ಎಣ್ಣೆ ಪಾರ್ಟಿಗೆಂದು ಕರೆದ್ರೆ, ಮನೆ ಮಾಲೀಕನ ಹೆಂಡತಿ ಜತೆಗೆ ಹೋಗಿ ಮಲಗಿದ ಬಾಡಿಗೆದಾರ, ಬರ್ಬರ ಕೊಲೆ

ಉತ್ತರ ದೆಹಲಿಯ ಗುಲಾಬಿ ನಗರದಲ್ಲಿ 17 ವರ್ಷದ ಜತಿನ್ ಎಂಬಾತನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗೆ ಕಾರಣ ಬಹಿರಂಗಗೊಂಡಿದೆ. ಅಂದು ರಾತ್ರಿ ಮಾಲೀಕ ಮುಖೇಶ್​ ಹಾಗೂ ಬಾಡಿಗೆದಾರ ಜಿತಿನ್ ಒಟ್ಟಿಗೆ ಮದ್ಯಪಾನ ಮಾಡಿದ್ದಾರೆ. ಮುಖೇಶ್​ಗೆ ಎಚ್ಚರವಾದಾಗ ಜಿತಿನ್ ತನ್ನ ಪತ್ನಿ ಜತೆ ಹಾಸಿಗೆಯಲ್ಲಿ ಮಲಗಿದ್ದನ್ನು ನೋಡಿ ಕೋಪಗೊಂಡು ಸಿಲಿಂಡರ್​ನಿಂದ ಹಲ್ಲೆ ನಡೆಸಿದ್ದಾನೆ, ಜಿತಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಪೊಲೀಸರು 25 ವರ್ಷದ ಮುಖೇಶ್ ಠಾಕೂರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಎಣ್ಣೆ ಪಾರ್ಟಿಗೆಂದು ಕರೆದ್ರೆ, ಮನೆ ಮಾಲೀಕನ ಹೆಂಡತಿ ಜತೆಗೆ ಹೋಗಿ ಮಲಗಿದ ಬಾಡಿಗೆದಾರ, ಬರ್ಬರ ಕೊಲೆ
Crime

Updated on: May 23, 2025 | 12:49 PM

ನವದೆಹಲಿ, ಮೇ 23: ಉತ್ತರ ದೆಹಲಿಯ ಗುಲಾಬಿ ನಗರದಲ್ಲಿ 17 ವರ್ಷದ ಜತಿನ್ ಎಂಬಾತನನ್ನು ಕ್ರೂರವಾಗಿ ಹತ್ಯೆ(Murder) ಮಾಡಲಾಗಿದೆ. ಕೊಲೆಗೆ ಕಾರಣ ಬಹಿರಂಗಗೊಂಡಿದೆ. ಅಂದು ರಾತ್ರಿ ಮಾಲೀಕ ಮುಖೇಶ್​ ಹಾಗೂ ಬಾಡಿಗೆದಾರ ಜಿತಿನ್ ಒಟ್ಟಿಗೆ ಮದ್ಯಪಾನ ಮಾಡಿದ್ದಾರೆ. ಮುಖೇಶ್​ಗೆ ಎಚ್ಚರವಾದಾಗ ಜಿತಿನ್ ತನ್ನ ಪತ್ನಿ ಜತೆ ಹಾಸಿಗೆಯಲ್ಲಿ ಮಲಗಿದ್ದನ್ನು ನೋಡಿ ಕೋಪಗೊಂಡು ಸಿಲಿಂಡರ್​ನಿಂದ ಹಲ್ಲೆ ನಡೆಸಿದ್ದಾನೆ, ಜಿತಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಪೊಲೀಸರು 25 ವರ್ಷದ ಮುಖೇಶ್ ಠಾಕೂರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಮೇ 19 ರ ಸಂಜೆ ಮುಖೇಶ್ ಮತ್ತು ಜತಿನ್ ಮದ್ಯ ಸೇವಿಸುತ್ತಿದ್ದರು, ರಾತ್ರಿ ಮುಖೇಶ್ ಜತಿನ್ ಮತ್ತು ಅವರ ಪತ್ನಿ ಸುಧಾ ಅವರನ್ನು ಆಕ್ಷೇಪಾರ್ಹ ಸ್ಥಿತಿಯಲ್ಲಿ ನೋಡಿದರು. ಅದಾದ ಕೂಡಲೇ ಮೂವರ ನಡುವೆ ತೀವ್ರ ವಾಗ್ವಾದ ನಡೆಯಿತು. ಮರುದಿನ, ಮೇ 20 ರ ಬೆಳಗ್ಗೆ, ಸುಧಾ ಕಾರ್ಖಾನೆಗೆ ಕೆಲಸಕ್ಕೆ ಹೋಗಿದ್ದಳು. ಅದಾದ ನಂತರ, ಜತಿನ್ ಮತ್ತು ಮುಖೇಶ್ ನಡುವೆ ಮತ್ತೆ ಕಲಹ ಆರಂಭವಾಯಿತು. ಆ ಸಮಯದಲ್ಲಿ, ಮುಖೇಶ್ ಜತಿನ್ ಅವರಿಗೆ ಸಣ್ಣ ಗ್ಯಾಸ್ ಸಿಲಿಂಡರ್ ನಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಜತಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮನೆಯ ಹೊರಗಿನ ಚರಂಡಿಯಲ್ಲಿ ರಕ್ತ ಕಂಡ ನಂತರ ಸ್ಥಳೀಯರು ಮೊದಲು ಮುಖೇಶ್ ಮನೆಗೆ ಕರೆ ಮಾಡಿದರು. ಆದರೆ ಮನೆ ಒಳಗಿನಿಂದ ಬೀಗ ಹಾಕಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಆಗಮಿಸಿ, ಬಾಗಿಲು ಒಡೆದು, ಜತಿನ್ ಅವರ ದೇಹವನ್ನು ಹೊರತೆಗೆದರು. ಮುಖೇಶ್ ದೇಹದ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿತ್ತು. ವಿಚಾರಣೆ ನಡೆಸಿದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ
ಪ್ರೀತಿ-ಪ್ರೇಮವೆಂದು ಸುತ್ತಾಡಿ ಕೈಕೊಟ್ಟ ಪ್ರೇಯಸಿ:ಪ್ರಾಣಕಳೆದುಕೊಂಡ ಪ್ರಿಯಕರ
ತನ್ನ ಕುಟುಂಬ ಸದಸ್ಯರು, ಪ್ರೇಯಸಿ ಸೇರಿ ಐವರನ್ನು ಕೊಂದ ಅಫಾನ್
ಪ್ರಿಯಕರ ಬೇರೊಬ್ಬಳ ಜತೆ ಮಾತನಾಡಿದ್ದಕ್ಕೆ ಪ್ರಿಯತಮೆ ಆತ್ಮಹತ್ಯೆ
ಪ್ರೇಯಸಿ ಸಿಟ್ಟುಮಾಡಿಕೊಂಡು ಹೋಗಿದ್ದಕ್ಕೆ ಪ್ರಿಯಕರ ದುರಂತ ಸಾವು!

ಮತ್ತಷ್ಟು ಓದಿ: ಗಂಡನನ್ನು ಮರಕ್ಕೆ ಕಟ್ಟಿ ಹೊಡೆದು ಕೊಂದು, ಗಂಗಾ ನದಿಗೆ ಎಸೆದ ಹೆಂಡತಿ

ಜತಿನ್ 10 ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ದೆಹಲಿಗೆ ಬಂದಿದ್ದ ಎಂದು ತಿಳಿದುಬಂದಿದೆ. ಜತಿನ್ ಠಾಕೂರ್ ಮುಖೇಶ್​ ಅವರ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸಲು ಪ್ರಾರಂಭಿಸಿದರು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿ ಮುಖೇಶ್ ನನ್ನು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಠಾಕೂರ್ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಪೊಲೀಸರು ಬರುವವರೆಗೂ ನೆರೆಹೊರೆಯವರು ಆತನನ್ನು ಹಿಡಿದಿಟ್ಟುಕೊಳ್ಳಲು ಯಶಸ್ವಿಯಾದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ