Delhi: ದೆಹಲಿಯಲ್ಲಿ ಕಟ್ಟಡ ಕುಸಿತ; ಇಬ್ಬರು ಮಕ್ಕಳ ಶವ ಪತ್ತೆ, ಹಲವರು ನಾಪತ್ತೆ

| Updated By: ಸುಷ್ಮಾ ಚಕ್ರೆ

Updated on: Sep 13, 2021 | 7:42 PM

Delhi Building Collapse: ಈ ಕಟ್ಟಡದಲ್ಲಿ ಕಾಮಗಾರಿ ಕೆಲಸ ನಡೆಯುತ್ತಿತ್ತು ಎನ್ನಲಾಗಿದೆ. ಹೀಗಾಗಿ, ಕಟ್ಟಡದೊಳಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರು ಅವಶೇಷಗಳಡಿ ಸಿಲುಕಿದ್ದಾರೆ. ಕಟ್ಟಡದ ಕೆಳಗೆ ನಿಲ್ಲಿಸಿದ್ದ ಕಾರು ಕೂಡ ಕಟ್ಟಡದ ಅಡಿಯಲ್ಲಿ ಸಿಲುಕಿದೆ.

Delhi: ದೆಹಲಿಯಲ್ಲಿ ಕಟ್ಟಡ ಕುಸಿತ; ಇಬ್ಬರು ಮಕ್ಕಳ ಶವ ಪತ್ತೆ, ಹಲವರು ನಾಪತ್ತೆ
ದೆಹಲಿಯಲ್ಲಿ 4 ಅಂತಸ್ತಿನ ಕಟ್ಟಡ ಕುಸಿತ
Follow us on

ನವದೆಹಲಿ: ನವದೆಹಲಿಯ ಸಬ್ಜಿ ಮಂಡಿ ಏರಿಯಾದಲ್ಲಿ 4 ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಮಕ್ಕಳು ಸೇರಿದಂತೆ ಹಲವು ಜನರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. ಅವರಲ್ಲಿ ಇಬ್ಬರು ಮಕ್ಕಳ ಶವಗಳನ್ನು ಹೊರಗೆ ತೆಗೆಯಲಾಗಿದೆ. 7 ಅಗ್ನಿಶಾಮಕದಳದ ವಾಹನಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ವೃದ್ಧರೊಬ್ಬರನ್ನು ರಕ್ಷಿಸಲಾಗಿದ್ದು, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗೆ 11.50ಕ್ಕೆ ದೆಹಲಿಯ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಈ ಕಟ್ಟಡದಲ್ಲಿ ಕಾಮಗಾರಿ ಕೆಲಸ ನಡೆಯುತ್ತಿತ್ತು ಎನ್ನಲಾಗಿದೆ. ಹೀಗಾಗಿ, ಕಟ್ಟಡದೊಳಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರು ಅವಶೇಷಗಳಡಿ ಸಿಲುಕಿದ್ದಾರೆ. ಕಟ್ಟಡದ ಕೆಳಗೆ ನಿಲ್ಲಿಸಿದ್ದ ಕಾರು ಕೂಡ ಕಟ್ಟಡದ ಅಡಿಯಲ್ಲಿ ಸಿಲುಕಿದೆ.

ಪ್ರತ್ಯಕ್ಷದರ್ಶಿಯ ಪ್ರಕಾರ, ಇದ್ದಕ್ಕಿದ್ದಂತೆ ಕಟ್ಟಡ ಶೇಕ್ ಆಗಿದ್ದು, ಆಗ ಕರೆಂಟ್ ಕೂಡ ಹೋಯಿತು. ನಂತರ ಕಟ್ಟಡ ನೆಲಸಮವಾಯಿತು. ಕಟ್ಟಡದ ಬಳಿ ಹೋಗುತ್ತಿದ್ದ ಮಕ್ಕಳ ಮೇಲೆ ಕೂಡ ಕಟ್ಟಡದ ಭಾಗಗಳು ಸಿಲುಕಿವೆ. ಕಾಮಗಾರಿ ವೇಳೆ ಕಟ್ಟಡದಲ್ಲಿದ್ದವರು ಈ ವೇಳೆ ಹೊರಬರಲಾರದೆ ಒಳಗೆ ಸಿಲುಕಿದ್ದಾರೆ. ಅವರ ಮೇಲೆ ಕಟ್ಟಡದ ಭಾಗಗಳು ಬಿದ್ದಿವೆ.

ಸಬ್ಜಿ ಮಂಡಿ ಪ್ರದೇಶದಲ್ಲಿ ಕಟ್ಟಡ ಕುಸಿದಿರುವ ಘಟನೆ ಬಹಳ ಬೇಸರದ ಸಂಗತಿ. ರಕ್ಷಣಾ ಕಾರ್ಯಾಚರಣೆಗೆ ದೆಹಲಿ ಆಡಳಿತಾಧಿಕಾರಿಗಳು ಬಹಳ ಪ್ರಯತ್ನಿಸುತ್ತಿದ್ದಾರೆ. ನಾನೇ ಖುದ್ದಾಗಿ ಪರಿಸ್ಥಿತಿಯ ಬಗ್ಗೆ ಗಮನ ಹರಿಸುತ್ತಿದ್ದೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಎನ್​ಡಿಆರ್​ಎಫ್​, ಎಂಸಿಡಿ, ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Delhi Rain: ದೆಹಲಿಯಲ್ಲಿ ವಿಪರೀತ ಮಳೆಗೆ ಜನ ತತ್ತರ; ಚರಂಡಿಯಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು

Delhi Rain: 121 ವರ್ಷಗಳಲ್ಲೇ ಅತ್ಯಂತ ಭೀಕರ ಮಳೆ ಕಂಡ ದೆಹಲಿ, ಇಂದು ಕೂಡ ಮಳೆಯಾಗುವ ಸಾಧ್ಯತೆ

(Delhi Building collapses in Sabzi Mandi area two Children dead Rescue Operation Underway)