ದೆಹಲಿ: ದೆಹಲಿ ಪೊಲೀಸರೊಂದಿಗೆ ನಾಗರಿಕ ಸಂಸ್ಥೆಯು ಸ್ಥಳಕ್ಕೆ ಆಗಮಿಸಿದ ಕೆಲವೇ ಗಂಟೆಗಳ ನಂತರ ಶಾಹೀನ್ ಬಾಗ್‌ನಲ್ಲಿ ( Shaheen Bagh) ಅತಿಕ್ರಮಣ ವಿರೋಧಿ ಕಾರ್ಯಾಚರಣೆಯನ್ನು (anti-encroachment drive)ಸೋಮವಾರ ಸ್ಥಗಿತಗೊಳಿಸಲಾಯಿತು. ಶಾಹೀನ್ ಬಾಗ್‌ನ ಸ್ಥಳೀಯ ನಿವಾಸಿಗಳು ಸೋಮವಾರ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಮಾಡಲು ಬಂದ ಬುಲ್ಡೋಜರ್ (bulldozer)ಎದುರು ನಿಂತು ಘೋಷಣೆಗಳನ್ನು ಕೂಗಿದರು. ಉದ್ದೇಶಿತ ಧ್ವಂಸ ಕಾರ್ಯಾಚರಣೆ ವಿರುದ್ಧ ಪ್ರತಿಭಟಿಸಲು ಜನರು ಇಲ್ಲಿ ಸೇರಿದ್ದಾರೆ ಎಂದು ಸ್ಥಳೀಯ ನಿವಾಸಿ ಯಾಸಿರ್ ಇಮಾಮ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಶಾಹೀನ್ ಬಾಗ್ ಬಳಿಯ ಕಾಳಿಂದಿ ಕುಂಜ್-ಜಾಮಿಯಾ ನಗರ ಪ್ರದೇಶದಲ್ಲಿ ಮತ್ತು ಶ್ರೀನಿವಾಸಪುರಿಯಲ್ಲಿ ಕಳೆದ ವಾರ ಶುಕ್ರವಾರದವರೆಗೆ ಸಾಕಷ್ಟು ಪೊಲೀಸ್ ಪಡೆಯ ಅಲಭ್ಯತೆಯಿಂದಾಗಿ ಅತಿಕ್ರಮಣ ವಿರೋಧಿ ಅಭಿಯಾನಗಳನ್ನು ರದ್ದುಗೊಳಿಸಲಾಗಿದೆ.ನಾಗರಿಕ ಸಂಸ್ಥೆಯ ಬುಲ್ಡೋಜರ್‌ಗಳು ಪ್ರದೇಶವನ್ನು ತೊರೆದ ನಂತರ ಶಾಹೀನ್ ಬಾಗ್‌ನಲ್ಲಿನ ಅತಿಕ್ರಮಣ ವಿರೋಧಿ ಅಭಿಯಾನವು ಸ್ಥಗಿತಗೊಂಡಿತು. ಅವರು ತಮ್ಮ ಧ್ವಂಸ ಕಾರ್ಯಾಚರಣೆ ಮುಗಿಸಿ ತೆರಳಿದ್ದಾರೆ ಎಂದು ಡಿಸಿಪಿ (ಆಗ್ನೇಯ) ಇಶಾ ಪಾಂಡೆ ಹೇಳಿದ್ದಾರೆ.
Delhi | Locals continue to protest at Shaheen Bagh amid the anti-encroachment drive here. pic.twitter.com/JoXKV9d527
ಇದನ್ನೂ ಓದಿ— ANI (@ANI) May 9, 2022
ಶಾಹೀನ್ ಬಾಗ್ ಧ್ವಂಸ ಕಾರ್ಯಾಚರಣೆ ವಿರುದ್ಧ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಪ್ರತಿಭಟನೆ
ಶಾಹೀನ್ ಬಾಗ್‌ನಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ಪ್ರತಿಭಟಿಸುವಲ್ಲಿ ಸ್ಥಳೀಯರೊಂದಿಗೆ ಸೇರಿಕೊಂಡ ಎಎಪಿ ಶಾಸಕ ಅಮಾನತುಲ್ಲಾ ಖಾನ್, ಜನರು ತನ್ನ ಮನವಿಯ ಮೇರೆಗೆ ಅತಿಕ್ರಮಣ ಮಾಡಿದ್ದ ಜಾಗಗಳನ್ನು ತೆರವುಗೊಳಿಸಿದ್ದಾರೆ ಎಂದು ಹೇಳಿದ್ದಾರೆ. “ಇಲ್ಲಿನ ಮಸೀದಿಯ ಹೊರಗಿರುವ ‘ವಾಝು ಖಾನಾ’ ಮತ್ತು ಶೌಚಾಲಯಗಳನ್ನು ಈ ಹಿಂದೆ ಪೊಲೀಸರ ಸಮ್ಮುಖದಲ್ಲಿ ತೆಗೆಯಲಾಗಿತ್ತು. ಯಾವುದೇ ಅತಿಕ್ರಮಣ ಇಲ್ಲದಿರುವಾಗ, ಅವರು ಇಲ್ಲಿಗೆ ಬಂದಿದ್ದೇಕೆ? ಬರೀ ರಾಜಕೀಯ ಮಾಡುವುದಕ್ಕಾಗಿಯೇ ಎಂದು ಖಾನ್ ಪ್ರಶ್ನಿಸಿದ್ದಾರೆ.
ಶಾಹೀನ್ ಬಾಗ್ ಧ್ವಂಸ ಕಾರ್ಯಚರಣೆ ವಿರುದ್ಧದ ಅರ್ಜಿಗಳ ವಿಚಾರಣೆ ಮಧ್ಯಾಹ್ನ 2 ಗಂಟೆಗೆ
ಶಾಹೀನ್ ಬಾಗ್‌ನಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ವಿರುದ್ಧದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಸೋಮವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸಲಿದೆ. ಉತ್ತರ ಎಂಸಿಡಿ ಕಳೆದ ತಿಂಗಳು ಜಹಾಂಗೀರ್‌ಪುರಿಯಲ್ಲಿ ಇದೇ ರೀತಿಯ ಕಾರ್ಯಾಚರಣೆಯನ್ನು ನಡೆಸಿತ್ತು. ದೆಹಲಿ ಹೈಕೋರ್ಟ್‌ನ ನಿರ್ದೇಶನದ ಅನುಸಾರವಾಗಿ ಜಹಾಂಗೀರ್‌ಪುರಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ನಾಗರಿಕ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:56 pm, Mon, 9 May 22