ಜನಸಾಮಾನ್ಯರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ!

ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಾಮಾನ್ಯಜನರು ತತ್ತರಿಸಿದ್ದಾರೆ. ಆಹಾರ ಧಾನ್ಯ ಬೆಲೆ ಅಂತೂ ಗಗನಕ್ಕೇರಿದೆ. ಹೀಗಾಗಿ ದೀಪಾವಳಿ ಹಬ್ಬದ ವೇಳೆ ಆಹಾರ ಧಾನ್ಯ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಜನಸಾಮಾನ್ಯರಿಗೆ ದೀಪಾವಳಿ ಹಬ್ಬದ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ!
ಬೇಳೆಕಾಳು ವಿತರಣೆ ವಾಹನಕ್ಕೆ ಸಚಿವ ಪ್ರಲ್ಹಾದ ಜೋಶಿ ಚಾಲನೆ

Updated on: Oct 23, 2024 | 2:44 PM

ನವದೆಹಲಿ, (ಅಕ್ಟೋಬರ್ 23): ದಸರಾ ಹಬ್ಬ ಮುಗಿತು. ಇನ್ನೇನು ಬೆಳಕಿನ ಹಬ್ಬ ದೀಪಾವಳಿ ಬರುತ್ತಿದೆ. ಹೀಗಾಗಿ ಜನರು ದೀಪಾವಳಿಯನ್ನು ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರ ದೀಪಾವಳಿ ಹಬ್ಬಕ್ಕೆ ಜನಸಾಮಾನ್ಯರಿಗೊಂದು ಸಿಹಿ ಸುದ್ದಿಯೊಂದು ನೀಡಿದೆ. ಹೌದು.. ದೀಪಾವಳಿ ಹಬ್ಬದ ವೇಳೆ ಆಹಾರ ಧಾನ್ಯ ಬೆಲೆ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಗ್ರಾಹಕರಿಗೆ ಎಂಆರ್​ಪಿ ದರದಲ್ಲಿ ವಿತರಿಸಲು ಮುಂದಾಗಿದೆ.

ನವದೆಹಲಿಯಲ್ಲಿ ಎಂಆರ್​ಪಿ ದರದಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳು ಪೂರೈಕೆಗೆ ಕ್ರಮ ಕೈಗೊಂಡಿದ್ದು, ಈ ಮೂಲಕ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ತಗ್ಗಿಸಲು ಕ್ರಮ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹಬ್ಬ: ಹುಬ್ಬಳ್ಳಿ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ

ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಭಾರತ್ ಅಕ್ಕಿ, ಬೇಳೆ-ಕಾಳನ್ನು ವಾಹನಗಳ ಮೂಲಕ ವಿತರಿಸಲು ಕೇಂದ್ರ ಸರ್ಕಾರ ಚಾಲನೆ ನೀಡಿದೆ. ನವದೆಹಲಿಯ ಕೃಷಿ ಭವನದಲ್ಲಿ ಇಂದು(ಅಕ್ಟೋಬರ್ 23) ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಕಡಿಮೆ ದರದಲ್ಲಿ ಆಹಾರ ಧಾನ್ಯ ಪೂರೈಕೆ ವಾಹನಕ್ಕೆ ಚಾಲನೆ ನೀಡಿದರು.

ಇಂತಿದೆ ಎಂಆರ್ ಪಿ ಬೆಲೆ: ದೆಹಲಿ/ಎನ್‌ಸಿಆರ್ ನಿವಾಸಿಗಳಿಗಾಗಿ ಭಾರತ್ ಕಡಲೆ ಬೇಳೆ 70 ರೂ. ಕೆಜಿ, ಭಾರತ್ ಹೆಸರುಬೇಳೆ ಮ್ 107 ರೂ. ಕೆಜಿ ಮತ್ತು ಭಾರತ್ ತೊಗರಿಬೇಳೆ 89 ರೂ. ಕೆಜಿ ಬೆಲೆಯಲ್ಲಿ ಮಾರಟ ಮಾಡಲಾಗುತ್ತಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ತಿಳಿಸಿದರು.

ಗ್ರಾಹಕ ವ್ಯವಹಾರಗಳ ಇಲಾಖೆ ನೇತೃತ್ವದಲ್ಲಿ ಕೈಗೊಂಡ ಈ ಯೋಜನೆ ನಾಗರಿಕರ ಮೇಲೆ ಹೆಚ್ಚುತ್ತಿರುವ ಆಹಾರ ಧಾನ್ಯ, ಬೇಳೆ-ಕಾಳು ಬೆಲೆ ಹೊರೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ರಾಜ್ಯ ಸಚಿವರಾದ ಬಿ.ಎಲ್. ವರ್ಮಾ ಹಾಗೂ ಶ್ರೀಮತಿ ನಿಮುಬೇನ್ ಬಂಭಾನಿಯಾ ಉಪಸ್ಥಿತರಿದ್ದರು.

Published On - 2:43 pm, Wed, 23 October 24