ನಿರ್ಭಯಾ ರೇಪ್ ಅಂಡ್ ಮರ್ಡರ್: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

|

Updated on: Feb 03, 2020 | 7:56 AM

ದೆಹಲಿ: ನಿರ್ಭಯಾ ಅತ್ಯಾಚಾರಿಗಳು ಗಲ್ಲಿನಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತು ನಡೆಸ್ತಿದ್ದಾರೆ. ರಂಗೋಲಿ ಕೆಳಗೆ ನುಸುಳುತ್ತಿರೋ ಕಿರತಕರು ಕಾನೂನಿನ ಉಪಯೋಗ ಪಡೆದು ಸಾವನ್ನೇ ಗೆಲ್ಲೋ ಸರ್ಕಸ್ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿರೋ ಕೇಂದ್ರ ಸರ್ಕಾರ ಅಪರಾಧಿಗಳನ್ನ ಆದಷ್ಟು ಬೇಗ ಗಲ್ಲಿಗೇರಿಸಲು ಪ್ರಯತ್ನ ಮಾಡ್ತಿದೆ. ಕೇಂದ್ರದ ವಾದವೇನು? ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ರು. ವಾದ ಆರಂಭಿಸಿದ ತುಷಾರ್ ಮೆಹ್ತಾ ನಿರ್ಭಯಾ ಅಪರಾಧಿಗಳು ದೇಶದ ಕಾನೂನನ್ನ ದುರುಪಯೋಗ ಪಡಿಸಿಕೊಳ್ತಿದ್ದಾರೆ ಅಂದ್ರು. ಅಲ್ಲದೆ […]

ನಿರ್ಭಯಾ ರೇಪ್ ಅಂಡ್ ಮರ್ಡರ್: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Follow us on

ದೆಹಲಿ: ನಿರ್ಭಯಾ ಅತ್ಯಾಚಾರಿಗಳು ಗಲ್ಲಿನಿಂದ ತಪ್ಪಿಸಿಕೊಳ್ಳಲು ನಾನಾ ಕಸರತ್ತು ನಡೆಸ್ತಿದ್ದಾರೆ. ರಂಗೋಲಿ ಕೆಳಗೆ ನುಸುಳುತ್ತಿರೋ ಕಿರತಕರು ಕಾನೂನಿನ ಉಪಯೋಗ ಪಡೆದು ಸಾವನ್ನೇ ಗೆಲ್ಲೋ ಸರ್ಕಸ್ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿರೋ ಕೇಂದ್ರ ಸರ್ಕಾರ ಅಪರಾಧಿಗಳನ್ನ ಆದಷ್ಟು ಬೇಗ ಗಲ್ಲಿಗೇರಿಸಲು ಪ್ರಯತ್ನ ಮಾಡ್ತಿದೆ.

ಕೇಂದ್ರದ ವಾದವೇನು?
ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ರು. ವಾದ ಆರಂಭಿಸಿದ ತುಷಾರ್ ಮೆಹ್ತಾ ನಿರ್ಭಯಾ ಅಪರಾಧಿಗಳು ದೇಶದ ಕಾನೂನನ್ನ ದುರುಪಯೋಗ ಪಡಿಸಿಕೊಳ್ತಿದ್ದಾರೆ ಅಂದ್ರು. ಅಲ್ಲದೆ ಪವನ್ ಗುಪ್ತಾ ಕ್ಯುರೇಟಿವ್ ಅರ್ಜಿ ಅಥವಾ ಕ್ಷಮಾದಾನ ಅರ್ಜಿ ಸಲ್ಲಿಸದೇ ಇದ್ದರೆ, ಉಳಿದ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗದಿದ್ರೆ ಹೇಗೆ ಅಂತ ಪ್ರಶ್ನಿಸಿದ್ದಾರೆ.

ಹೀಗಾಗಿ 920 ದಿನಗಳೊಳಗಾಗಿ ಅರ್ಜಿ ಸಲ್ಲಿಸದಿದ್ದರೆ ತಪ್ಪಿಸಿಕೊಳ್ಳಲು ಅಸಾಧ್ಯ. ಯಾಱರ ಕಾನೂನು ಪ್ರಕ್ರಿಯೆ ಮುಗಿದಿದ್ಯೋ ಅವರನ್ನ ಗಲ್ಲಿಗೇರಿಸಬೇಕು ಅಂತ ವಾದ ಮಂಡಿಸಿದ್ರು.

ಅಪರಾಧಿಗಳ ಪರ ವಕೀಲರು ವಾದಿಸಿದ್ದೇನು..?
ಇನ್ನು ಅಪರಾಧಿಗಳ ಪರ ವಾದ ಮಂಡಿಸಿದ ಎ.ಪಿ. ಸಿಂಗ್, ಕಾನೂನು ಪ್ರಕ್ರಿಯೆ ಮುಗಿಯೋವರೆಗೆ ಗಲ್ಲು ವಿಧಿಸಲು ಸಾಧ್ಯವಿಲ್ಲ ಅಂದ್ರು. ಅಲ್ಲದೆ ಕಾನೂನಿಲ್ಲಿರೋ ಅವಕಾಶಗಳನ್ನ ಪಡೆಯಲು ಅಪರಾಧಿಗಳಿಗೆ ಸಂಪೂರ್ಣ ಹಕ್ಕಿದೆ. ಅಲ್ಲದೆ ಇದಕ್ಕಾಗಿ ಸಮಯ ನಿಗದಿ ಮಾಡಬೇಕು ಅಂತ ಯಾವ ಪುಸ್ತಕದಲ್ಲೂ ಹೇಳಿಲ್ಲ. ಆದ್ರೆ ಕೇಂದ್ರ ಸರ್ಕಾರ ಇದ್ದಕ್ಕಿದ್ದಂತೆ ಈಗ ಎಚ್ಚರವಾಗಿದೆ ಅಂದ್ರು.

ಹೀಗೆ ಕೇಂದ್ರ ಸರ್ಕಾರ ಹಾಗೂ ಅಪರಾಧಿಗಳ ಪರ ವಕೀಲರ ವಾದ, ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ತನ್ನ ಆದೇಶವನ್ನ ಕಾಯ್ದಿರಿಸಿದೆ. ಒಟ್ನಲ್ಲಿ, ನಿರ್ಭಯಾ ಅಪರಾಧಿಗಳ ಗಲ್ಲಿಗೇರಿಸಲು ಕೇಂದ್ರ ಸರ್ಕಾರ ಫೈಟ್ ಮಾಡ್ತಿದ್ರೆ, ನಿರ್ಭಯಾ ಅಪರಾಧಿ ಪವನ್ ಗುಪ್ತಾ ಇತ್ತ ಕ್ಯುರೇಟಿವ್ ಅರ್ಜಿಯೂ ಸಲ್ಲಿಸದೆ, ಅತ್ತ ಕ್ಷಮಾದಾನ ಅರ್ಜಿಯೂ ಸಲ್ಲಿಸದೆ ತನ್ನ ಸಹಚರರಿಗೆ ಶ್ರೀರಕ್ಷೆಯಾಗಿ ನಿಂತಿದ್ದಾನೆ. ಹೀಗಾಗಿ, ಕೋರ್ಟ್ ಆದೇಶ ಏನು ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ.

Published On - 7:56 am, Mon, 3 February 20