ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯ: ನವೆಂಬರ್ 13ರಿಂದ 20ರವರೆಗೆ ವಾಹನಗಳ ಬೆಸ-ಸಮ ನಿಯಮ ಮತ್ತೆ ಜಾರಿ
ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ನಿಯಂತ್ರಣಕ್ಕಾಗಿ ಸರ್ಕಾರವು ಮತ್ತೆ ವಾಹನಗಳ ಸಮ ಬೆಸ ನಿಯಮವನ್ನು ಜಾರಿಗೆ ತಂದಿದೆ. ನವೆಂಬರ್ 13ರಿಂದ 20ರವರೆಗೆ ವಾಹನಗಳ ಬೆಸ-ಸಮ ನಿಯಮ ಜಾರಿಯಲ್ಲಿರಲಿದೆ. ಹಾಗೆಯೇ ನಿರ್ಮಾಣ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ನೋಯ್ಡಾದಲ್ಲಿ, 1 ರಿಂದ 8 ನೇ ತರಗತಿಯ ಶಾಲೆಗಳನ್ನು ನವೆಂಬರ್ 8 ರವರೆಗೆ ಮುಚ್ಚಲಾಗಿದೆ, ಆದರೆ ರಾಜಧಾನಿ ದೆಹಲಿಯಲ್ಲಿ ಪ್ರಾಥಮಿಕ ಶಾಲೆಗಳು ಮುಂದಿನ ಆದೇಶದವರೆಗೆ ಮುಚ್ಚಿರಲಿವೆ.
ದೆಹಲಿಯಲ್ಲಿ ವಾಯು ಮಾಲಿನ್ಯ(Air Pollution)ಮಿತಿ ಮೀರಿದ್ದು, ನಿಯಂತ್ರಣಕ್ಕಾಗಿ ಸರ್ಕಾರವು ಮತ್ತೆ ವಾಹನಗಳ ಸಮ ಬೆಸ ನಿಯಮವನ್ನು ಜಾರಿಗೆ ತಂದಿದೆ. ನವೆಂಬರ್ 13ರಿಂದ 20ರವರೆಗೆ ವಾಹನಗಳ ಬೆಸ-ಸಮ ನಿಯಮ ಜಾರಿಯಲ್ಲಿರಲಿದೆ. ಹಾಗೆಯೇ ನಿರ್ಮಾಣ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ನೋಯ್ಡಾದಲ್ಲಿ, 1 ರಿಂದ 8 ನೇ ತರಗತಿಯ ಶಾಲೆಗಳನ್ನು ನವೆಂಬರ್ 8 ರವರೆಗೆ ಮುಚ್ಚಲಾಗಿದೆ, ಆದರೆ ರಾಜಧಾನಿ ದೆಹಲಿಯಲ್ಲಿ ಪ್ರಾಥಮಿಕ ಶಾಲೆಗಳು ಮುಂದಿನ ಆದೇಶದವರೆಗೆ ಮುಚ್ಚಿರಲಿವೆ.
ಸಮ ಬೆಸ ನಿಯಮ ಎಂದರೇನು? ದೆಹಲಿ ಸರ್ಕಾರವು ವಾಹನಗಳ ಸಮ ಬೆಸ ನಿಯಮವನ್ನು ಮತ್ತೆ ಜಾರಿಗೆ ತಂದಿದ್ದು, ಸಮ ಬೆಸ ವೆಂದರೆ ಸಮ ಸಂಖ್ಯೆಯ ವಾಹನಗಳನ್ನು ಸಮ ದಿನಾಂಕಗಳಲ್ಲಿ ಓಡಿಸಲು ಅವಕಾಶವಿದ್ದು, ಬೆಸ ದಿನಗಳಲ್ಲಿ ಬೆಸ ಸಂಖ್ಯೆಯ ವಾಹನಗಳನ್ನು ರಸ್ತೆಯಲ್ಲಿ ಓಡಿಸಲು ಅವಕಾಶವಿರಲಿದೆ. ಬೆಸ-ಸಮ ಯೋಜನೆಯಡಿ, ನೋಂದಣಿ ಸಂಖ್ಯೆಯ ಕೊನೆಯ ಅಂಕಿ ಬೆಸ (1,3,5,7,9) ಇರುವ ವಾಹನಗಳು 4, 6, 8, 12 ಮತ್ತು 14 ರಂದು ರಸ್ತೆಗಳಲ್ಲಿ ಸಂಚರಿಸಲು ಅನುಮತಿಸುವುದಿಲ್ಲ.
ಸಿಎನ್‌ಜಿ ಚಾಲಿತ ವಾಹನಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳಿಗೆ ದೆಹಲಿಯಲ್ಲಿ ವಿನಾಯಿತಿ ನೀಡಲಾಗುವುದು, ಆದರೆ ಬೆಸ-ಸಮ ಯೋಜನೆಯನ್ನು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲೆ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತದೆ.
ಮತ್ತಷ್ಟು ಓದಿ: ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ: ಶಾಲೆಗಳಿಗೆ 2 ದಿನ ರಜೆ; ನಿರ್ಮಾಣ ಕೆಲಸಕ್ಕೆ ನಿಷೇಧ
ಆಂಬ್ಯುಲೆನ್ಸ್‌ಗಳು ಅಗ್ನಿ ಶಾಮಕ ದಳ ಜೈಲು ಕೈದಿಗಳ ವಾಹನಗಳು ದೆಹಲಿ ಪೊಲೀಸರ ವಾಹನ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ವಾಹನಕ್ಕೆ ವಿನಾಯಿತಿ.
ನವೆಂಬರ್ 7 ರಂದು ಗಂಟೆಗೆ 12 ಕಿಮೀ ಗಾಳಿಯ ವೇಗ ಮತ್ತು ವೇಗವು ಗಂಟೆಗೆ 10 ರಿಂದ 12 ಕಿಮೀ ತಲುಪಿದರೆ, ಇಲ್ಲಿ ಸಂಗ್ರಹವಾಗಿರುವ ಮಾಲಿನ್ಯದ ಮಟ್ಟವು ಕಡಿಮೆಯಾಗುವ ನಿರೀಕ್ಷೆ ಇದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Mon, 6 November 23