ದೆಹಲಿ ಸೆಪ್ಟೆಂಬರ್ 09: ಬಾಲಕರ ಗುಂಪಿನಿಂದ ತನ್ನ ಮಗನನ್ನು ರಕ್ಷಿಸಲು ಯತ್ನಿಸಿದ 38 ವರ್ಷದ ವ್ಯಕ್ತಿಯೊಬ್ಬನನ್ನು ಶುಕ್ರವಾರ ಇಟ್ಟಿಗೆಗಳಿಂದ ಹೊಡೆದು ಕೊಂದಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓಖ್ಲಾ ಎರಡನೇ ಹಂತದ ಸಂಜಯ್ ಕಾಲೋನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಮೊಹಮ್ಮದ್ ಹನೀಫ್ (Mohammad Hanif) ಪೋರ್ಟರ್ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಅವರ ಇಬ್ಬರು ಅಪ್ರಾಪ್ತ ಪುತ್ರರು ಸಹ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ.
ಶುಕ್ರವಾರ ರಾತ್ರಿ 11:00 ಗಂಟೆಗೆ ಹನೀಫ್ ಅವರ 14 ವರ್ಷದ ಮಗ ಬೀದಿಯಲ್ಲಿ ನಿಲ್ಲಿಸಿದ್ದ ತನ್ನ ಬೈಕನ್ನು ಪಡೆಯಲು ಹೊರಗೆ ಹೋದಾಗ, ಅದರ ಮೇಲೆ ನಾಲ್ಕೈದು ಹುಡುಗರ ಗುಂಪು ತನ್ನ ದಾರಿಯನ್ನು ತಡೆದು ಕುಳಿತಿರುವುದನ್ನು ಕಂಡನು. ಅಲ್ಲಿಂದ ಸರಿಯುವಂತೆ ಹೇಳಿದಾಗ ಅವರು ನಿರಾಕರಿಸಿದರು. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.
ಜಗಳ ಸದ್ದು ಕೇಳಿ ಹನೀಫ್ ಮನೆಗೆಯಿಂದ ಹೊರಗೆ ಬಂದಿದ್ದಾರೆ. ಆಗ ಹುಡುಗರ ಗುಂಪು ತನ್ನ ಮಗನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ನೋಡಿದ್ದಾರೆ. ಜಗಳ ಬಿಡಸಲು ಬಂದಾಗ ಆ ಹುಡುಗರು ತಿರುಗಿಬಿದ್ದು ಹನೀಫ್ ಗೆ ಇಟ್ಟಿಗೆಯಿಂದ ಹೊಡೆದಿದ್ದಾರೆ.
SOS ಕರೆಗೆ ಸ್ಪಂದಿಸಿದ ಪೊಲೀಸ್ ತಂಡವು ತ್ವರಿತವಾಗಿ ಸ್ಥಳಕ್ಕೆ ತಲುಪಿದ್ದು, ಸಂತ್ರಸ್ತ ಹನೀಫ್ ನ್ನು AIIMS ನ ಟ್ರಾಮಾ ಸೆಂಟರ್‌ಗೆ ದಾಖಲಿಸಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: G20 summit: ಜಿ20 ಶೃಂಗಸಭೆಗೆ ಬಂದ ವಿದೇಶಿ ಅತಿಥಿಗಳಿಗೆ ವಿಶೇಷ ಸ್ಮರಣಿಕೆ, ಹಿತ್ತಾಳೆ ನಾಡಿನಿಂದ ದೆಹಲಿಗೆ ಬಂತು ಕಮಲ
18ನೇ ಜಿ20 ನಾಯಕರ ಶೃಂಗಸಭೆಗೆ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶೃಂಗಸಭೆಯ ಸಮಯದಲ್ಲಿ ನಗರದ ಮೇಲೆ ನಿಕಟ ನಿಗಾ ಇಡಲು 50,000 ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಶ್ವಾನದಳ ಮತ್ತು ಮೌಂಟೆಡ್ ಪೊಲೀಸರನ್ನು ನಿಯೋಜಿಸಲಾಗಿದೆ.
ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರ ಎರಡು ದಿನಗಳ ಸಭೆಯ ತಯಾರಿಗಾಗಿ ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ