ಅಲ್ಲಿ ಶಿವಶಕ್ತಿ ಸ್ಥಳ ಎಂದು ನಾಮಕರಣ; ಇಲ್ಲಿ ಯಾದಗಿರಿಯಲ್ಲಿ ನವಜಾತ ಶಿಶುಗಳಿಗೆ ವಿಕ್ರಮ, ಪ್ರಗ್ಯಾನ್ ಹೆಸರಿಟ್ಟು ಸಂಭ್ರಮ!
Yadgir: ಬಾಲಪ್ಪ ಹಾಗೂ ನಾಗಮ್ಮ ದಂಪತಿ ಮಗುವಿಗೆ ವಿಕ್ರಮ ಎಂದೂ, ಇನ್ನು ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದೂ ನಾಮಕರಣ ಮಾಡಲಾಗಿದೆ. ಅಂದಹಾಗೆ, ವಿಕ್ರಮ ಹೆಸರಿನ ಮಗು ಜನಿಸಿದ್ದು ಜುಲೈ 28 ರಂದು ಹಾಗೂ ಪ್ರಗ್ಯಾನ್ ಜನಿಸಿದ್ದು ಅಗಸ್ಟ್ 18 ರಂದು. ಅಗಸ್ಟ್ 24 ರಂದು ಈ ಎರಡೂ ಮಕ್ಕಳಿಗೆ ಕುಟುಂಬಸ್ಥರು ನಾಮಕರಣ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಲು ಈ ಹೆಸರುಗಳನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಕುಟುಂಬಸ್ಥರು ಹೆಮ್ಮೆಯಿಂದ ಹೇಳಿದ್ದಾರೆ.
ಯಾದಗಿರಿ: ಆಗಸ್ಟ್ 23 ರಂದು ಸಂಜೆ 6 ಗಂಟೆ ಮೂರು ನಿಮಿಷಕ್ಕೆ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ 3 ಬಾಹ್ಯಾಕಾಶ ಯೋಜನೆ (Chandrayaan 3) ಸಫಲವಾಗುತ್ತಿದ್ದಂತೆ ಇಡೀ ದೇಶ, ವಿಶ್ವ ಪುಳಕಿತಗೊಂಡಿದೆ. ನಾಡಿನ ಹಲವು ಆಸ್ಪತ್ರೆಗಳಲ್ಲಿ ಹುಟ್ಟಿದ ನವಜಾತ ಶಿಶುಗಳಿಗೆ (neonatal children) ಯಶಸ್ವಿ ಚಂದ್ರಯಾನ 3 ಯೋಜನೆಯ ಜಾತಕವನ್ನು ಆಧಾರವಾಗಿಟ್ಟುಕೊಂಡು ನಾಮಕರಣ ಮಾಡಲಾಗುತ್ತಿದೆ. ಇಂದು ಬೆಳಗಿನ ಜಾವದಲ್ಲಿ ಬೆಂಗಳೂರಿಗೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಂದು ಚಂದ್ರಯಾನ 2 ವೈಫಲ್ಯದ ಸ್ಥಳಕ್ಕೆ ತ್ರಿವರ್ಣ ಸ್ಥಳ ಎಂದೂ, ಚಂದ್ರಯಾನ 3 ಸಾಫಲ್ಯದ ಸ್ಥಳಕ್ಕೆ ಶಿವ ಶಕ್ತಿ ಸ್ಥಳ ಎಂದೂ ನಾಮಕರಣ ಮಾಡಿದ್ದಾರೆ. ಒಂದು ದೇಶವನ್ನು ಸಾಂಕೇತಿಕವಾಗಿ ಬಳಸಿದ್ದರೆ ಮತ್ತೊಂದನ್ನು ಹಿಂದೂ ಪುರಾಣದಲ್ಲಿ ಬರುವ, ಚಂದ್ರನ ಹೆಸರಿನೊಂದಿಗೆ ಜನಜನಿತವಾದ ಶಿವನನ್ನು ಆಧಾರವಾಗಿಟ್ಟುಕೊಂಡು ನಾಮಕರಣ ಮಾಡಿ ಮುಂದಿನ ಪೀಳಿಗೆಗೆ ಪ್ರೇರಣೆ ತುಂಬಿದ್ದಾರೆ ಪ್ರಧಾನಿ ಮೋದಿ.
ಇದೇ ಸಂದರ್ಭದಲ್ಲಿ ಯಾದಗಿರಿಯ (yadgir) ವಡಗೇರ ಪಟ್ಟಣದಲ್ಲಿ ಅಪರೂಪದ ಪ್ರಸಂಗ ನಡೆದಿದೆ. ಒಂದೇ ಕುಟುಂಬದಲ್ಲಿ ಜಸ್ಟ್ ಒಂದು ತಿಂಗಳ ಹಿಂದೆ ಇಬ್ಬರು ಗಂಡು ಮಕ್ಕಳು ಜನಿಸಿದ್ದಾರೆ. ಬಾಲಪ್ಪ ಹಾಗೂ ನಾಗಮ್ಮ ದಂಪತಿ ಮತ್ತು ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಕ್ಕಳಿವರು. ಯಾದಗಿರಿಯಲ್ಲಿ ಈ ಮಕ್ಕಳಿಗೆ ವಿಕ್ರಮ ಹಾಗೂ ಪ್ರಗ್ಯಾನ್ (Vikram, Pragyan) ಎಂಬ ಹೆಸರಿಟ್ಟು ನಾಮಕರಣ ಮಾಡಲಾಗಿದೆ. ತನ್ಮೂಲಕ ಈ ದಂಪತಿಗಳು ದೇಶಕ್ಕೆ ಮತ್ತು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: Shiv Shakti Point: ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಪಾಯಿಂಟ್ ಎಂದು ಪ್ರಧಾನಿ ಮೋದಿ ನಾಮಕರಣ
ಬಾಲಪ್ಪ ಹಾಗೂ ನಾಗಮ್ಮ ದಂಪತಿ ಮಗುವಿಗೆ ವಿಕ್ರಮ ಎಂದೂ, ಇನ್ನು ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದೂ ನಾಮಕರಣ ಮಾಡಲಾಗಿದೆ. ಅಂದಹಾಗೆ, ವಿಕ್ರಮ ಹೆಸರಿನ ಮಗು ಜನಿಸಿದ್ದು ಜುಲೈ 28 ರಂದು ಹಾಗೂ ಪ್ರಗ್ಯಾನ್ ಜನಿಸಿದ್ದು ಅಗಸ್ಟ್ 18 ರಂದು. ಅಗಸ್ಟ್ 24 ರಂದು ಈ ಎರಡೂ ಮಕ್ಕಳಿಗೆ ಕುಟುಂಬಸ್ಥರು ನಾಮಕರಣ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಚಂದ್ರಯಾನ 3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಲು ಈ ಹೆಸರುಗಳನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಕುಟುಂಬಸ್ಥರು ಹೆಮ್ಮೆಯಿಂದ ಹೇಳಿದ್ದಾರೆ. ಇನ್ನು ಊರ ಮಂದಿಯು ಮಕ್ಕಳು ಚಂದ್ರನಂತೆ ಬೆಳಗಲಿ, ಅದ್ಭುತ ಸಾಧನೆಗಳನ್ನು ಮಾಡಲು ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.
ಯಾದಗಿರಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:44 am, Sat, 26 August 23