Manish Sisodia: ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ ಮತ್ತೆರಡು ದಿನ ವಿಸ್ತರಣೆ

ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​ ಶುಕ್ರವಾರ ತಿರಸ್ಕರಿಸಿತ್ತು. ನಂತರ ಅವರು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Follow us
ಗಣಪತಿ ಶರ್ಮ
|

Updated on:Mar 04, 2023 | 3:58 PM

ನವದೆಹಲಿ: ಅಬಕಾರಿ ನೀತಿ ಪ್ರಕರಣಕದಲ್ಲಿ (Excise Policy Case) ಬಂಧನಕ್ಕೊಳಗಾಗಿರುವ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರ ಸಿಬಿಐ ಕಸ್ಟಡಿಯನ್ನು ಮತ್ತೆ ಎರಡು ದಿನ ವಿಸ್ತರಣೆ ಮಾಡಿ ದೆಹಲಿಯ ನ್ಯಾಯಾಲಯ ಆದೇಶಿಸಿದೆ. ಸಿಸೋಡಿಯಾ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ಇನ್ನೂ ಮೂರು ದಿನ ಅವರನ್ನು ಕಸ್ಟಡಿಗೆ ನೀಡಬೇಕು ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದರು. ಆದರೆ, ಎರಡು ದಿನಗಳ ಕಾಲ ಕಸ್ಟಡಿ ವಿಸ್ತರಣೆ ಮಾಡಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ. ಸಿಸೋಡಿಯಾ ಕಸ್ಟಡಿ ಅವಧಿ ಮುಗಿದಿದ್ದರಿಂದ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಮಧ್ಯೆ,  ಸಿಸೋಡಿಯಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮಾರ್ಚ್​ 10ರಂದು ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.

ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​ ಶುಕ್ರವಾರ ತಿರಸ್ಕರಿಸಿತ್ತು. ನಂತರ ಅವರು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ದೆಹಲಿಯ ಮದ್ಯ ನೀತಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರ ತನಿಖಾ ದಳ ಫೆಬ್ರುವರಿ 26ರಂದು ಬಂಧಿಸಿತ್ತು. ಇದಾಗಿ ಎರಡು ದಿನಗಳ ನಂತರ ಅವರು ದೆಹಲಿ ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ನಂತರ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆಗೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಅರ್ಜಿಯನ್ನು ಕೆಳಹಂತದ ಕೋರ್ಟ್​ ವಿಚಾರಣೆ ನಡೆಸಲಿ ಎಂದು ಹೇಳಿತ್ತು. ನಂತರ ಸಿಡೋಡಿಯಾ ಪರ ವಕೀಲರು ಹೈಕೋರ್ಟ್​ಗೂ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: Manish Sisodia: ದೆಹಲಿ ಅಬಕಾರಿ ನೀತಿ ಪ್ರಕರಣ: ಜಾಮೀನು ಮನವಿಯನ್ನು ಸುಪ್ರೀಂ ತಿರಸ್ಕರಿಸಿದ ನಂತರ ದೆಹಲಿ ಕೋರ್ಟ್​​ ಮೊರೆ ಹೋದ ಸಿಸೋಡಿಯಾ

ಸಿಸೋಡಿಯಾ ಬಂಧನ ದೆಹಲಿಯಲ್ಲಿ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಬಂಧನವನ್ನು ಎಎಪಿ ಮತ್ತು ಇತರ ವಿರೋಧ ಪಕ್ಷದ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಬಿಜೆಪಿಯವರು ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿವೆ ಎಂದು ಎಎಪಿ ಮತ್ತು ಇತರ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Sat, 4 March 23

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಸ್ಫೋಟಕ ಹೇಳಿಕೆ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ರೀಲ್ಸ್​ಗಾಗಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ವಿದ್ಯಾರ್ಥಿಗಳಿಂದ ಹುಚ್ಚಾಟ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಮೆಸ್ಕಾಂ‌ ಸಿಬ್ಬಂದಿಯ ಎಣ್ಣೆ ಪಾರ್ಟಿ, ಧಮ್ಕಿ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಕೊಂಡುಕೊಳ್ಳುವ ಯೋಗವಿದೆ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
4 ವರ್ಷಗಳ ಬಳಿಕ ವೈಟ್​ಹೌಸ್​ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ರಿಲ್ಯಾಕ್ಸ್ ಮೂಡ್​ನಲ್ಲಿರುವ ಕಾಡಾನೆ ಹಿಂಡಿನ ದೃಶ್ಯ ಡ್ರೋನ್​ನಲ್ಲಿ ಸೆರೆ​
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ನನ್ನನ್ನು ಕೆಳಗಿಳಿಸುವ ಪ್ರಯತ್ನಗಳಿಗೆ ಜನರೇ ಉತ್ತರ ನೀಡಬೇಕು: ಸಿದ್ದರಾಮಯ್ಯ
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್
ಜೋಡಿ ಬದಲಾಯಿಸಲು ಅನುಷಾ ರೈಗೆ ಆಫರ್​ ನೀಡಿದ ಬಿಗ್ ಬಾಸ್; ಕಾದಿದೆ ಟ್ವಿಸ್ಟ್