ದೆಹಲಿ: ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ಗೆ (Yasin Malik) ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಡಿದ ಮನವಿ ನಂತರ ದೆಹಲಿ ಹೈಕೋರ್ಟ್ ಯಾಸಿನ್ ಮಲಿಕ್ಗೆ ನೋಟಿಸ್ ಜಾರಿ ಮಾಡಿದೆ.
ಭಯೋತ್ಪಾದನೆಗೆ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಕೆಎಲ್ಎಫ್ ನಾಯಕನಿಗೆ ಮರಣದಂಡನೆ ವಿಧಿಸುವಂತೆ ತನಿಖಾ ಸಂಸ್ಥೆ ಮಾಡಿದ ಮನವಿಯ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ.
Delhi High Court issues notice to JKLF leader Yasin Malik on National Investigation Agency’s (NIA) appeal seeking death penalty for him in terror funding case.
(File photo) pic.twitter.com/7LuUgIqImT
— ANI (@ANI) May 29, 2023
ಮಲಿಕ್ಗೆ ಮರಣದಂಡನೆ ವಿಧಿಸಬೇಕೆಂದು ಕೋರಿ ಎನ್‌ಐಎ ಶುಕ್ರವಾರ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದು ಅಂತಹ “ಭೀಕರ ಭಯೋತ್ಪಾದಕ”ಕ್ಕೆ ಮರಣದಂಡನೆ ನೀಡದಿರುವುದು ನ್ಯಾಯದ ತಪ್ಪಿಗೆ ಕಾರಣವಾಗುತ್ತದೆ ಎಂದು ತಿಳಿಸಿದೆ. ಕಳೆದ ವರ್ಷ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಜೆಕೆಎಲ್ಎಫ್ ಮುಖ್ಯಸ್ಥರಿಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ವಿಧಿಸಿತ್ತು.
Published On - 1:54 pm, Mon, 29 May 23