ಕೇಂದ್ರ ಗೃಹ ಸಚಿವರಿಗೆ ಒಎಸ್ಡಿ ಎಂದು ಹೇಳಿಕೊಂಡು ಗಂಗಾ ಎಕ್ಸ್ಪ್ರೆಸ್ ವೇ(Ganga Express Way) ಯೋಜನೆಯಲ್ಲಿ ಹಿರಿಯ ಅಧಿಕಾರಿಯಾಗಿ ನೇಮಕಗೊಳ್ಳಲು ಯತ್ನಿಸದ ಆರೋಪದ ಮೇಲೆ ಸಿವಿಲ್ ಇಂಜಿನಿಯರ್ ಒಬ್ಬರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮೀರತ್ ನಿವಾಸಿಯಾದ 48 ವರ್ಷದ ರಾಬಿನ್ ಉಪಾಧ್ಯಾಯ ಅವರು 25 ವರ್ಷಗಳಿಂದ ಹಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಉಪಾಧ್ಯಾಯ ಅವರು ಉಪಾಧ್ಯಾಯ ಅವರು ಎಕ್ಸ್‌ಪ್ರೆಸ್‌ವೇ ಯೋಜನೆಯ ಯೋಜನಾ ಸಂಯೋಜಕ ಹುದ್ದೆ ಗಿಟ್ಟಿಸಿಕೊಳ್ಳಲು ಮುಂದಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ಷತ್ ಶರ್ಮಾ ಎಂಬುವವರಿಗೆ ಅನುಮಾನ ಬಂದು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಇದರಿಂದ ವಿಷಯ ಹೊರಗೆ ಬಂದಿದೆ.
ರಾಬಿನ್ ಅವರನ್ನು ಅಧಿಕಾರಿಯಾಗಿ ನೇಮಿಸಿಕೊಳ್ಳುವಂತೆ ರಾಜೀವ್ ಕುಮಾರ್ ಎಂಬುವವರಿಂದ ಇ-ಮೇಲ್ ಬಂದಿತ್ತು, ಬಳಿಕ ವಿಚಾರಿಸಿದಾಗ ಆ ಇ-ಮೇಲ್ ಐಡಿ ಸುಳ್ಳು ಎಂಬುದು ಗೊತ್ತಾಗಿದೆ. ತನಿಖೆ ನಡೆಸಿದ ಪೊಲೀಸರು ಶನಿವಾರ ಅವರನ್ನು ಬಂಧಿಸಿದ್ದಾರೆ.
ವಿಚಾರಣೆ ನಡೆಸಿದಾಗ, ಉಪಾಧ್ಯಾಯ ಅವರು ಸಿವಿಲ್ ಇಂಜಿನಿಯರ್ ಆಗಿದ್ದು, ಸಿವಿಲ್ ನಿರ್ಮಾಣ ಯೋಜನೆಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದರು ಮತ್ತು ಕೆಲಸ ಪಡೆಯಲು ಸುಳ್ಳು ಹೇಳಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ