Delhi Liquor Scam Case: ಉದ್ಯಮಿ ಅರುಣ್ ಪಿಳ್ಳೈ ಬಂಧಿಸಿದ ಇ.ಡಿ

ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ಪಿಳ್ಳೈ ಅವರನ್ನು ಇಂದು ಜಾರಿ ನಿರ್ದೇಶನಾಲಯ ತಂಡವು (ಇಡಿ) ದೆಹಲಿಯಲ್ಲಿ ಬಂಧಿಸಿದೆ.

Delhi Liquor Scam Case:  ಉದ್ಯಮಿ ಅರುಣ್ ಪಿಳ್ಳೈ ಬಂಧಿಸಿದ ಇ.ಡಿ
ಸಾಮದರ್ಭಿಕ ಚಿತ್ರ

Updated on: Mar 07, 2023 | 11:44 AM

ದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣಕ್ಕೆ (Delhi Liquor Scam) ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ಪಿಳ್ಳೈ ಅವರನ್ನು ಇಂದು (ಮಾ.7) ಜಾರಿ ನಿರ್ದೇಶನಾಲಯ ತಂಡವು (ಇಡಿ) ದೆಹಲಿಯಲ್ಲಿ ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ ಪಿಳ್ಳೈ ಪ್ರಮುಖ ಆರೋಪಿಯಾಗಿದ್ದು, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಅವರ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಇ.ಡಿ ಕವಿತಾ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು.

ಕೆ ಕವಿತಾ ಅವರು ಮದ್ಯದ ಕಂಪನಿಯಲ್ಲಿ ಶೇ.65 ರಷ್ಟು ಪಾಲುದಾರಿಯನ್ನು ಹೊಂದಿದ್ದಾರೆ ಎಂದು ಇ.ಡಿ ಈ ಮೊದಲು ತನಿಖೆಯಲ್ಲಿ ಹೇಳಿತ್ತು. ಡಿಸೆಂಬರ್ 11, 2022 ರಂದು ಇ.ಡಿ ಕವಿತಾ ಅವರ ಮನೆಯ ಮೇಲೆ ದಾಳಿ ಮಾಡಿ, ಪ್ರಶ್ನಿಸಿತು. ಅಕ್ಟೋಬರ್ 2022ರಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಅರುಣ್ ಪಿಳ್ಳೈ ಅವರ ಸಹವರ್ತಿ ಅಭಿಷೇಕ್ ಬೋಯಿನ್‌ಪಲ್ಲಿ ಅವರನ್ನು ಬಂಧಿಸಿತು. ಅಭಿಷೇಕ್ ಅವರು ರಾಬಿನ್ ಡಿಸ್ಟ್ರಿಬ್ಯೂಷನ್ ಎಲ್‌ಎಲ್‌ಪಿ ಎಂಬ ಕಂಪನಿಯ ನಿರ್ದೇಶಕರಾಗಿದ್ದರು.

ಇದನ್ನೂ ಓದಿ: Liquor scam Case: ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಮನ್ಸ್​ ಕುರಿತು ಸಿಬಿಐಗೆ ಪತ್ರ ಬರೆದ ಕವಿತಾ

ಅಭಿಷೇಕ್ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ರಾಜಕೀಯ ಲಾಭಕ್ಕಾಗಿ ಕೆಲವು ಪಕ್ಷಗಳ ಜತೆಗೆ ಸಂಬಂಧವನ್ನು ಹೊಂದಿದ್ದರು. ಈ ಕಾರಣಕ್ಕೆ ಮದ್ಯದ ಉದ್ಯಮಿಗಳ ಜೊತೆಗೆ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಅರುಣ್ ಪಿಳ್ಳೈ ಅವರು ಅಭಿಷೇಕ್ ಮೂಲಕ ಕಮಿಷನ್ ಸಂಗ್ರಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಇಂದು ತಿಹಾರ್ ಜೈಲಿನಲ್ಲಿ ಅವರನ್ನು ವಿಚಾರಣೆ ನಡೆಸಲಿದೆ.

Published On - 10:30 am, Tue, 7 March 23