20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಕೇವಲ 20 ರೂಪಾಯಿಗಾಗಿ ಜಗಳ ಉಂಟಾಗಿದ್ದು, ಇ-ರಿಕ್ಷಾ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಲ್ಲಿ ಹೊಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಅಮೀನಾಬಾದ್‌ನ ಮೌಲ್ವಿ ಗಂಜ್‌ನಲ್ಲಿ ಇ-ರಿಕ್ಷಾ ಚಾಲಕನೊಂದಿಗೆ ಮಹಿಳೆಯರು ಜಗಳವಾಡಿದ್ದಾರೆ. ಕೇವಲ 20 ರೂ.ಗೆ ಶುರುವಾದ ಜಗಳದ ನಂತರ ಮಹಿಳೆಯೊಬ್ಬರು ತಮ್ಮ ಚಪ್ಪಲಿಯನ್ನು ತೆಗೆದು ರಿಕ್ಷಾ ಚಾಲಕನಿಗೆ ನಡುರಸ್ತೆಯಲ್ಲೇ ಥಳಿಸಿದ್ದಾರೆ. ಈ ವೇಳೆ ರಿಕ್ಷಾ ಚಾಲಕ ಹಾಗೂ ಮಹಿಳೆ ನಡುವೆ ತೀವ್ರ ವಾಗ್ವಾದ ನಡೆದಿದೆ. ಅಲ್ಲಿದ್ದ ವ್ಯಕ್ತಿಯೊಬ್ಬ ಇಬ್ಬರ ನಡುವಿನ ಜಗಳವನ್ನು ವಿಡಿಯೋ ಮಾಡತೊಡಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos