Delhi Chalo: ಪ್ರತಿಭಟನಾನಿರತ ರೈತರಿಗೆ 12 ಪೆಟ್ಟಿಗೆ ಸೊಳ್ಳೆ ಬತ್ತಿ ಕೊಟ್ಟರು

ರೈತರಿಗೆ ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಸೊಳ್ಳೆ ಸಮಸ್ಯೆ ಇರುವುದನ್ನು ತಿಳಿದುಕೊಂಡ ನಾವು ಸೊಳ್ಳೆ ಕಾಯಿಲ್​ಗಳನ್ನು ತಂದಿದ್ದೇವೆ ಎಂದಿದ್ದಾರೆ ಸಹಾಬ್ ಸಿಂಗ್.

Delhi Chalo: ಪ್ರತಿಭಟನಾನಿರತ ರೈತರಿಗೆ 12 ಪೆಟ್ಟಿಗೆ ಸೊಳ್ಳೆ ಬತ್ತಿ ಕೊಟ್ಟರು
ಪ್ರತಿಭಟನೆಯಲ್ಲಿ ತೊಡಗಿರುವ ರೈತರು
Follow us
TV9 Web
| Updated By: ganapathi bhat

Updated on:Apr 07, 2022 | 10:45 AM

ದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವಿವಿಧ ಸಹಾಯಗಳು ಹರಿದುಬರುತ್ತಿದೆ. ಬಟ್ಟೆಗಳು, ಚಳಿಯಿಂದ ರಕ್ಷಿಸಿಕೊಳ್ಳಲು ಹಾಸಿಗೆಗಳು, ಆರೋಗ್ಯ ಸೇವೆಗಳು, ಅಂಗಡಿಗಳು ಜೊತೆಗೆ ಪಾದಗಳಿಗೆ ಮಸಾಜ್ ಮಾಡುವ ಸಾಧನಗಳು, ಪಿಜ್ಜಾ ಕೂಡ ಈ ಸಾಲಿನಲ್ಲಿ ಸೇರಿಕೊಂಡಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ಸೊಳ್ಳೆ ಬತ್ತಿ (Mosquito Coils).

ಪಂಜಾಬ್​ನ ಅಮೃತಸರದಿಂದ ಸಹಾಬ್ ಸಿಂಗ್ ಎನ್ನುವವರು 60 ಸೊಳ್ಳೆ ಕಾಯಿಲ್​ಗಳನ್ನು ಹೊಂದಿರುವ 12 ಪೆಟ್ಟಿಗೆಗಳನ್ನು ತಂದಿದ್ದಾರೆ. ಪ್ರತಿಭಟನಾನಿರತರನ್ನು ಸೊಳ್ಳೆಯಿಂದ ರಕ್ಷಿಸಲು ಈ ಕಾರ್ಯ ಮಾಡಿದ್ದಾರೆ ಸಹಾಬ್ ಸಿಂಗ್. ರೈತರಿಗೆ ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಸೊಳ್ಳೆ ಸಮಸ್ಯೆ ಇರುವುದನ್ನು ತಿಳಿದುಕೊಂಡ ನಾವು ಸೊಳ್ಳೆ ಕಾಯಿಲ್​ಗಳನ್ನು ತಂದಿದ್ದೇವೆ ಎಂದಿದ್ದಾರೆ.

ಇಂದು ಮಧ್ಯಾಹ್ನದ ವೇಳೆಗೆ ಸೊಳ್ಳೆ ಕಾಯಿಲ್​ಗಳನ್ನು ಹಂಚಿರುವ ಸಹಾಬ್ ಸಿಂಗ್ ಮತ್ತವರ ಗೆಳೆಯ ಸುರ್ಮೈಲ್ ಸಿಂಗ್, ಕಾಯಿಲ್ ಹಚ್ಚಿ ಸೊಳ್ಳೆಗಳನ್ನು ಓಡಿಸಿ ಎಂಬಂತೆ ಲೌಡ್​ಸ್ಪೀಕರ್​ನಲ್ಲಿ ಕೂಗಿದ್ದಾರೆ. ರೈತರನ್ನು ಕರೆದಿದ್ದಾರೆ. ಪ್ರತಿಭಟನೆಯಲ್ಲಿರುವ ರೈತರಿಗೆ ಇದು ನಮ್ಮ ಸೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುರ್ಮೈಲ್ ಸಿಂಗ್, ಪ್ರತಿಭಟನಾನಿರತರು ತೆರೆದ ಪ್ರದೇಶದಲ್ಲಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಹಲವು ಚರಂಡಿಗಳೂ ಇರುವುದರಿಂದ ಸೊಳ್ಳೆಗಳ ಕಾಟವಿದೆ. ಆದ್ದರಿಂದ ಸೊಳ್ಳೆ ಬತ್ತಿ ಹಂಚುತ್ತಿದ್ದೇವೆ. ಈಗಾಗಲೇ ಒಂದು ಪೆಟ್ಟಿಗೆ ಕಾಯಿಲ್ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ.

ರೈತರು ಕಳೆದ ಎರಡು ವಾರಗಳಿಗೂ ಹೆಚ್ಚು ಕಾಲದಿಂದ ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಹೊಸ ಕೃಷಿ ಕಾಯ್ದೆಗಳಿಂದ ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆ ಮೂಲಕ ರೈತರಿಗೆ ಸಿಗುವ ಕನಿಷ್ಠ ಬೆಂಬಲ ಬೆಲೆಗೂ ತೊಂದರೆಯಾಗಲಿದೆ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.

Delhi Chalo: ಸಿಂಘು ಗಡಿಯಲ್ಲಿ ಪಿಜ್ಜಾ ತಿಂದ ಪ್ರತಿಭಟನಾ ರೈತರು

Published On - 9:26 pm, Sun, 13 December 20

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್