Manish Sisodia: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ, ಇತರ ಆರೋಪಿಗಳ ಆಸ್ತಿ ಜಪ್ತಿ

ವಶಪಡಿಸಿಕೊಂಡ ಆಸ್ತಿಗಳಲ್ಲಿ ಅಮನ್​​ದೀಪ್ ಸಿಂಗ್ ಧಾಲ್, ರಾಜೇಶ್ ಜೋಶಿ, ಗೌತಮ್ ಮಲ್ಹೋತ್ರಾ ಮತ್ತು ಕೆಲವರ ಆಸ್ತಿ ಸೇರಿದೆ. ಸಿಸೋಡಿಯಾ ಮತ್ತು ಅವರ ಪತ್ನಿ ಸೀಮಾ ಅವರ ಎರಡು ಆಸ್ತಿಗಳು ಮತ್ತು ಅವರ ಬ್ಯಾಂಕ್ ಖಾತೆಗಳಲ್ಲಿದ್ದ ₹ 11 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Manish Sisodia: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ, ಇತರ ಆರೋಪಿಗಳ ಆಸ್ತಿ ಜಪ್ತಿ
ಮನೀಶ್ ಸಿಸೋಡಿಯಾ
Follow us
|

Updated on:Jul 07, 2023 | 8:01 PM

ದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ (Delhi Liquor Policy Case) ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ (Manish Sisodia) ಮತ್ತು ಇತರ ಆರೋಪಿಗಳಿಂದ ₹ 52 ಕೋಟಿಗಿಂತಲೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (Enforcement Directorate) ಜಪ್ತಿ ಮಾಡಿದೆ ಎಂದು ಎನ್​​​ಡಿಟಿವಿ ವರದಿ ಮಾಡಿದೆ. ವಶಪಡಿಸಿಕೊಂಡ ಆಸ್ತಿಗಳಲ್ಲಿ ಅಮನ್​​ದೀಪ್ ಸಿಂಗ್ ಧಾಲ್, ರಾಜೇಶ್ ಜೋಶಿ, ಗೌತಮ್ ಮಲ್ಹೋತ್ರಾ ಮತ್ತು ಕೆಲವರ ಆಸ್ತಿ ಸೇರಿದೆ. ಸಿಸೋಡಿಯಾ ಮತ್ತು ಅವರ ಪತ್ನಿ ಸೀಮಾ ಅವರ ಎರಡು ಆಸ್ತಿಗಳು ಮತ್ತು ಅವರ ಬ್ಯಾಂಕ್ ಖಾತೆಗಳಲ್ಲಿದ್ದ ₹ 11 ಲಕ್ಷವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಸೋಡಿಯಾ ಅವರ ನಿಕಟವರ್ತಿ ದಿಲ್ಲಿಯ ಉದ್ಯಮಿ ದಿನೇಶ್ ಅರೋರಾ ಅವರನ್ನು ಬಂಧಿಸಿದ ಒಂದು ದಿನದ ನಂತರ ಜಾರಿ ನಿರ್ದೇಶನಾಲಯ ಈ ರೀತಿ ಆಸ್ತಿ ಜಪ್ತಿ ಮಾಡಿದೆ.ದೆಹಲಿಯ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಇಡಿ ಪ್ರಕರಣವು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಪ್ರಕರಣಕ್ಕಿಂತ ಭಿನ್ನವಾಗಿದೆ.

ದೆಹಲಿಯ ಮಾಜಿ ಉಪಮುಖ್ಯಮಂತ್ರಿ  ಸಿಸೋಡಿಯಾ ಮತ್ತು ಇತರರು ದೆಹಲಿಯಲ್ಲಿ ಹೊಸ ಮದ್ಯ ಮಾರಾಟ ನೀತಿಯನ್ನು ತಂದ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವ್ಯವಹಾರ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಕಳೆದ ವರ್ಷ ಸಿಬಿಐ ತನಿಖೆಗೆ ಆದೇಶಿಸಿದ್ದರು.

ಇದಾದ ನಂತರ ದೆಹಲಿ ಸರ್ಕಾರವು ಹಳೆಯ ಮದ್ಯದ ನೀತಿಗೆ ಮರಳಿತು. ಏತನ್ಮಧ್ಯೆ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ದೆಹಲಿ ಸರ್ಕಾರವು ಹಳೆಯ ಮದ್ಯ ಮಾರಾಟ ನೀತಿಗೆ ಮರಳಿದೆ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿಮೋದಿ ಉಪನಾಮ ಪ್ರಕರಣದಲ್ಲಿ ಸಾವರ್ಕರ್ ವಿಷಯ ಪ್ರಸ್ತಾಪಿಸಿದ ಗುಜರಾತ್ ಹೈಕೋರ್ಟ್; ಕಾಂಗ್ರೆಸ್ ಕಿಡಿ

ಮಧ್ಯವರ್ತಿಗಳು, ವ್ಯಾಪಾರಿಗಳು ಮತ್ತು ಅಧಿಕಾರಶಾಹಿಗಳನ್ನು ಬಳಸಿಕೊಂಡು ತಮ್ಮ ಪರವಾಗಿ ದೆಹಲಿ ಮದ್ಯ ನೀತಿಯನ್ನು ರೂಪಿಸುವ ಉದ್ಯಮಿಗಳು ಮತ್ತು ರಾಜಕಾರಣಿಗಳ “ದಕ್ಷಿಣ ಲಾಬಿ” ಪ್ರಭಾವದ ಮೇಲೆ ಸಿಬಿಐ ತನಿಖೆ ಕೇಂದ್ರೀಕರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Fri, 7 July 23

ತಾಜಾ ಸುದ್ದಿ
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್