ದೆಹಲಿಯಲ್ಲಿಂದು ಡಿಕೆಶಿ ಪತ್ನಿ, ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ

ದೆಹಲಿ: ಕನಕಪುರದ ಬಂಡೆ.. ಕಾಂಗ್ರೆಸ್​ನ ಟ್ರಬಲ್ ಶೂಟರ್… ಬೈ ಎಲೆಕ್ಷನ್​ನಲ್ಲಿ ಎದುರಾಳಿಗಳಿಗೆ ಬುಗುರಿ ಆಡಿಸ್ತೀನಿ ಅಂತಾ ಗುಡುಗಿದ್ದ ಡಿಕೆ ಶಿವಕುಮಾರ್​, ಮಿನಿವಾರ್ ಫಲಿತಾಂಶದ ಬಳಿಕ ತಣ್ಣಗಾಗಿದ್ದಾರೆ. ಆದ್ರೂ, ಕೈ ಗದ್ದುಗೆಗೇರಲು, ರಣತಂತ್ರ ರೂಪಿಸ್ತಿದ್ದಾರೆ. ಆದ್ರೆ, ಇತ್ತ ಇಡಿ ಅನ್ನೋ ತ್ರಿಶೂಲ ಅವರನ್ನ ಶಿವಕುಮಾರ್​ಗೆ ಇನ್ನಿಲ್ಲದಂತೆ ಕಾಡುತ್ತಿದೆ. ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಡಿಕೆಶಿ ಜಾಮೀನಿನ ಮೂಲಕ ಹೊರ ಬಂದರೂ, ಅವರ ಕುಟುಂಬಕ್ಕೆ ಮಾತ್ರ ಇಡಿ ಅನ್ನೋ ಈಟಿ ಚುಚ್ಚದೇ ಬಿಡ್ತಿಲ್ಲ. ‘ಕನಕಪುರದ ಬಂಡೆ’ ಕುಟುಂಬಕ್ಕೆ ಮುಗಿಯದ ಸಂಕಷ್ಟ..! ತಿಹಾರ್ […]

ದೆಹಲಿಯಲ್ಲಿಂದು ಡಿಕೆಶಿ ಪತ್ನಿ, ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ
Follow us
ಸಾಧು ಶ್ರೀನಾಥ್​
|

Updated on:Dec 12, 2019 | 6:59 AM

ದೆಹಲಿ: ಕನಕಪುರದ ಬಂಡೆ.. ಕಾಂಗ್ರೆಸ್​ನ ಟ್ರಬಲ್ ಶೂಟರ್… ಬೈ ಎಲೆಕ್ಷನ್​ನಲ್ಲಿ ಎದುರಾಳಿಗಳಿಗೆ ಬುಗುರಿ ಆಡಿಸ್ತೀನಿ ಅಂತಾ ಗುಡುಗಿದ್ದ ಡಿಕೆ ಶಿವಕುಮಾರ್​, ಮಿನಿವಾರ್ ಫಲಿತಾಂಶದ ಬಳಿಕ ತಣ್ಣಗಾಗಿದ್ದಾರೆ. ಆದ್ರೂ, ಕೈ ಗದ್ದುಗೆಗೇರಲು, ರಣತಂತ್ರ ರೂಪಿಸ್ತಿದ್ದಾರೆ.

ಆದ್ರೆ, ಇತ್ತ ಇಡಿ ಅನ್ನೋ ತ್ರಿಶೂಲ ಅವರನ್ನ ಶಿವಕುಮಾರ್​ಗೆ ಇನ್ನಿಲ್ಲದಂತೆ ಕಾಡುತ್ತಿದೆ. ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದ ಡಿಕೆಶಿ ಜಾಮೀನಿನ ಮೂಲಕ ಹೊರ ಬಂದರೂ, ಅವರ ಕುಟುಂಬಕ್ಕೆ ಮಾತ್ರ ಇಡಿ ಅನ್ನೋ ಈಟಿ ಚುಚ್ಚದೇ ಬಿಡ್ತಿಲ್ಲ.

‘ಕನಕಪುರದ ಬಂಡೆ’ ಕುಟುಂಬಕ್ಕೆ ಮುಗಿಯದ ಸಂಕಷ್ಟ..! ತಿಹಾರ್ ಜೈಲಿನಿಂದ ಡಿಕೆಶಿಗೆ ಮುಕ್ತಿ ಸಿಕ್ರೂ ಇಡಿ ಅಧಿಕಾರಿಗಳು ಡಿ.ಕೆ. ಪ್ಯಾಮಿಲಿಯನ್ನ ಕಾಡ್ತಿದ್ದಾರೆ. ಡಿಕೆಶಿ ವಿಚಾರಣೆ ನಡೆಸಿರುವ ಅಧಿಕಾರಿಗಳು ಡಿಕೆಶಿ ಸಹೋದರ ಡಿ.ಕೆ‌. ಸುರೇಶ್, ಮಗಳು ಐಶ್ವರ್ಯ ಸೇರಿ ಆಪ್ತರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ರು. ಆದ್ರೆ, ಡಿಕೆಶಿ ತಾಯಿ ಗೌರಮ್ಮ, ಪತ್ನಿ ಉಷಾ ಶಿವಕುಮಾರ್ ನೀಡಿರುವ ಸಮನ್ಸ್ ನೋಡಿ‌ ಡಿ.ಕೆ. ಬ್ರದರ್ಸ್ ಗೆ ಆತಂಕ ಶುರುವಾಗಿದೆ.

84 ವರ್ಷದ ಗೌರಮ್ಮ ದೆಹಲಿಗೆ ಬಂದು ವಿಚಾರಣೆ ಎದುರಿಸುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ. ಹೀಗಾಗಿ, ದೆಹಲಿಯಲ್ಲಿ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲೇ ವಿಚಾರಣೆ ನಡೆಸಬೇಕು ಅಂತಾ ದೆಹಲಿ ಹೈಕೋರ್ಟ್ ನಲ್ಲಿ ಇಬ್ಬರು ಅರ್ಜಿ ಹಾಕಿದ್ರು. ಡಿಕೆಶಿ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದೂ ಮುಂದುವರಿಯಲಿದ್ದು, ದೆಹಲಿ ಹೈಕೋರ್ಟ್ ಅಂತಿಮ ಆದೇಶ ಹೊರಡಿಸಲಿದೆ.

ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದ್ದು ಗೌರಮ್ಮ ಮತ್ತು ಉಷಾ ಇಬ್ಬರು ದೆಹಲಿಯಲ್ಲಿ ಇಡಿ ವಿಚಾರಣೆ ಎದುರಿಸಬೇಕಾ..? ಅಥವಾ ಬೆಂಗಳೂರಿನಲ್ಲಿ ಎದುರಿಸಬೇಕಾ..? ಅನ್ನೋದನ್ನು ನಿರ್ಧರಿಸಲಿದೆ. ಜೊತಗೆ 84 ವರ್ಷದ ಗೌರಮ್ಮ ಗೆ ವಿಚಾರಣೆಯಿಂದ ಮುಕ್ತಿ ನೀಡಬೇಕು ಅಂತಾನೂ ಹೈಕೋರ್ಟ್ ಗೆ ಮನವಿ ಮಾಡಲಾಗಿದ್ದು, ಈ ವಿಚಾರದ ಬಗ್ಗೆಯೂ ಕೋರ್ಟ್ ಇಂದು ನಿರ್ಧರಿಸಲಿದೆ.

ಡಿಸೆಂಬರ್ 4 ರಂದು ಹೈಕೋರ್ಟ್ ನಡೆಸಿದ ವಿಚಾರಣೆಯಲ್ಲಿ ಗೌರಮ್ಮ ಅವರಿಗೆ ವಯಸ್ಸಾಗಿದ್ದು, ನಾವು ಅವರ ಬಳಿಯೇ ವಿಚಾರಣೆ ನಡೆಸಲು ಸಿದ್ಧರಿದ್ದೇವೆ ಅಂತಾ ಇಡಿ ಪರ ವಕೀಲರು ಕೋರ್ಟ್​ನಲ್ಲಿ ಹೇಳಿದ್ರು. ಜೊತೆಗೆ ವಿಚಾರಣೆ ಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಅಂತಾ ಗೌರಮ್ಮ ಮತ್ತು ಉಷಾ ಪರ ವಕೀಲರು ಹೇಳಿದ್ರು.

ಇನ್ನು ವಾದ ಪ್ರತೀವಾದ ಆಲಿಸಿದ್ದ ಕೋರ್ಟ್ ಯಾವುದೇ ಆದೇಶ ನೀಡದೇ, ಇಡಿ ವಿಚಾರಣೆಗೆ ದೆಹಲಿಯಲ್ಲಿ ಹಾಜರಾಗಲು ಸಿದ್ಧರಿದ್ದೀರಾ ಎಂಬುದರ ಬಗ್ಗೆ ತಮ್ಮ ಕಕ್ಷಿದಾರರಿಂದ ಸ್ಪಷ್ಟ ಮಾಹಿತಿ ಪಡೆದುಕೊಂಡು ಬನ್ನಿ ಎಂದು ಅರ್ಜಿದಾರರ ಪರ ವಕೀಲರಿಗೆ ಕೋರ್ಟ್ ಸೂಚಿಸಿತ್ತು. ಅದೇ ರೀತಿ ಬೆಂಗಳೂರಿಗೆ ತೆರಳಿ ವಿಚಾರಣೆ ನಡೆಸಲು ಇಡಿ ಸಿದ್ಧವಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಇಡಿ ಪರ ವಕೀಲರಿಗೆ ಕೋರ್ಟ್ ಅಭಿಪ್ರಾಯ ಕೇಳಿದೆ.

ಇಂದು ಇಡಿ ಪರ ವಕೀಲರು ಹಾಗೂ ಗೌರಮ್ಮ ಹಾಗೂ ಉಷಾ ಶಿವಕುಮಾರ್ ಪರ ವಕೀಲರು ಕೋರ್ಟ್ ಮುಂದೆ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಬಳಿಕ ಕೋರ್ಟ್ ಗೌರಮ್ಮ ಹಾಗೂ ಉಷಾ ಶಿವಕುಮಾರ್ ರಲ್ಲಿ ಇಡಿ ವಿಚಾರಣೆ ಎದುರಿಸಬೇಕು ಅನ್ನೋದನ್ನು ನಿರ್ಧರಿಸಲಿದೆ.

ಇನ್ನು ಡಿಕೆಶಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಮತ್ತೊಬ್ಬ ಆರೋಪಿಯಾದ ದೆಹಲಿ ಕರ್ನಾಟಕ ಭವನದ ಸಿಬ್ಬಂದಿ ಡಿಕೆಶಿ‌ ಆಪ್ತ ಆಂಜನೇಯ ಅತ್ತೆ,ಮಾವ ಇಬ್ಬರಿಗೂ ಇಡಿ ವಿಚಾರಣೆ ಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಆಂಜನೇಯ ಕೂಡ ದೆಹಲಿಯಲ್ಲಿ ತನ್ನ ಅತ್ತೆ, ಮಾವ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಬೆಂಗಳೂರಿನಲ್ಲೇ‌ ನಡೆಸಬೇಕು ಅಂತ ಮನವಿ ಮಾಡಿದ್ದಾರೆ. ಈ ಬಗ್ಗೆಯೂ ಇಂದು ಕೋರ್ಟ್ ನಿರ್ಧರಿಸಲಿದೆ.

Published On - 6:59 am, Thu, 12 December 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್