ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal), ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಮತ್ತು ಆಪ್ ಹಿರಿಯ ನಾಯಕರಾದ ಸಂಜಯ್ ಸಿಂಗ್, ಸಂಸದ ರಾಘವ್ ಚಡ್ಡಾ ಶುಕ್ರವಾರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರನ್ನು ಮುಂಬೈನ ಅವರ ನಿವಾಸ ಮಾತೋಶ್ರೀಯಲ್ಲಿ ಭೇಟಿಯಾದರು. ಎಎಪಿ ನಾಯಕರನ್ನು ಬರಮಾಡಿಕೊಳ್ಳಲು ಆದಿತ್ಯ ಠಾಕ್ರೆ ಕೂಡ ಹಾಜರಿದ್ದರು. ಉದ್ಧವ್ ಠಾಕ್ರೆ ಕೇಜ್ರಿವಾಲ್ ಮತ್ತು ಎಎಪಿ ನಾಯಕರನ್ನು ತಮ್ಮ ನಿವಾಸದಲ್ಲಿ ಚಹಾಕ್ಕೆ ಆಹ್ವಾನಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಶಿವಸೇನಾ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ಏಕನಾಥ್ ಶಿಂಧೆ ಅವರಿಗೆ ನೀಡಲಾಗಿದೆ. ಇತ್ತ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಆಪಾದಿತ ಮದ್ಯ ಹಗರಣ ಮತ್ತು ಸ್ನೂಪಿಂಗ್ ಪ್ರಕರಣದಲ್ಲಿ ಸಿಲುಕಿರುವ ಸಮಯದಲ್ಲಿ ಈ ಸಭೆಯು ಬಂದಿದೆ.
“ಕೊರೊನಾ ಸಾಂಕ್ರಾಮಿಕವು ಉತ್ತುಂಗದಲ್ಲಿದ್ದಾಗ, ಮಹಾರಾಷ್ಟ್ರದಲ್ಲಿ ಉದ್ಧವ್ ಜಿ ಅದನ್ನು ನಿಯಂತ್ರಿಸಿದ ರೀತಿ ಶ್ಲಾಘನೀಯವಾಗಿತ್ತು. ಇಂದು ನಾವು ಕೇಂದ್ರ ಸರ್ಕಾರವು ಬಂಡವಾಳಶಾಹಿಗಳನ್ನು ಉಳಿಸಲು ದೇಶವನ್ನು ಅಡಮಾನವಿಡುವ ವಿಷಯವನ್ನು ಚರ್ಚಿಸಿದ್ದೇವೆ. ನಾವು ಪರಸ್ಪರ ಏನನ್ನಾದರೂ ಕಲಿತಾಗ ಮಾತ್ರ ದೇಶ ಪ್ರಗತಿ ಹೊಂದುತ್ತದೆ ಎಂದು ಅವರು ಹೇಳಿದ್ದಾರೆ.
AAP national convener and Delhi CM Arvind Kejriwal, Punjab CM Bhagwant Mann and party MP Raghav Chadha met Uddhav Thackeray in Mumbai today. pic.twitter.com/c2TUOHiRyz
— ANI (@ANI) February 24, 2023
ದೆಹಲಿಯಲ್ಲಿ ಮೇಯರ್ ಚುನಾವಣೆ ಕುರಿತು ಮಾತನಾಡಿದ ಮುಖ್ಯಮಂತ್ರಿ ದೆಹಲಿಯ ಜನರು ನಮಗೆ ಅವಕಾಶ ನೀಡಿದ್ದಾರೆ, ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಡ್ಡಿಪಡಿಸಿದೆ” ಎಂದು ಹೇಳಿದರು.
ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವುದಾಗಿ ಹೇಳಿದರು.
“ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರನ್ನು ಭೇಟಿಯಾಗಬೇಕು ಎಂಬ ಆಸೆ ಬಹಳ ದಿನಗಳಿಂದ ಇತ್ತು. ನಾವು ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಉದ್ಧವ್ ಜಿ ಸಿಂಹದ ಮಗ (ಬಾಳಾಸಾಹೇಬ್).ಉದ್ಧವ್ ಠಾಕ್ರೆ ಅವರಿಗೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ದೇಶದಲ್ಲಿನಹಲವು ಸಂಗತಿಗಳ ಬಗ್ಗೆ ಚರ್ಚಿಸಲಾಗಿದೆ” ಎಂದು ಕೇಜ್ರಿವಾಲ್ ಹೇಳಿದರು.
ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ‘ಬಿಜೆಪಿಯವರು ಗೂಂಡಾಗಿರಿ ಮಾಡುತ್ತಾರೆ, ಇಡಿ ಮತ್ತು ಸಿಬಿಐ ಅನ್ನು ಹೇಡಿಗಳು ಬಳಸುತ್ತಾರೆ, ದೆಹಲಿಯ ಜನರು ನಮಗೆ ಎಂಸಿಡಿಯಲ್ಲಿ ಬಹುಮತ ನೀಡಿದ್ದಾರೆ, ಸ್ಥಾಯಿ ಸಮಿತಿಯಲ್ಲಿ ನಮಗೆ ಬಹುಮತವಿದೆ, ಬಿಜೆಪಿ ಮಾತ್ರ ಚುನಾವಣೆ ಬಗ್ಗೆ ಯೋಚಿಸುತ್ತದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ