ಆಯುಧ ಪೂಜೆ: ರಕ್ಷಣಾ ಸಚಿವರಿಂದ ಶಸ್ತ್ರಾಸ್ತ್ರ ಪೂಜೆ

|

Updated on: Oct 25, 2020 | 9:49 AM

ಪಶ್ಚಿಮ ಬಂಗಾಳ: ನವರಾತ್ರಿಯ ಕೊನೆಯ ದಿನ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹುತಾತ್ಮರಿಗೆ ನಮನ ಸಲ್ಲಿಸಿ, ಶಸ್ತ್ರಾಸ್ತ್ರ ಪೂಜೆ ಸಲ್ಲಿಸಿದ್ದಾರೆ. ಡಾರ್ಜಿಲಿಂಗ್​ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕ ಬಳಿ ತೆರಳಿ ರಾಜನಾಥ್​ಸಿಂಗ್ ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ. ಜೊತೆಗೆ ರಕ್ಷಣಾ ಸಚಿವರು ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ರು. ಈ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಉಪಸ್ಥಿತರಿದ್ದರು. ಸದ್ಯ ರಾಜನಾಥ್​ಸಿಂಗ್ ಅವರು ಪಶ್ಚಿಮ ಬಂಗಾಳ […]

ಆಯುಧ ಪೂಜೆ: ರಕ್ಷಣಾ ಸಚಿವರಿಂದ ಶಸ್ತ್ರಾಸ್ತ್ರ ಪೂಜೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ( ಪ್ರಾತಿನಿಧಿಕ ಚಿತ್ರ)
Follow us on

ಪಶ್ಚಿಮ ಬಂಗಾಳ: ನವರಾತ್ರಿಯ ಕೊನೆಯ ದಿನ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹುತಾತ್ಮರಿಗೆ ನಮನ ಸಲ್ಲಿಸಿ, ಶಸ್ತ್ರಾಸ್ತ್ರ ಪೂಜೆ ಸಲ್ಲಿಸಿದ್ದಾರೆ. ಡಾರ್ಜಿಲಿಂಗ್​ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕ ಬಳಿ ತೆರಳಿ ರಾಜನಾಥ್​ಸಿಂಗ್ ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ.

ಜೊತೆಗೆ ರಕ್ಷಣಾ ಸಚಿವರು ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ರು. ಈ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಉಪಸ್ಥಿತರಿದ್ದರು. ಸದ್ಯ ರಾಜನಾಥ್​ಸಿಂಗ್ ಅವರು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಪ್ರದೇಶಗಳು ಎರಡು ದಿನದ ಪ್ರವಾಸದಲ್ಲಿದ್ದಾರೆ.

Published On - 9:44 am, Sun, 25 October 20