Shaheen Bagh Demolition Drive ಶಾಹೀನ್ ಬಾಗ್ ತೆರವು ಕಾರ್ಯಾಚರಣೆ: ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ

ಸಿಪಿಐ(ಎಂ) ಏಕೆ ಅರ್ಜಿ ಸಲ್ಲಿಸುತ್ತಿದೆ?" ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್, ರಾಜಕೀಯ ಪಕ್ಷದ ಇಚ್ಛೆಯ ಮೇರೆಗೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

Shaheen Bagh Demolition Drive ಶಾಹೀನ್ ಬಾಗ್ ತೆರವು ಕಾರ್ಯಾಚರಣೆ: ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ
ಸುಪ್ರೀಂಕೋರ್ಟ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 09, 2022 | 4:14 PM

ದೆಹಲಿ: ಶಾಹೀನ್ ಬಾಗ್ (Shaheen Bagh) ಪ್ರದೇಶದಲ್ಲಿ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (South Delhi Municipal Corporation) ನಡೆಸುತ್ತಿರುವ ಅತಿಕ್ರಮಣ ವಿರೋಧಿ ಕಾರ್ಯಾಚರಣೆ (anti-encroachment drive) ವಿರುದ್ಧದ ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂಕೋರ್ಟ್ (Supreme Court) ಸೋಮವಾರ ನಿರಾಕರಿಸಿದೆ. ಈ ವಿಚಾರದಲ್ಲಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗುವಂತೆ ಸಿಪಿಐ(ಎಂ) ಮತ್ತು ಇತರ ಅರ್ಜಿದಾರರಿಗೆ ಸುಪ್ರೀಂ ಹೇಳಿದೆ. ಸೋಮವಾರ ಬೆಳಗ್ಗೆ ಭಾರೀ ಕೋಲಾಹಲಕ್ಕೆ ಕಾರಣವಾದ ಶಾಹೀನ್ ಬಾಗ್ ಪ್ರದೇಶದಲ್ಲಿ ನಾಗರಿಕ ಸಂಸ್ಥೆಯು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಪ್ರಶ್ನಿಸುವ ಅರ್ಜಿಯನ್ನು ಆಲಿಸಲು ಉನ್ನತ ಅಧಿಕಾರಿಗಳು ಈ ಹಿಂದೆ ಒಪ್ಪಿಕೊಂಡಿದ್ದರು. ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಭಾಗವಾಗಿ ಈ ಪ್ರದೇಶಕ್ಕೆ ಆಗಮಿಸಿದ ವಾಹನ ಮತ್ತು ಬುಲ್ಡೋಜರ್‌ಗಳ ಸಂಚಾರವನ್ನು ಸ್ಥಳೀಯರು ನಿರ್ಬಂಧಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಸಿಪಿಐ(ಎಂ)ನ ದೆಹಲಿ ಘಟಕ ಮತ್ತು ಹಾಕರ್ಸ್ ಯೂನಿಯನ್ ಶನಿವಾರ ಸಲ್ಲಿಸಿದ ಅರ್ಜಿಯು ನಾಗರಿಕ ಸಂಸ್ಥೆಯ ಅತಿಕ್ರಮಣ ವಿರೋಧಿ ಕಾರ್ಯಾಚರಣೆ “ನೆಲದ ನ್ಯಾಯ, ಕಾನೂನುಗಳು ಮತ್ತು ಸಂವಿಧಾನದ ತತ್ವಗಳ ಉಲ್ಲಂಘನೆ” ಎಂದು ಬಣ್ಣಿಸಿದೆ. “ಸಿಪಿಐ(ಎಂ) ಏಕೆ ಅರ್ಜಿ ಸಲ್ಲಿಸುತ್ತಿದೆ?” ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್, ರಾಜಕೀಯ ಪಕ್ಷದ ಇಚ್ಛೆಯ ಮೇರೆಗೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಸಿಪಿಐ(ಎಂ) ಮನವಿ ಹಿಂಪಡೆದಿದೆ. ಪ್ರತಿವಾದಿಗಳಾದ ಎಸ್‌ಡಿಎಂಸಿ ಮತ್ತು ಇತರರು ಆರೋಪಿಸಿದಂತೆ ತಾವು ಅನಧಿಕೃತ ನಿವಾಸಿಗಳು ಅಥವಾ ಅತಿಕ್ರಮಣದಾರರಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಸಿಪಿಎಂ ತನ್ನ ಅರ್ಜಿಯನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಹೈಕೋರ್ಟ್‌ಗೆ ಮೊರೆ ಹೋಗುವಂತೆ ಕೇಳಿಕೊಂಡ ಸುಪ್ರೀಂಕೋರ್ಟ್, “ನೊಂದವರು ಬಂದಿದ್ದರೆ” ತಾವು ಮಧ್ಯಪ್ರವೇಶ ಮಾಡುತ್ತಿದ್ದೆವು ಎಂದು ಹೇಳಿದೆ. “ದಯವಿಟ್ಟು ಕನಿಷ್ಠ ಎರಡು ದಿನಗಳ ಕಾಲ (ಕೆಡವುವಿಕೆಗೆ) ತಡೆಯಾಜ್ಞೆ ನೀಡಿ” ಎಂದು ಸಿಪಿಎಂ ಒತ್ತಾಯಿಸಿದ್ದು, ನಿಮ್ಮ ಇಚ್ಛೆಯಂತೆ ಅಲ್ಲ ಎಂದು ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ.

“ನಾವು ಜೀವನೋಪಾಯವನ್ನು ರಕ್ಷಿಸಲು ಇದ್ದೇವೆ ಆದರೆ ಈ ರೀತಿ ಅಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದಾದ ನಂತರ “ನೀವು ಹಿಂತೆಗೆದುಕೊಳ್ಳಿ ಅಥವಾ ನಿಮ್ಮ ಮನವಿಯನ್ನು ನಾವು ವಜಾಗೊಳಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ. “ನೀವು ಹೈಕೋರ್ಟ್‌ಗೆ ಹೋಗುವುದಿಲ್ಲ, ನೀವು ನೇರವಾಗಿ ಸುಪ್ರೀಂಕೋರ್ಟ್‌ಗೆ ಬಂದಿದ್ದೀರಿ, ಇದು ಏನು? ರಾಜಕೀಯ ಪಕ್ಷವು ಇಲ್ಲಿಗೆ ಬಂದು ಏನು ಮಾಡಬೇಕೆಂದು ಹೇಳುತ್ತಿದೆ ಎಂದು ಪ್ರಶ್ನಿಸಿದೆ. ಪ್ರತಿಯೊಬ್ಬರಿಗೂ ತಮ್ಮ ಮನೆ ಕೆಡವಿದರೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ಪರವಾನಗಿ ನೀಡಲಾಗುವುದಿಲ್ಲ, ಅದು ಕಾನೂನುಬಾಹಿರವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಇದನ್ನೂ ಓದಿ
Image
Delhi Demolition Drive ಶಾಹೀನ್ ಬಾಗ್ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಸ್ಥಗಿತ; ತೆರವು ವಿರುದ್ಧದ ಅರ್ಜಿಗಳ ವಿಚಾರಣೆ ನಡೆಸಲಿದೆ ಸುಪ್ರೀಂಕೋರ್ಟ್

ಕಾನೂನು ಉಲ್ಲಂಘನೆಯಾದರೆ ಮಧ್ಯಪ್ರವೇಶಿಸುತ್ತೇವೆ, ರಾಜಕೀಯ ಪಕ್ಷಗಳ ಒತ್ತಾಯಕ್ಕೆ ಮಣಿದು ಈ ರೀತಿ ಅರ್ಜಿಗಳನ್ನು ಹಾಕಬೇಡಿ. ಇಲ್ಲಿಯೇ ದಿನವಿಡೀ ಕಳೆದಿದ್ದೀರಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ನೀವು ಹೈಕೋರ್ಟ್‌ಗೆ ಹೋಗಬಹುದಿತ್ತು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ಹಿಂದೆ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯಲ್ಲಿ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ಕೆಡವಿದ ನಂತರ ಹಲವಾರು ನಾಗರಿಕ ಹಕ್ಕುಗಳ ಗುಂಪುಗಳು ಮತ್ತು ವಿರೋಧ ಪಕ್ಷಗಳಿಂದ ಟೀಕೆಗೆ ಒಳಗಾಗಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಈ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:29 pm, Mon, 9 May 22