾತ ಶಿಶುಗಳಿಗೆ ವಿಕ್ರಮ, ಪ್ರಗ್ಯಾನ್ ಹೆಸರಿಟ್ಟು ಸಂಭ್ರಮ!

ಚಕ್ರಪಾಣಿ ಅವರು ಈ ಹಿಂದೆ ಕರೋನವೈರಸ್ ಸಮಯದಲ್ಲಿ ದೆಹಲಿಯಲ್ಲಿ ‘ ಗೋಮುತ್ರ ಪಾರ್ಟಿ ನಡೆಸುವ ಮೂಲಕ ಎಲ್ಲ ಗಮನ ಸೆಳೆದಿದ್ದರು. ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರು ಸೇರಿ ಕೋವಿಡ್ -19 ಅನ್ನು ನಿವಾರಿಸಲು ಗೋಮೂತ್ರವನ್ನು ಸೇವಿಸಿದರು.

2018ರಲ್ಲಿ ಕೇರಳದಲ್ಲಿ ಸಂಭವಿಸಿದ ಪ್ರವಾಹಕ್ಕೆ ಸಂಬಂಧಿಸಿದಂತೆ ಚಕ್ರಪಾಣಿ ಅವರು ಒಂದು ವಿವಾದತ್ಮಕ ಹೇಳಿಕೆಯನ್ನು ನೀಡಿದ್ದರು. ರಾಜ್ಯದಲ್ಲಿ ಗೋಮಾಂಸ ತಿನ್ನುವವರಿಗೆ ಯಾರು ಸಹಾಯವನ್ನು ಮಾಡಬಾರದು ಎಂದು ಹೇಳಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

 

 

Published On - 12:01 pm, Mon, 28 August 23