ವಡೋದರ: ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ರಂಪಾಟ ಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಮಹಿಳೆ, ವಿಡಿಯೊ ವೈರಲ್

ವರದಿಗಳ ಪ್ರಕಾರ, ಆರಂಭದಲ್ಲಿ, ಮಹಿಳೆ ತನ್ನ ಕಾರನ್ನು ತಪಾಸಣೆಗಾಗಿ ನಿಲ್ಲಿಸಿದ ಪೊಲೀಸ್ ಅಧಿಕಾರಿಯನ್ನು ಚಿತ್ರೀಕರಿಸಲು ಪ್ರಯತ್ನಿಸಿದಳು. ಆಗ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ಚಿತ್ರೀಕರಿಸದಂತೆ ಕೇಳಿಕೊಂಡರು. ಆಕೆ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪೊಲೀಸ್ ಅಧಿಕಾರಿಯನ್ನು ಚಿತ್ರೀಕರಿಸುವುದನ್ನು ಮುಂದುವರೆಸಿದಳು. ಈ ವೇಳೆ ಪೊಲೀಸ್ ಅಧಿಕಾರಿ ಮಹಿಳೆಯ ಮೊಬೈಲ್ ಫೋನ್ ಕೊಡಲು ಒತ್ತಾಯಿಸಿದಾಗ ಜಗಳ ಶುರುವಾಗಿದೆ.

ವಡೋದರ: ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ರಂಪಾಟ ಮಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಮಹಿಳೆ, ವಿಡಿಯೊ ವೈರಲ್
ಪಾನಮತ್ತ ಮಹಿಳೆಯಿಂದ ರಸ್ತೆಯಲ್ಲಿ ರಂಪಾಟ
Follow us
ರಶ್ಮಿ ಕಲ್ಲಕಟ್ಟ
|

Updated on: Aug 28, 2023 | 1:05 PM

ವಡೋದರ ಆಗಸ್ಟ್ 28: ಮದ್ಯದ ಅಮಲಿನಲ್ಲಿ ಮಹಿಳೆಯೊಬ್ಬರು (Drunk Woman)ಪೊಲೀಸರ ಮೇಲೆ ಹಲ್ಲೆ ನಡೆಸಿ, ಬೈದು ಕೂಗಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್ ಆಗಿದೆ. ವಡೋದರದಲ್ಲಿ (Vadodara)ಈ ರೀತಿ ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸಿದ ಮಹಿಳೆಯನ್ನು ಬಂಧಿಸಲಾಗಿದೆ.  ಗುಜರಾತ್‌ನಲ್ಲಿ (Gujarat) ಮದ್ಯಪಾನ ನಿಷೇಧದ ನಂತರವೂ ಈಕೆಗೆ ಮದ್ಯ ಎಲ್ಲಿಂದ ಸಿಕ್ಕಿತು ಎಂಬುದು ಈಗ ಪ್ರಶ್ನೆಯಾಗಿದೆ. ಗುಜರಾತಿನಲ್ಲಿ ಮದ್ಯವನ್ನು ನಿಷೇಧಿಸಿದ ನಂತರವೂ ಅಲ್ಲಿ ಮದ್ಯ ಮಾರಾಟ ಮತ್ತು ಸೇವನೆ ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ವೈರಲ್ ಆಗಿರುವ ವಿಡಿಯೊದಲ್ಲಿ ಮಹಿಳೆ ರಸ್ತೆಯಲ್ಲಿ ಪೊಲೀಸರನ್ನು ನಿಂದಿಸಿ ಹೊಡೆಯಲು ಯತ್ನಿಸುತ್ತಿರುವುದನ್ನು ಕಾಣಬಹುದು.

ಆಕೆಯನ್ನು ಮಹಿಳಾ ಪೇದೆಯೊಬ್ಬರು ತಡೆದಿದ್ದಾರೆ. ಆದರೂ ಆಕೆ ಪೊಲೀಸರ ಮೇಲೆ ದಾಳಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾಳೆ. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಸಿಕ್ಕಿಬಿದ್ದಾಗ ಗಲಾಟೆ ಶುರುವಾಗಿತ್ತು. ಸದ್ಯ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ.

Drunk women from Vadodara attacks cops – Drink and Drive by u/arxym in vadodara

ವರದಿಗಳ ಪ್ರಕಾರ, ಆರಂಭದಲ್ಲಿ, ಮಹಿಳೆ ತನ್ನ ಕಾರನ್ನು ತಪಾಸಣೆಗಾಗಿ ನಿಲ್ಲಿಸಿದ ಪೊಲೀಸ್ ಅಧಿಕಾರಿಯನ್ನು ಚಿತ್ರೀಕರಿಸಲು ಪ್ರಯತ್ನಿಸಿದಳು. ಆಗ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ಚಿತ್ರೀಕರಿಸದಂತೆ ಕೇಳಿಕೊಂಡರು. ಆಕೆ ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಪೊಲೀಸ್ ಅಧಿಕಾರಿಯನ್ನು ಚಿತ್ರೀಕರಿಸುವುದನ್ನು ಮುಂದುವರೆಸಿದಳು. ಈ ವೇಳೆ ಪೊಲೀಸ್ ಅಧಿಕಾರಿ ಮಹಿಳೆಯ ಮೊಬೈಲ್ ಫೋನ್ ಕೊಡಲು ಒತ್ತಾಯಿಸಿದಾಗ ಜಗಳ ಶುರುವಾಗಿದೆ.

ಏತನ್ಮಧ್ಯೆ, ಇದಕ್ಕೂ ಮೊದಲು, ಮಹಿಳೆಯೊಬ್ಬರು ರಸ್ತೆಯಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡುತ್ತಿರುವ ಮತ್ತೊಂದು ವಿಡಿಯೊ ವೈರಲ್ ಆಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಆದರೆ, ಹೋರಾಟದ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ. ದೆಹಲಿಯ ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಗೆ ಹೊಡೆಯುತ್ತಿರುವುದು ವಿಡಿಯೊದಲ್ಲಿದೆ. ಹೆಚ್ಚಿನ ಜನರು ಮಧ್ಯಪ್ರವೇಶಿಸಿರು ಅವಳನ್ನು ಬೆದರಿಸಲು ಪ್ರಯತ್ನಿಸುತ್ತಾರೆ. ಆದರೆ ಮಹಿಳೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಆಕೆ ಕಾನ್ ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವುದು ವಿಡಿಯೊದಲ್ಲಿದೆ.

ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅಪರಾಧಿಗಳನ್ನು ಹೇಗೆ ಬಿಡುಗಡೆ ಮಾಡಿದಿರಿ?: ಗುಜರಾತ್‌ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

ಮದ್ಯದ ಮೇಲೆ ಕಟ್ಟುನಿಟ್ಟಿನ ನಿಷೇಧವನ್ನು ಹೊಂದಿರುವ ಗುಜರಾತ್‌ನ ದಾಹೋದ್‌ನಲ್ಲಿರುವ ಪಿಪ್ಲೋಡ್ ಪೊಲೀಸ್ ಠಾಣೆಯಿಂದ ವಶಪಡಿಸಿಕೊಂಡ ದೊಡ್ಡ ಪ್ರಮಾಣದ ಮದ್ಯ ಕಳ್ಳತನ ಪ್ರಕರಣ ಇತ್ತೀಚೆಗೆ ವರದಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಅದೇ ಪೊಲೀಸ್ ಠಾಣೆಯ ಒಬ್ಬ ಪೊಲೀಸ್ ಪೇದೆ ಮತ್ತು ಏಳು ಜಿಆರ್‌ಡಿ ಸಿಬ್ಬಂದಿ ಸೇರಿದಂತೆ ಒಟ್ಟು 15 ಜನರ ಮೇಲೆ ಆರೋಪ ಹೊರಿಸಲಾಗಿದೆ.

ಗುಜರಾತ್ ಪೊಲೀಸ್‌ನ ರಾಜ್ಯ ಮಾನಿಟರಿಂಗ್ ಸೆಲ್ (ಎಸ್‌ಎಂಸಿ) ಭಾನುವಾರ ಜಿಲ್ಲೆಯ ಹೋಟೆಲ್ ಬಳಿ ನಿಂತಿದ್ದ ಟ್ರಕ್‌ನಿಂದ 46.42 ಲಕ್ಷ ರೂಪಾಯಿ ಮೌಲ್ಯದ 28,336 ಬಾಟಲಿಗಳ ಮದ್ಯದ 916 ಬಾಕ್ಸ್‌ಗಳನ್ನು ಜಪ್ತಿ ಮಾಡಿದೆ. ಪಿಪ್ಲೋಡ್ ಪೊಲೀಸ್ ಠಾಣೆಯಲ್ಲಿ, ಅದೇ ಅಪರಾಧವನ್ನು ದಾಖಲಿಸಲಾಗಿದೆ. ವಶಪಡಿಸಿಕೊಂಡ ಮದ್ಯವನ್ನು ಪೊಲೀಸ್ ಠಾಣೆಗೆ ರವಾನಿಸಲಾಗಿದೆ.

ಸ್ವಲ್ಪ ಸಮಯದ ನಂತರ, ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದಾಹೋದ್‌ನ ರಾಜ್‌ದೀಪ್ ಸಿನ್ಹ್ ಝಾಲಾ ಅವರಿಗೆ ಪಿಪ್ಲೋಡ್ ಪೊಲೀಸ್ ಠಾಣೆಯಿಂದ ಕೆಲವು ಮದ್ಯದ ಪೆಟ್ಟಿಗೆಗಳು ಕಾಣೆಯಾಗಿವೆ ಎಂದು.ಮಾಹಿತಿ ಸಿಕ್ಕಿತ್ತು. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ನಡೆಸಿದಾಗ 23 ಮದ್ಯದ ಬಾಕ್ಸ್‌ಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ