ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ 10 ಅಂಶಗಳ ಕ್ರಿಯಾ ಯೋಜನೆ ಬಿಡುಗಡೆ ಮಾಡಿದ ಅರವಿಂದ ಕೇಜ್ರಿವಾಲ್

| Updated By: ರಶ್ಮಿ ಕಲ್ಲಕಟ್ಟ

Updated on: Oct 05, 2021 | 12:15 PM

Arvind Kejriwal: ಕೃಷಿ ತ್ಯಾಜ್ಯ ಸುಡುವುದರಿಂದ ರಾಜಧಾನಿಯ ಗಾಳಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರ ಮತ್ತು ನೆರೆಯ ರಾಜ್ಯಗಳಿಗೆ ವಿನಂತಿಸಿದ್ದು, ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು.

ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ 10 ಅಂಶಗಳ ಕ್ರಿಯಾ ಯೋಜನೆ ಬಿಡುಗಡೆ ಮಾಡಿದ ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us on

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  (Arvind Kejriwal)ಸೋಮವಾರ 10 ಅಂಶಗಳ ಚಳಿಗಾಲದ ಕ್ರಿಯಾ ಯೋಜನೆಯನ್ನು(winter action plan) ಬಿಡುಗಡೆ ಮಾಡಿದರು. ದೆಹಲಿಯ ವಾಯು ಮಾಲಿನ್ಯವನ್ನು ಎದುರಿಸಲು ಈ ಯೋಜನೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಹತ್ತಿರದ ರಾಜ್ಯಗಳಲ್ಲಿನ ರೈತರು ತ್ಯಾಜ್ಯ ಸುಡುವುದು ಸೇರಿದಂತೆ ಹಲವಾರು ಅಂಶಗಳಿಂದಾಗಿ ದೆಹಲಿಯಲ್ಲಿ ಚಳಿಗಾಲದ ಅವಧಿಯಲ್ಲಿ ವಾತಾವರಣ ಹದಗೆಡುತ್ತದೆ ಎಂದು ಅವರು ಹೇಳಿದ್ದಾರೆ.  “ನಾನು ಸೆಪ್ಟೆಂಬರ್ 15 ರಿಂದ ದೆಹಲಿಯ ವಾಯು ಗುಣಮಟ್ಟದ ರೆಕಾರ್ಡಿಂಗ್‌ಗಳನ್ನು ಪೋಸ್ಟ್ ಮಾಡುತ್ತಿದ್ದೇನೆ ಮತ್ತು ದೆಹಲಿಯ ಮಾಲಿನ್ಯದ ಮಟ್ಟವು  ನಿಯಂತ್ರಣದಲ್ಲಿರುವುದನ್ನು ನಾವು ನೋಡಿದ್ದೇವೆ. ಆದರೆ ಕೇಂದ್ರ ಮತ್ತು ನೆರೆಯ ರಾಜ್ಯ ಸರ್ಕಾರಗಳು ರೈತರಿಗೆ ಹೆಚ್ಚಿನ ಸಹಾಯ ಮಾಡದ ಕಾರಣ, ರೈತರು ಕೃಷಿ ತ್ಯಾಜ್ಯ ಸುಡುವುದರಿಂದ ದೆಹಲಿಯ ಗಾಳಿಯ ಗುಣಮಟ್ಟವು ಸ್ವಲ್ಪಮಟ್ಟಿಗೆ ಕುಸಿಯಲು ಆರಂಭವಾಗುತ್ತದೆ ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

ಕೃಷಿ ತ್ಯಾಜ್ಯ ಸುಡುವುದರಿಂದ ರಾಜಧಾನಿಯ ಗಾಳಿಯ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ಕೇಂದ್ರ ಸರ್ಕಾರ ಮತ್ತು ನೆರೆಯ ರಾಜ್ಯಗಳಿಗೆ ವಿನಂತಿಸಿದ್ದು, ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಹೇಳಿದರು.

“ಆರೋಪ- ಪ್ರತ್ಯಾರೋಪ ಮಾಡುವ ಬದಲು, ನಾವು ಕೃಷಿ ತಾಜ್ಯ ಸುಡುವುದಕ್ಕೆಗೆ ಪರಿಹಾರವನ್ನು ಕಂಡುಕೊಂಡಿದ್ದೇವೆ. ನಮ್ಮ ವಿನಂತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲು ನಾವು ಕೇಂದ್ರ ಸರ್ಕಾರವನ್ನು ವಿನಂತಿಸಿದ್ದೇವೆ ಮತ್ತು ಈ ಪರ್ಯಾಯ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಆಶಿಸುತ್ತೇವೆ” ಎಂದು ಕೇಜ್ರಿವಾಲ್ ಹೇಳಿದರು.


ಚಳಿಗಾಲದಲ್ಲಿ ದೆಹಲಿಯ ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ಕೇಜ್ರಿವಾಲ್ ಪಟ್ಟಿ ಮಾಡಿರುವ 10 ಅಂಶಗಳು ಇಲ್ಲಿವೆ:

1. ಕೃಷಿ ತ್ಯಾಜ್ಯ ಸುಡುವುದು: ನಾವು ಪೂಸಾ ಇನ್ಸ್ಟಿಟ್ಯೂಟ್ ಸಹಾಯದಿಂದ ಡಿಕೊಂಪೊಸರ್ (ದ್ರಾವಣ) ತಯಾರಿಸಿದ್ದೇವೆ. ಈ ದ್ರಾವಣವನ್ನು ಒಮ್ಮೆ ಉಳಿದಿರುವ ಬೆಳೆ (ಬೆಳೆ ತ್ಯಾಜ್ಯ) ಮೇಲೆ ಸಿಂಪಡಿಸಿದರೆ ಅದನ್ನು ಸುಡುವ ಅಗತ್ಯವನ್ನು ನಿವಾರಿಸುತ್ತದೆ. ದೆಹಲಿ ಸರ್ಕಾರ ಇದನ್ನು ಉಚಿತವಾಗಿ ಸಿಂಪಡಿಸುತ್ತಿದೆ, ಪಂಜಾಬ್ ಮತ್ತು ಇತರ ರಾಜ್ಯಗಳು ಕೂಡ ಇದನ್ನು ಮಾಡಬಹುದು.
2. ಧೂಳು ನಿಗ್ರಹ ಅಭಿಯಾನವನ್ನು ಬಲಪಡಿಸಬೇಕು: ನಾವು 75 ತಂಡಗಳನ್ನು ರಚಿಸಿದ್ದೇವೆ ಅದು ಇಡೀ ರಾಷ್ಟ್ರೀಯ ರಾಜಧಾನಿಯನ್ನು ಸಮೀಕ್ಷೆ ಮಾಡುತ್ತದೆ ಮತ್ತು ಸರ್ಕಾರದ ಧೂಳಿನ ಮಾಲಿನ್ಯದ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ದಂಡ ವಿಧಿಸುತ್ತದೆ.
3. ಕಸ ಸುಡುವುದನ್ನು ನಿಲ್ಲಿಸುವುದು: ಇದಕ್ಕಾಗಿ 250 ತಂಡಗಳನ್ನು ರಚಿಸಲಾಗಿದೆ.
4. ಪಟಾಕಿ ನಿಷೇಧ
5. ಹೊಗೆ ಗೋಪುರಗಳ ಸ್ಥಾಪನೆ: ಈ ಗೋಪುರಗಳು ಇಲ್ಲಿಯವರೆಗೆ ಉತ್ತಮ ಫಲಿತಾಂಶ ತೋರಿಸಿವೆ ಮತ್ತು ಅಂತಹ ಹೆಚ್ಚಿನ ರಚನೆಗಳನ್ನು ಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳುವ ಮೊದಲು ಫಲಿತಾಂಶಗಳನ್ನು ವಿಶ್ಲೇಷಿಸುವುದನ್ನು ಮುಂದುವರಿಸುತ್ತೇವೆ
6. ಆಪ್ ಬಳಸಿ ಮಾಲಿನ್ಯ ಹಾಟ್ ಸ್ಪಾಟ್ ಗಳ ಮೇಲ್ವಿಚಾರಣೆ
7. ಹಸಿರು ವಾರ್ ರೂಂಗಳನ್ನು ಬಲಪಡಿಸಲಾಗುತ್ತಿದೆ. ದೆಹಲಿ ಸರ್ಕಾರ 50 ಪರಿಸರ ಎಂಜಿನಿಯರ್‌ಗಳನ್ನು ನೇಮಿಸಿದೆ ಎಂದು ಕೇಜ್ರಿವಾಲ್ ಹೇಳಿದರು.
8. ಗ್ರೀನ್ ಡೆಲ್ಲಿ ಆಪ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಇದನ್ನು ಬಳಸಲು ಪ್ರೋತ್ಸಾಹಿಸಲಾಗುತ್ತದೆ ಮತ್ತು ಯಾವುದೇ ಉಲ್ಲಂಘನೆಯ ದೂರುಗಳನ್ನು ಸಲ್ಲಿಸಬಹುದು ಎಂದು ಕೇಜ್ರಿವಾಲ್ ಹೇಳಿದರು.
9. ಪರಿಸರ ತ್ಯಾಜ್ಯ ಉದ್ಯಾನ: ದೇಶದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಉದ್ಯಾನ ಇದಾಗಿದೆ ಎಂದು ಕೇಜ್ರಿವಾಲ್ ಹೇಳಿದರು. ಯೋಜನೆಗೆ ಇಪ್ಪತ್ತು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ.
10. ವಾಹನ ಮಾಲಿನ್ಯ: ಕಾರುಗಳು ಮತ್ತು ಇತರ ವಾಹನಗಳಿಂದ ಉಂಟಾಗುವ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಟ್ರಾಫಿಕ್ ಜಾಮ್ ಅನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಎಎಪಿ ಮುಖ್ಯಸ್ಥರು ಹೇಳಿದರು.

ದೆಹಲಿಯಾದ್ಯಂತ 64 ಜನದಟ್ಟಣೆ ಸ್ಥಳಗಳನ್ನು ಗುರುತಿಸಲಾಗಿದೆ ಮತ್ತು ಇಲ್ಲಿ ಟ್ರಾಫಿಕ್ ಮತ್ತು ಪರಿಣಾಮವಾಗಿ ಮಾಲಿನ್ಯವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. “ನಾವು ಮಾಲಿನ್ಯ ನಿಯಂತ್ರಣ (Pollution Under Control) ಪ್ರಮಾಣಪತ್ರಗಳ ಪರಿಶೀಲನೆಯನ್ನು ತೀವ್ರಗೊಳಿಸಿದ್ದೇವೆ ಮತ್ತು 10 ವರ್ಷಕ್ಕಿಂತ ಹಳೆಯ ಡೀಸೆಲ್ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ಕೇಜ್ರಿವಾಲ್ ಹೇಳಿದರು.


10 ಅಂಶಗಳ ವಿಧಾನವನ್ನು ಪಟ್ಟಿ ಮಾಡುವ ಮೊದಲು, ಕೇಜ್ರಿವಾಲ್ ದೆಹಲಿಯಲ್ಲಿ ಮಾಲಿನ್ಯ ಮಟ್ಟವನ್ನು ತಗ್ಗಿಸಲು ತನ್ನ ಸರ್ಕಾರ ಮಾಡಿದ ಕೆಲಸದ ಬಗ್ಗೆಯೂ ಮಾತನಾಡಿದ್ದಾರೆ.

1. ದೆಹಲಿ 24×7 ವಿದ್ಯುತ್ ಒದಗಿಸಿದೆ. ಇದು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾವಿರಾರು ಡೀಸೆಲ್ ಜನರೇಟರ್ ಸೆಟ್ ಗಳ ಬಳಕೆಯನ್ನು ನಿಯಂತ್ರಿಸಿದೆ.
2. ನಾವು ಧೂಳಿನ ಮಾಲಿನ್ಯದ ಮಟ್ಟವನ್ನು ತಗ್ಗಿಸುವತ್ತ ಗಮನ ಹರಿಸುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು, ನಿರ್ಮಾಣ ಸ್ಥಳಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
3. ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಗಳು ದೆಹಲಿಗೆ ಬರುವ ಟ್ರಕ್‌ಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡಿವೆ.
4. ಎರಡು ಕಲ್ಲಿದ್ದಲಿನ ಉಷ್ಣ ವಿದ್ಯುತ್ ಸ್ಥಾವರಗಳನ್ನು ಮುಚ್ಚಲಾಗಿದೆ
5. ಶೇ100 ಕೈಗಾರಿಕೆಗಳನ್ನು ಪೈಪ್​​ಡ್ ನ್ಯಾಚುರಲ್ ಗ್ಯಾಸ್ (PNG)ಗೆ ಪರಿವರ್ತಿಸುವುದು.
6. ದೆಹಲಿ ಸರ್ಕಾರವು ನಿರ್ಮಾಣ ಯೋಜನೆಗಳಿಗಾಗಿ ಕತ್ತರಿಸುತ್ತಿರುವ ಮರಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮರ ಕಸಿ ನೀತಿಯನ್ನು ತಂದಿತು.
7. ಗ್ರೀನ್ ದೆಹಲಿ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಜನರು ತಮ್ಮ ದೂರುಗಳನ್ನು ಸಲ್ಲಿಸಬಹುದು
8. ಗ್ರೀನ್ ವಾರ್ ರೂಮ್ ಅನ್ನು ಮಾಡಲಾಗಿದೆ, ಅಲ್ಲಿ ದೆಹಲಿಯಲ್ಲಿ ಮಾಲಿನ್ಯದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
9. ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿಯಲ್ಲಿ ಜಾರಿಗೊಳಿಸಲಾಗಿದೆ
10. ಎಲೆಕ್ಟ್ರಿಕ್ ವಾಹನ ನೀತಿಯನ್ನು ನಗರದಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ: Video: ಪ್ರತಿಭಟನಾನಿರತ ರೈತರ ಮೇಲೆ ಎರಡು ವಾಹನಗಳು ಹರಿದ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್​; ಪ್ರಧಾನಿ ಮೋದಿ ವಿರುದ್ಧ ಟೀಕೆ