ದೆಹಲಿ ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ನ್ಯಾಯಂಗ ಬಂಧನ ಜ.10ರವರೆಗೆ ವಿಸ್ತರಣೆ

|

Updated on: Dec 11, 2023 | 6:04 PM

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂದು ಈಗಾಗಲೇ ನ್ಯಾಯಂಗ ಬಂಧನದಲ್ಲಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನ್ಯಾಯಂಗ ಬಂಧನ ಜ.10ರವರೆಗೆ ವಿಸ್ತರಣೆ ದೆಹಲಿ ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ನ್ಯಾಯಂಗ ಬಂಧನ ಜ.10ರವರೆಗೆ ವಿಸ್ತರಣೆ

ದೆಹಲಿ ಮದ್ಯ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ನ್ಯಾಯಂಗ ಬಂಧನ ಜ.10ರವರೆಗೆ ವಿಸ್ತರಣೆ
ಮನೀಶ್ ಸಿಸೋಡಿಯಾ
Follow us on

ದೆಹಲಿ, ಡಿ.11: ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia ) ಅವರ ನ್ಯಾಯಂಗ ಬಂಧನವನ್ನು 2024 ಜನವರಿ 10ರವರೆಗೆ ದೆಹಲಿ ನ್ಯಾಯಾಲಯ ವಿಸ್ತರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ ಹತ್ತರಂದು ವಿಚಾರಣೆ ನಡೆಸುವುದಾಗಿ ಕೋರ್ಟ್​​ ಹೇಳಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆ ನೀಡಲು ಜಾರಿ ನಿರ್ದೇಶನಾಲಯದ ವಕೀಲರಿಗೆ ಅವಕಾಶ ನೀಡಿದೆ.

ನವೆಂಬರ್ 21 ರಂದು ನ್ಯಾಯಾಲಯವು ಮನೀಶ್ ಸಿಸೋಡಿಯಾ ಪರ ವಕೀಲರಾದ ಕುಲದೀಪ್ ಸಿಂಗ್, ವಿಜಯ್ ನಾಯರ್, ಸಮೀರ್ ಮಹೇಂದ್ರು, ರಾಜೇಶ್ ಜೋಶಿ ಅವರಿಗೆ ಸಿಬಿಐ ಪ್ರಧಾನ ಕಚೇರಿಗೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಹೆಚ್ಚುವರಿ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಅಲ್ಲಿಯವರೆಗೆ ಈ ಪ್ರಕರಣದ ವಿಚಾರಣೆಯನ್ನು ಕಾದಿರಿಸಿತ್ತು.

ಈಗಾಗಲೇ ಈ ಪ್ರಕರಣದ ಬಗ್ಗೆ ನ್ಯಾಯಲಯಕ್ಕೆ ಸಲ್ಲಿರುವ ದಾಖಲೆಗಳು ಇನ್ನು ಬಾಕಿಯಿದ್ದು. ಅದನ್ನು ತಕ್ಷಣದಲ್ಲೇ ಸಲ್ಲಿಸಬೇಕು ಎಂದು ಕೋರ್ಟ್​​ ಹೇಳಿದೆ. ಈ ಕಾರಣಕ್ಕಾಗಿ ಮನೀಶ್ ಸಿಸೋಡಿಯಾ ನ್ಯಾಯಂಗ ಬಂಧನವನ್ನು ವಿಸ್ತರಿಸಿದೆ. ತಕ್ಷಣದಲ್ಲಿಯೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರ್ಟ್​​ ಅಭಿಪ್ರಾಯಪಟ್ಟಿದೆ.

ಜುಲೈನಲ್ಲಿ, 2021-22ರ ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿತು. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾಮೀನು ನೀಡಲು ಅವಳಿ ಷರತ್ತುಗಳನ್ನು ಮತ್ತು ಜಾಮೀನು ಮಂಜೂರು ಮಾಡಲು ತ್ರಿವಳಿ ಪರೀಕ್ಷೆಯನ್ನು ಪೂರೈಸಲು ಸಿಸೋಡಿಯಾ ಅವರಿಗೆ ಸಾಧ್ಯವಾಗಲಿಲ್ಲ ಎಂದು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರ ಪೀಠ ಹೇಳಿತ್ತು.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ, ಇತರ ಆರೋಪಿಗಳ ಆಸ್ತಿ ಜಪ್ತಿ

ದೆಹಲಿ ರೂಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರ ಆದೇಶವು ಸಮರ್ಥನೀಯವಾಗಿದೆ ಮತ್ತು ಈ ತೀರ್ಪಿನಲ್ಲಿ ಯಾವುದೇ ಅಕ್ರಮ ಇಲ್ಲ ಎಂದು ಹೈಕೋರ್ಟ್​​​ ಹೇಳಿತ್ತು. ಈ ಕಾರಣದಿಂದಲ್ಲೇ ಹೈಕೋರ್ಟ್​​ ಸಿಸೋಡಿಯಾ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ