Cheetah: ಕೆಎನ್‌ಪಿ ಉದ್ಯಾನವನದಿಂದ ಮತ್ತೊಂದು ಚೀತಾ ಕಾಡಿಗೆ

ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿದ್ದ (ಕೆಎನ್‌ಪಿ) ಇನ್ನೊಂದು ಚೀತಾವನ್ನು ಕಾಡಿಗೆ ಬಿಡಲಾಗಿದೆ.

Cheetah: ಕೆಎನ್‌ಪಿ ಉದ್ಯಾನವನದಿಂದ ಮತ್ತೊಂದು ಚೀತಾ ಕಾಡಿಗೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 29, 2023 | 3:38 PM

ಭೋಪಾಲ್: ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿದ್ದ (ಕೆಎನ್‌ಪಿ) ಇನ್ನೊಂದು ಚೀತಾವನ್ನು ಕಾಡಿಗೆ ಬಿಡಲಾಗಿದ್ದು, ಒಟ್ಟು ಏಳು ಚೀತಾಗಳನ್ನು ಈಗಾಗಲೇ ಕಾಡಿಗೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ 3-4 ವರ್ಷ ವಯಸ್ಸಿನ ಹೆಣ್ಣು ಚೀತಾ ನೀರವವನ್ನು ಭಾನುವಾರ ಸಂಜೆ ಕೆಎನ್‌ಪಿಯ ಆವರಣದಿಂದ ಕಾಡಿಗೆ ಬಿಡಲಾಯಿತು ಎಂದು ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಇಲ್ಲಿಯವರೆಗೆ, ಏಳು ಚೀತಾಗಳನ್ನು ಮುಕ್ತಗೊಳಿಸಲಾಗಿದೆ. ಆದರೆ ಇನ್ನೂ 10 ಚೀತಾಗಳು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇದೆ ಎಂದು ಹೇಳಿದ್ದಾರೆ.

ಇನ್ನೂ 10 ಚೀತಾಗಳನ್ನು ಕಾಡಿಗೆ ಬಿಡುವ ಬಗ್ಗೆ ಕೇಂದ್ರ ಸರ್ಕಾರ ರಚಿಸಿರುವ ಸ್ಟೀರಿಂಗ್ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಸಮಿತಿಯ ಸದಸ್ಯರು ಮಂಗಳವಾರ ಕೆಎನ್‌ಪಿಗೆ ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ಒಳಗೊಂಡ ಎಂಟು ನಮೀಬಿಯಾದಿಂದ ತರಲಾದ ಚೀತಾಗಳನ್ನು ಕೆಎನ್‌ಪಿಗೆ ತಂದು ಬಿಡಲಾಗಿತ್ತು, ಈ ಜಾತಿಯ ಚೀತಾಗಳು ಭಾರತದಲ್ಲಿ ನಾಶವಾದ ಕಾರಣ, ಮತ್ತೆ ಇದನ್ನು ಭಾರತದಲ್ಲಿ ಪರಿಚಯಿಸುವ ಕಾರಣದಿಂದ ಕಳೆದ ವರ್ಷ ಸೆಪ್ಟೆಂಬರ್ 17 ಮಹತ್ವದ ಚೀತಾಗಳನ್ನು ಕೆಎನ್‌ಪಿ ತಂದು ಬಿಡುವ ಕಾರ್ಯಕ್ರಮಗಳನ್ನು ಮಾಡಲಾಗಿತ್ತು.

ಇದನ್ನೂ ಓದಿ:Cheetah Death: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು, 3 ತಿಂಗಳಲ್ಲಿ ಮೂರನೇ ಘಟನೆ

ನಂತರ, 12 ಚೀತಾಗಳನ್ನು ಅದರಲ್ಲಿ ಏಳು ಗಂಡು ಮತ್ತು ಐದು ಹೆಣ್ಣು ಚೀತಾಗಳನ್ನು ಈ ವರ್ಷ ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಯಿತು. ನಮೀಬಿಯಾದಿಂದ ಸ್ಥಳಾಂತರಗೊಂಡಿದ್ದ ಸಿಯಾಯಾ ಎಂದು ಕರೆಯಲ್ಪಡುವ ಚಿರತೆ ಜ್ವಾಲಾ ಮಾರ್ಚ್‌ನಲ್ಲಿ ಕೆಎನ್‌ಪಿಯನ್ನು ಆವರಣದಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಮೇ ತಿಂಗಳು ವಾತಾವರಣದ ಕಾರಣದಿಂದ ಆ ಮೂರು ಮರಿಗಳು ಸಾವನ್ನಪ್ಪಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ