ಬಿಜೆಪಿ ಅಧಿಕೃತ ಟ್ವಿಟರ್ ಹ್ಯಾಂಡಲ್ಗೆ 2 ಕೋಟಿ ಫಾಲೋವರ್ಸ್; ನಾವೇ ನಂಬರ್ 1 ಎಂದ ಮಾಳವೀಯ
ಟ್ವಿಟರ್ನಲ್ಲಿ 2 ಕೋಟಿ ಫಾಲೋವರ್ಗಳನ್ನು ಹೊಂದುವ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಫಾಲೋವರ್ಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಧನ್ಯವಾದಗಳು ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
ನವದೆಹಲಿ: ಭಾರತೀಯ ಜನತಾ ಪಕ್ಷದ (BJP) ಅಧಿಕೃತ ಟ್ವಿಟರ್ (Twitter) ಹ್ಯಾಂಡಲ್ ಫಾಲೋವರ್ಗಳ ಸಂಖ್ಯೆ 2 ಕೋಟಿ ದಾಟಿದೆ. ಈ ವಿಚಾರವಾಗಿ ಹರ್ಷ ವ್ಯಕ್ತಪಡಿಸಿ ಟ್ವೀಟ್ (Tweet) ಮಾಡಿರುವ ಬಿಜೆಪಿ, ಈ ಮೂಲಕ ನಾವು ಒಗ್ಗಟ್ಟು, ಸಾಮರಸ್ಯ, ಶಕ್ತಿ ಹಾಗೂ ಬೆಂಬಲದ ಹೊಸ ಅಧ್ಯಾಯ ಬರೆಯುತ್ತಿದ್ದೇವೆ. ಧನ್ಯವಾದಗಳು ಮತ್ತು ಅಭಿನಂದನೆಗಳು. ನಾವೀಗ 2 ಕೋಟಿ ಮಂದಿ ಜತೆಯಾಗಿದ್ದೇವೆ ಎಂದು ಉಲ್ಲೇಖಿಸಿದೆ. ಬಿಜೆಪಿ ಮತ್ತೊಂದು ಸಾಧನೆ ಮಾಡಿದೆ. ಟ್ವಿಟರ್ನಲ್ಲಿ 2 ಕೋಟಿ ಫಾಲೋವರ್ಗಳನ್ನು ಹೊಂದುವ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಫಾಲೋವರ್ಗಳನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಧನ್ಯವಾದಗಳು ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.
In another stellar achievement, @BJP4India has now touched a staggering 20 million (2 crore) followers on Twitter… The largest following of any political party in the world.
Thank You. pic.twitter.com/Ov2wT9pIWx
— Amit Malviya (@amitmalviya) March 3, 2023
ವಿಶೇಷವೆಂದರೆ, ಬಿಜೆಪಿ ಟ್ವಿಟರ್ ಹ್ಯಾಂಡಲ್ನಿಂದ ಕೇವಲ ಮೂರು ಮಂದಿಯನ್ನು ಮಾತ್ರ ಫಾಲೋ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟರ್ ಹ್ಯಾಂಡಲ್ಗಳನ್ನು ಮಾತ್ರ ಬಿಜೆಪಿ ಟ್ವಿಟರ್ ಹ್ಯಾಂಡಲ್ ಫಾಲೋ ಮಾಡುತ್ತಿದೆ.
ಇದೀಗ ಪಕ್ಷದ ನಾಯಕರು ಪ್ರತಿಪಾದಿಸಿರುವ ಪ್ರಕಾರ, ಅತಿಹೆಚ್ಚು ಟ್ವಿಟರ್ ಫಾಲೋವರ್ಗಳನ್ನು ಹೊಂದಿರುವ ವಿಶ್ವದ ನಂಬರ್ 1 ರಾಜಕೀಯ ಪಕ್ಷವಾಗಿದೆ ಬಿಜೆಪಿ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ