ಸ್ಕೂಟಿಯಲ್ಲಿದ್ದ ಯುವತಿಗೆ ಕಾರು ಗುದ್ದಿಸಿ ಎಳೆದೊಯ್ದ ಪ್ರಕರಣ, ಆಕೆಯ ರಕ್ಷಿಸಲು ಆರೋಪಿಗಳಿಗೆ ಸಾಕಷ್ಟು ಅವಕಾಶಗಳಿದ್ದವು: ದೆಹಲಿ ಪೊಲೀಸ್
ದೆಹಲಿಯಲ್ಲಿ ನಡೆದ ಹಿಟ್ ಆ್ಯಂಡ್ ಡ್ರ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವು ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ಅಂದು ಯುವತಿಯನ್ನು ರಕ್ಷಿಸಲು ಆರೋಪಿಗಳಿಗೆ ಸಾಕಷ್ಟು ಅವಕಾಶಗಳಿದ್ದವು, ಆದರೂ ಉದ್ದೇಶಪೂರ್ವಕವಾಗಿಯೇ ಎಳೆದೊಯ್ದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯಲ್ಲಿ ನಡೆದ ಹಿಟ್ ಆ್ಯಂಡ್ ಡ್ರ್ಯಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವು ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ಅಂದು ಯುವತಿಯನ್ನು ರಕ್ಷಿಸಲು ಆರೋಪಿಗಳಿಗೆ ಸಾಕಷ್ಟು ಅವಕಾಶಗಳಿದ್ದವು, ಆದರೂ ಉದ್ದೇಶಪೂರ್ವಕವಾಗಿಯೇ ಎಳೆದೊಯ್ದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂಝಾವಾಲಾ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಘಟನೆಯ ಏಕೈಕ ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಘಟನೆ ಹೇಗೆ ಸಂಭವಿಸಿತು ಮತ್ತು ಆರೋಪಿಗಳ ಪ್ರತಿಕ್ರಿಯೆ ಏನು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಈ ಘಟನೆಯು ಹೇಗೆ ಸಂಭವಿಸಿತು ಮತ್ತು ಡಿಸೆಂಬರ್ 31, 2022 ಮತ್ತು ಜನವರಿ 1, 2023 ರ ಮಧ್ಯರಾತ್ರಿ ಅವರ ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಯುವತಿ ಕಾರಿನ ಕೆಳಗೆ ಹೇಗೆ ಸಿಲುಕಿಕೊಂಡರು ಎಂದು ಈ ಸಾಕ್ಷಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಜನವರಿ 1 ರಂದು ಅಂಜಲಿ ಸಿಂಗ್ ಸ್ಕೂಟಿ ಕಾರಿಗೆ ಡಿಕ್ಕಿ ಹೊಡೆದು 4 ಕಿಮೀ ಎಳೆದೊಯ್ದಿತ್ತು. ಗಂಟೆಗಳ ನಂತರ ಐವರನ್ನು ಬಂಧಿಸಲಾಗಿತ್ತು. ಮಹಿಳೆ ಕಾರಿನಡಿ ಸಿಲುಕಿರುವುದು ಅರಿವಿಗೆ ಬಂದಿದೆ ಎಂದು ಪಾನಮತ್ತರಾಗಿದ್ದ ವ್ಯಕ್ತಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅವರು ಅದೇ ಪ್ರದೇಶದ ಸುತ್ತಲೂ ಚಾಲನೆ ಮಾಡುತ್ತಿದ್ದರು ಮತ್ತು ದೇಹವನ್ನು ಅಲುಗಾಡಿಸಲು ಅನೇಕ ಯು-ಟರ್ನ್ಗಳನ್ನು ತೆಗೆದುಕೊಂಡರು. ಆದರೆ ದೇಹ ಕೆಲ ಹೊತ್ತು ಕೆಳಗೆ ಬೀಳಲಿಲ್ಲ.
ಮತ್ತಷ್ಟು ಓದಿ: ದೆಹಲಿಯ ಯುವತಿಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಕಾರು; ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲು
ಹೊಸ ವರ್ಷದ ಮಧ್ಯರಾತ್ರಿ 3 ಗಂಟೆಗೆ 5 ಯುವಕರಿದ್ದ ಕಾರು ಸ್ಕೂಟಿಯಲ್ಲಿ ಹೋಗುತ್ತಿದ್ದ 23 ವರ್ಷದ ಯುವತಿಗೆ ಡಿಕ್ಕಿ ಹೊಡೆಯಿತು. ಆಕೆಯ ದೇಹ ಕಾರಿಗೆ ಸಿಲುಕಿಕೊಂಡಿತು. ನಂತರ ಸುಮಾರು 4 ಕಿ.ಮೀ ವರೆಗೆ ಕಾರಿನಲ್ಲಿ ಸಿಕ್ಕಿಕೊಂಡ ಆಕೆಯ ದೇಹವನ್ನು ಎಳೆದೊಯ್ದರು. ಹೀಗಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಕಾರನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಹಲವಾರು ವಿಷಯಗಳು ಬಯಲಾಗಿವೆ. ಆರೋಪಿಗಳು ಅಂಜಲಿ ದೇಹ ಕಾರಿಗೆ ಸಿಕ್ಕಿಕೊಂಡಿರುವುದು ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ. ಆ ವೇಳೆ ಭಯಗೊಂಡು ಕಾರು ಚಲಾಯಿಸಿದೆವು ಎಂದು ವಿಚಾರಣೆ ವೇಳೆ ತಿಳಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ