ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಚುನಾವಣೆಗೆ ಕೇವಲ ಒಂದು ದಿನ ಮುಂಚಿತವಾಗಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಇಂದು (ಡಿಸೆಂಬರ್ 3 ಶನಿವಾರ) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರವನ್ನು ಟೀಕಿಸಿದ್ದಾರೆ. ಕೇಜ್ರಿವಾಲ್ ಸರ್ಕಾರದ ಹಲವಾರು ಹಗರಣಗಳ ಕುರಿತು ಆರೋಪಿಸಿದರು. ದೆಹಲಿ ಸರ್ಕಾರವು ಲಾಲು ಪ್ರಸಾದ್ ಯಾದವ್ ಲೂಟಿ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದು ಹೇಳಿದ್ದರು.
ಕೇಜ್ರಿವಾಲ್ ಅವರು ಪ್ರಸ್ತುತ ಲಾಲು ಅವರ ರೀತಿಯಲ್ಲಿ ದೆಹಲಿಯಲ್ಲಿ ಲೂಟಿ ಮಾಡುತ್ತಿದ್ದಾರೆ. ಕೇಜ್ರಿವಾಲ್ ಅವರು ಚುನಾವಣೆಗಳು ಬಂದಾಗ ಮಾತ್ರ ಭಗವಾನ್ ರಾಮನನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ, ತುಕ್ಡೆ-ತುಕ್ಡೆ ಗ್ಯಾಂಗ್ ನಾಯಕರೊಂದಿಗೆ ಮೆರವಣಿಗೆಯಲ್ಲಿ ಇರುತ್ತಾರೆ ಎಂದು ಸಚಿವ ಅನುರಾಗ್ ಠಾಕೂರ್ ದೆಹಲಿಯಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಹೇಳಿದರು.
ಎಎಪಿ ಪಕ್ಷ ಭ್ರಷ್ಟಾಚಾರದ ಪಕ್ಷ ಎಂದು ಅನುರಾಗ್ ಠಾಕೂರ್ ಕರೆದಿದ್ದಾರೆ. ರಾಷ್ಟ್ರ ರಾಜಧಾನಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರು ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಯಾವುದನ್ನೂ ಜನರು ಮುಂದೆ ತರುವ ಪ್ರಯತ್ನವನ್ನು ಮಾಡಿಲ್ಲ ಎಂದು ಠಾಕೂರ್ ಹೇಳಿದರು. ಇತ್ತೀಚೆಗೆ ಕೇಜ್ರಿವಾಲ್ ಅವರ ಪಕ್ಷದ ಸಚಿವ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಾರೆ ಎಂದು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್ ಅವರ ರಾಜಕೀಯ ವಂಚಕರು, ದೆಹಲಿ ಜನರಿಗೆ ಮೋಸ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಇದನ್ನು ಓದಿ: ನೀವೇಕೆ ಈಗ ಮಫ್ಲರ್ ಹಾಕಿಕೊಳ್ಳುತ್ತಿಲ್ಲ?; ಮಹಿಳೆಯ ಪ್ರಶ್ನೆಗೆ ಅರವಿಂದ್ ಕೇಜ್ರಿವಾಲ್ ಉತ್ತರ ಹೀಗಿತ್ತು
ಕೇಜ್ರಿವಾಲ್ ಅವರು ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಅವರ ಸರ್ಕಾರದ ಒದೊಂದು ಭ್ರಷ್ಟಾಚಾರದ ಸತ್ಯಗಳು ಹೊರ ಬರುತ್ತಿದೆ, ಅವರ ಸರ್ಕಾರ ಭ್ರಷ್ಟಾಚಾರದ ಮೂಲಕ ನಡೆಸುತ್ತಿದ್ದಾರೆ. ಕೇಜ್ರಿವಾಲ್ 16 ಸ್ಮಾಗ್ ಟವರ್‌ಗಳನ್ನು ಸ್ಥಾಪಿಸುವುದಾಗಿ ಹೇಳಿದರು, ಆದರೆ ಅದು ಸಾಧ್ಯವಾಗಲಿಲ್ಲ. ಎರಡನ್ನು ಸ್ಥಾಪಿಸಿ, ಅದು ಕೂಡ ಈಗ ಕಾರ್ಯನಿರ್ವಹಿಸುತ್ತಿಲ್ಲ. ನಾವು ಪಂಜಾಬ್‌ನಲ್ಲಿ ಸರ್ಕಾರವನ್ನು ರಚಿಸಿದರೆ, ಹುಲ್ಲು ಸುಡುವುದು ನಿಲ್ಲುತ್ತದೆ ಎಂದು ಅವರು ಹೇಳಿದರು. ಆದರೆ ಅದು ಕೂಡ ಇಲ್ಲ, ಅಲ್ಲಿ ಈಗ ಹೆಚ್ಚು ಮಾಲಿನ್ಯವಿದೆ ಎಂದು ಠಾಕೂರ್ ತಿಳಿಸಿದರು. ಡಿಸೆಂಬರ್ 4 ರಂದು ನಡೆಯಲಿರುವ ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿ (MCD) ಚುನಾವಣೆಗೆ ಒಂದು ದಿನ ಮೊದಲು ಕೇಜ್ರಿವಾಲ್ ವಿರುದ್ಧ ಠಾಕೂರ್ ಅವರ ವಾಗ್ದಾಳಿ ನಡೆಸಿದ್ದಾರೆ.
Published On - 6:20 pm, Sat, 3 December 22