ಹೋಳಿಯ ದಿನದಂದು ದೆಹಲಿಯಲ್ಲಿ ರಕ್ತದೋಕುಳಿ ಹರಿದಿದೆ, ವೇಗವಾಗಿ ಬಂದ ಥಾರ್ ಜೀಪ್ ಪಾದಚಾರಿಗಳ ಮೇಲೆ ಹರಿದಿದ್ದು ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದು, ಐದಕ್ಕಿಂತ ಹೆಚ್ಚು ಮಂದಿ ಮೃತಟ್ಟಿರುವ ಕುರಿತು ವರದಿಯಾಗಿದೆ. ಗಾಯಾಳುಗಳಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಇದೇ ವೇಳೆ 2 ವಾಹನಗಳಿಗೆ ಡಿಕ್ಕಿ ಹೊಡೆದಿದೆ, ಚಾಲಕನ ಅತಿವೇಗವೇ ಅಪಘಾತಕ್ಕೆ ಕಾರಣ ಎಂದಿರುವ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ಏಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರ ಪ್ರಕಾರ, ಗಾಯಗೊಂಡವರೆಲ್ಲರೂ ಶಿವ ಕ್ಯಾಂಪ್, ವಸಂತ ವಿಹಾರ್ ಮತ್ತು ಏಕತಾ ವಿಹಾರ್, ಆರ್ಕೆ ಪುರಂ ನಿವಾಸಿಗಳು. ಗಾಯಾಳುಗಳಿಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ (ಎಐಐಎಂಎಸ್) ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಪಘಾತದಲ್ಲಿ ಒಂದು ಥಾರ್, ಎರಡು ನಾಲ್ಕು ಚಕ್ರದ ವಾಹನಗಳು ಮತ್ತು ಮೂರು ಮಾರಾಟಗಾರರ ಸ್ಟಾಲ್‌ಗಳಿಗೆ ಹಾನಿಯಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಬುಧವಾರ ಸಂಜೆ 7:30ಕ್ಕೆ ದೆಹಲಿಯ ವಸಂತ್ ವಿಹಾರ್ ಪೊಲೀಸ್ ಠಾಣೆಗೆ ಘಟನೆಗೆ ಸಂಬಂಧಿಸಿದಂತೆ ಪಿಸಿಆರ್ ಕರೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ಓದಿ: Birthday Party: ಯುವಕರ ತಂಡ ಬರ್ತಡೆ ಪಾರ್ಟಿ ಮುಗಿಸಿಕೊಂಡು ಮೂರು ಕಾರುಗಳಲ್ಲಿ ಬರುವಾಗ ಅಪಘಾತ: ಒಬ್ಬ ಸಾವು, ಮತ್ತಿಬ್ಬರು ಗಂಭೀರ
ಈ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ