ಅಬಕಾರಿ ನೀತಿ ಪ್ರಕರಣ: ಬಿಆರ್‌ಎಸ್ ನಾಯಕಿ ಕವಿತಾ ಬಂಧನ ಮಾರ್ಚ್ 26 ರವರೆಗೆ ವಿಸ್ತರಣೆ

|

Updated on: Mar 23, 2024 | 4:26 PM

ಇಡಿ ಪರ ಹಾಜರಾದ ವಕೀಲ ಜೊಹೆಬ್ ಹೊಸೈನ್ ಅವರು ಬಿಆರ್‌ಎಸ್ ನಾಯಕಿಯ ಐದು ದಿನಗಳ ಇಡಿ ಕಸ್ಟಡಿಗೆ ಕೋರಿದ್ದರು .ಕವಿತಾ ಅವರು ಪ್ರಸ್ತುತ ಪ್ರಕರಣದಲ್ಲಿ ರೂ100 ಕೋಟಿ ಕಿಕ್‌ಬ್ಯಾಕ್ ಪಾವತಿಸಲು ಸಂಚು ರೂಪಿಸಿದ್ದಾರೆ ಎಂದು ಇಡಿ ಹೇಳಿದೆ.ಇದೀಗ ದೆಹಲಿ ವಿಶೇಷ ನ್ಯಾಯಾಲಯವು ಭಾರತ್ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರಿಗೆ ಮಾರ್ಚ್ 26 ರವರೆಗೆ ಮೂರು ದಿನಗಳ ಇಡಿ ಕಸ್ಟಡಿಗೆ ಆದೇಶಿಸಿದೆ

ಅಬಕಾರಿ ನೀತಿ ಪ್ರಕರಣ: ಬಿಆರ್‌ಎಸ್ ನಾಯಕಿ ಕವಿತಾ ಬಂಧನ ಮಾರ್ಚ್ 26 ರವರೆಗೆ ವಿಸ್ತರಣೆ
ಕೆ.ಕವಿತಾ
Follow us on

ದೆಹಲಿ  ಮಾರ್ಚ್ 23: ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ವಿಶೇಷ ನ್ಯಾಯಾಲಯವು ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ ಕವಿತಾ (K kavitha) ಅವರಿಗೆ ಮಾರ್ಚ್ 26 ರವರೆಗೆ ಮೂರು ದಿನಗಳ ಇಡಿ ಕಸ್ಟಡಿಗೆ ಆದೇಶಿಸಿದೆ. ರಿಮಾಂಡ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಕವಿತಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.  ಜಾರಿ ನಿರ್ದೇಶನಾಲಯದ (ED) ರಿಮಾಂಡ್ ಅವಧಿ ಮುಗಿದ ನಂತರ ಕವಿತಾ ಅವರನ್ನು ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಹಾಜರುಪಡಿಸಲಾಯಿತು. ಈ ಹಿಂದೆ ಆಕೆಯನ್ನು ಮಾರ್ಚ್ 23 ರವರೆಗೆ ಐದು ದಿನಗಳ ಇಡಿ ರಿಮಾಂಡ್‌ಗೆ ಕೋರ್ಟ್ ಕಳುಹಿಸಿತ್ತು.

ಇಡಿ ಪರ ಹಾಜರಾದ ವಕೀಲ ಜೊಹೆಬ್ ಹೊಸೈನ್ ಅವರು ಬಿಆರ್‌ಎಸ್ ನಾಯಕಿಯ ಐದು ದಿನಗಳ ಇಡಿ ಕಸ್ಟಡಿಗೆ ಕೋರಿದ್ದರು. ಕವಿತಾ ಅವರು ಪ್ರಸ್ತುತ ಪ್ರಕರಣದಲ್ಲಿ ರೂ100 ಕೋಟಿ ಕಿಕ್‌ಬ್ಯಾಕ್ ಪಾವತಿಸಲು ಸಂಚು ರೂಪಿಸಿದ್ದಾರೆ ಎಂದು ಇಡಿ ಹೇಳಿದೆ.

ಇಡಿ ಹೇಳಿದ್ದೇನು ?

ಕವಿತಾ ಅವರ ಮೊಬೈಲ್ ಫೋನ್‌ನಲ್ಲಿರುವ ಡೇಟಾವನ್ನು ಹೊರತೆಗೆಯಲಾಗಿದೆ ಮತ್ತು ವಿಶ್ಲೇಷಿಸಲಾಗಿದೆ ಇಡಿ ತನಿಖೆಯ ಸಮಯದಲ್ಲಿ ಮೊಬೈಲ್ ಡೇಟಾವನ್ನು ಅಳಿಸಲಾಗಿದೆ ಎಂದು ತೋರಿಸಲು ಪುರಾವೆಗಳಿವೆ ಎಂದು ಹೊಸೈನ್ ನ್ಯಾಯಾಲಯಕ್ಕೆ ತಿಳಿಸಿದರು. ಇಡಿ ಆಕೆಯ ಸೋದರಳಿಯನಿಗೆ ಹಾಜರಾಗುವಂತೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದೆ. ಆದರೆ ಅವನು ಹಾಜರಾಗಲಿಲ್ಲ ಎಂದು ಹೊಸೈನ್ ಹೇಳಿದರು. ಅವರು ಅಪರಾಧದ ಆದಾಯವನ್ನು ಬಳಸಿಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸಹಕರಿಸದ ಕಾರಣ, ಇಡಿ ಹಲವಾರು ಸ್ಥಳಗಳಲ್ಲಿ ಹುಡುಕಾಟ ನಡೆಸುತ್ತಿದೆ ಎಂದು ಹೊಸೈನ್ ಹೇಳಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಕವಿತಾ ಅವರು ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.  ಆದರೆ ಅವರ ಜಾಮೀನು ಅರ್ಜಿಯನ್ನು ಇಡಿ ವಿರೋಧಿಸಿತು, ಈ ಹಂತದಲ್ಲಿ ಅವರ ಜಾಮೀನು ಅರ್ಜಿಯನ್ನು ಪರಿಗಣಿಸಸಲಾಗುವುದಿಲ್ಲ ಎಂದು ಹೇಳಿದರು. ಶುಕ್ರವಾರ, ಕವಿತಾಗೆ ಜಾಮೀನು ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್, ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಲು ಕೇಳಿಕೊಂಡಿದೆ. ಇದು ಸುಪ್ರೀಂ ಕೋರ್ಟ್ ಅನುಸರಿಸುತ್ತಿರುವ ರೀತಿ ಆಗಿದ್ದು ಪ್ರೋಟೋಕಾಲ್ ನ್ನು ಮುರಿಯಲು ಸಾಧ್ಯವಿಲ್ಲ ಎಂದು ಹೇಳಿದೆ. ಆದಾಗ್ಯೂ, ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಕೆಯ ಬಂಧನವನ್ನು ಪ್ರಶ್ನಿಸಿ ಆಕೆಯ ಮನವಿಯ ಮೇಲೆ ಸುಪ್ರೀಂಕೋರ್ಟ್ ಇಡಿಗೆ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಜರ್ಮನಿಯ ಹೇಳಿಕೆ ‘ಅನಗತ್ಯ ಹಸ್ತಕ್ಷೇಪ’: ಕೇಂದ್ರ ಸರ್ಕಾರ

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಅವರನ್ನು ಮಾರ್ಚ್ 15 ರಂದು ಹೈದರಾಬಾದ್‌ನಲ್ಲಿ ಇಡಿ ಬಂಧಿಸಿತ್ತು. ಕವಿತಾ ಅವರು ಇತರರೊಂದಿಗೆ ಸೇರಿ “ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಉನ್ನತ ನಾಯಕರೊಂದಿಗೆ ಪಿತೂರಿ ನಡೆಸಿದ್ದರು. ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಮತ್ತು “ಬದಲಾವಣೆಯಾಗಿ” ಈ ಅನುಕೂಲಗಳ ಬದಲಾಗಿ, ಅವರು ಎಎಪಿ ನಾಯಕರಿಗೆ 100 ಕೋಟಿ ರೂ. ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ