ಅಕ್ರಮ ಆಕ್ಸಿಜನ್ ಕಾನ್ಸ್ಂಟ್ರೇಟರ್ ಸಂಗ್ರಹ ಪ್ರಕರಣ; ಉದ್ಯಮಿ ನವನೀತ್ ಕಲ್ರಾಗೆ ಮಧ್ಯಂತರ ಜಾಮೀನು ನಿರಾಕರಣೆ

ಖಾನ್ ಚಾಚಾ ಕೆಫೆ ಎಂಬ ಉದ್ಯಮಿ ನವನೀತ್ ಕಲ್ರಾ ಒಡೆತನದ ಕೆಫೆಯೂ ಸೇರಿ ಕೆಲವೆಡೆ ಅಕ್ರಮಾಗಿ ಆಕ್ಸಿಜನ್ ಕಾನ್ಸ್ಂಟ್ರೇಟರ್​ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದು ಪೊಲೀಸ್ ದಾಳಿ ವೇಳೆ ಬಯಲಾಗಿತ್ತು.

ಅಕ್ರಮ ಆಕ್ಸಿಜನ್ ಕಾನ್ಸ್ಂಟ್ರೇಟರ್ ಸಂಗ್ರಹ ಪ್ರಕರಣ; ಉದ್ಯಮಿ ನವನೀತ್ ಕಲ್ರಾಗೆ ಮಧ್ಯಂತರ ಜಾಮೀನು ನಿರಾಕರಣೆ
ಉದ್ಯಮಿ ನವನೀತ್ ಕಲ್ರಾ
Follow us
guruganesh bhat
|

Updated on:May 14, 2021 | 3:19 PM

ದೆಹಲಿ: ಆಕ್ಸಿಜನ್ ಕಾನ್ಸ್ಂಟ್ರೇಟರ್ಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಪ್ರಕರಣದಲ್ಲಿ ಉದ್ಯಮಿ ನವನೀತ್ ಕಲ್ರಾರಿಗೆ ಮಧ್ಯಂತರ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಕಳೆದ ಕೆಲದ ದಿನಗಳ ಹಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಖಾನ್ ಚಾಚಾ ಕೆಫೆ ಎಂಬ ಉದ್ಯಮಿ ನವನೀತ್ ಕಲ್ರಾ ಒಡೆತನದ ಕೆಫೆಯೂ ಸೇರಿ ಕೆಲವೆಡೆ ಅಕ್ರಮಾಗಿ ಆಕ್ಸಿಜನ್ ಕಾನ್ಸ್ಂಟ್ರೇಟರ್​ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದು ಪೊಲೀಸ್ ದಾಳಿ ವೇಳೆ ಬಯಲಾಗಿತ್ತು.

ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಮುಂದಿನ ಮಂಗಳವಾರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಪ್ರಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಸ್.ಕೆ.ಭಂಡಾರಿ ನಿಧನ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಗೆ ಹೆರಿಗೆ ಮಾಡಿಸಿದ ಪ್ರಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಎಸ್.ಕೆ.ಭಂಡಾರಿ ಕೊವಿಡ್ 19 ಸೋಂಕಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಂದಾಗಿ ನಿಧನರಾಗಿದ್ದಾರೆ. ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಹುಟ್ಟುವಾಗ ಡಾ.ಎಸ್.ಕೆ.ಬಂಡಾರಿಯವರೇ ಚಿಕಿತ್ಸೆ ನೀಡಿದ್ದರು. ಅಲ್ಲದೇ, ಪ್ರಿಯಾಂಕಾ ಗಾಂಧಿಯವರ ಇಬ್ಬರು ಮಕ್ಕಳು ಹುಟ್ಟುವಾಗಲೂ ದಿವಂಗತ ಡಾ.ಎಸ್.ಕೆ.ಭಂಡಾರಿಯವರೇ ಚಿಕಿತ್ಸೆ ನೀಡಿದ್ದರು. ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಅವರ ನಿಧನಕ್ಕೆ ಪ್ರಿಯಾಂಕಾ ಗಾಂಧಿ ಶೋಕ ವ್ಯಕ್ತಪಡಿಸಿದ್ದಾರೆ.

ಎರಡು ವಾರಗಳ ಹಿಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕೊವಿಡ್ ಸೋಂಕು ಪತ್ತೆಯಾಗಿತ್ತು. ಕೊವಿಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದ ಅವರು ಗುರುವಾರ ರಾತ್ರಿ 2 ಗಂಟೆಯ ಹೊತ್ತಿಗೆ ಅಸು ನೀಗಿದ್ದಾರೆ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ.ಡಿ.ಎಸ್.ರಾಣಾ ತಿಳಿಸಿದ್ದಾರೆ.

ಅವರ ಪತಿ, 97 ವರ್ಷದ ನಿವೃತ್ತ ಐಎಎಸ್ ಅಧಿಕಾರಿ. ಸದ್ಯ ಅವರೂ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿಯ ನಿಧನದ ಸುದ್ದಿಯನ್ನು ಅವರಿಗೆ ತಿಳಿಸಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅಲ್ಲದೇ ಈ ಅಪರೂಪದ ಜೋಡಿಯ ಮಗಳೂ ಸಹ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಮನೆಯ ಪಕ್ಕದ ಸಭಾಭವನವನ್ನೇ ಕೊವಿಡ್​ ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಕೊವಿಡ್ ದೃಢಪಟ್ಟ 1 ಗಂಟೆಯೊಳಗೆ ಐಸೋಲೇಶನ್ ಕಿಟ್ ಮನೆ ಬಾಗಿಲಿಗೆ; ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ

(Delhi High Court refuse to grant bail to Businessman Navneet Kalra on Oxygen Concentrator case)

Published On - 3:16 pm, Fri, 14 May 21