Mamata Banerjee: ನನ್ನ ರುಂಡವನ್ನು ಬೇಕಾದರೂ ಕತ್ತರಿಸಿ ಆದರೆ.. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೀಗೆ ಹೇಳಿದ್ಯಾಕೆ?
ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾಗಿ ತುಟ್ಟಿ ಭತ್ಯೆ ಅಥವಾ ಡಿಎ ನೀಡಬೇಕೆಂದು ಒತ್ತಾಯಿಸುತ್ತಿವೆ.
ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾಗಿ ತುಟ್ಟಿ ಭತ್ಯೆ ಅಥವಾ ಡಿಎ ನೀಡಬೇಕೆಂದು ಒತ್ತಾಯಿಸುತ್ತಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತುಟ್ಟಿಭತ್ಯೆ ವಿಚಾರದಲ್ಲಿ ಪ್ರತಿಪಕ್ಷಗಳ ಬೆಂಬಲಿತ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ರಾಜ್ಯದ ಉದ್ಯೋಗಿಗಳಿಗೆ ಹೆಚ್ಚಿನ ವೇತನ ನೀಡಲು ಹಣವಿಲ್ಲ, ಕೊಟ್ಟಷ್ಟೂ ಹೆಚ್ಚಿಗೆ ಕೇಳುತ್ತಲೇ ಇರುತ್ತಾರೆ, ಇನ್ನು ಎಷ್ಟು ಅಂತ ಕೊಡಲು ಸಾಧ್ಯ ಎಂದಿದ್ದಾರೆ.
ಪ್ರತಿಭಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ನಮ್ಮ ಸರ್ಕಾರದಿಂದ ಹೆಚ್ಚಿನ ಡಿಎ (ಡಿಯರ್ನೆಸ್ ಭತ್ಯೆ) ನೀಡಲು ಸಾಧ್ಯವಿಲ್ಲ, ನಮ್ಮ ಬಳಿ ಹಣವಿಲ್ಲ, ನಾವು ಹೆಚ್ಚುವರಿ ಶೇ. 3ರಷ್ಟು ಡಿಎ ನೀಡಿದ್ದೇವೆ, ನಿಮಗೆ ಸಂತೋಷವಿಲ್ಲದಿದ್ದರೆ ನೀವು ನನ್ನ ತಲೆಯನ್ನು ಕತ್ತರಿಸಬಹುದು ಎಂದಿದ್ದಾರೆ.
ರಾಜ್ಯ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಅವರು ಫೆಬ್ರವರಿ 15 ರಂದು ವಿಧಾನಸಭೆಯಲ್ಲಿ 2023-24 ನೇ ಸಾಲಿನ ಬಜೆಟ್ ಅನ್ನು ಮಂಡಿಸಿದರು. ಈ ಸಂದರ್ಭದಲ್ಲಿ, ಮಾರ್ಚ್‌ನಿಂದ ಸರ್ಕಾರವು ಶಿಕ್ಷಕರು ಮತ್ತು ಪಿಂಚಣಿದಾರರು ಸೇರಿದಂತೆ ತನ್ನ ನೌಕರರಿಗೆ ಶೇಕಡಾ 3 ರಷ್ಟು ಹೆಚ್ಚುವರಿ ಡಿಎ ಪಾವತಿಸಲಿದೆ ಎಂದು ಅವರು ಘೋಷಿಸಿದರು.
ಮತ್ತಷ್ಟು ಓದಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ಭೂ ಮಾಲೀಕತ್ವದ ದಾಖಲೆ ನೀಡಿದ ಮಮತಾ ಬ್ಯಾನರ್ಜಿ
ಇಲ್ಲಿಯವರೆಗೆ, ರಾಜ್ಯವು ಮೂಲ ವೇತನದ 3 ಪ್ರತಿಶತವನ್ನು ಡಿಎ ಆಗಿ ಪಾವತಿಸುತ್ತಿತ್ತು ಮತ್ತು ಬಜೆಟ್ ಘೋಷಣೆಯ ಅರ್ಥವೇನೆಂದರೆ, ಮಾರ್ಚ್‌ನಿಂದ ಶಿಕ್ಷಕರು ಮತ್ತು ಪಿಂಚಣಿದಾರರು ಸೇರಿದಂತೆ ತನ್ನ ನೌಕರರಿಗೆ ಹೆಚ್ಚುವರಿ 3 ಪ್ರತಿಶತ ಡಿಎಯನ್ನು ಸರ್ಕಾರ ಪಾವತಿಸಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾಗಿ ರಾಜ್ಯ ಸರ್ಕಾರಿ ನೌಕರರ ಡಿಎ ಬೇಡಿಕೆಯನ್ನು ಎರಡೂ ಪಕ್ಷಗಳು ಬೆಂಬಲಿಸುತ್ತಿವೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವೇತನ ಶ್ರೇಣಿಗಳು ಭಿನ್ನವಾಗಿವೆ. ಇಂದು ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಎಂ ಒಟ್ಟಿಗೆ ಸೇರಿಕೊಂಡಿವೆ.
ಯಾವ ಸರ್ಕಾರವು ವೇತನದೊಂದಿಗೆ ಇಷ್ಟು ರಜೆಗಳನ್ನು ನೀಡುತ್ತದೆ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಮಮತಾ ನಾನು ಸರ್ಕಾರಿ ನೌಕರರಿಗೆ 1.79 ಲಕ್ಷ ಕೋಟಿ ಡಿಎ ಪಾವತಿಸಿದ್ದೇನೆ. ನಾವು 40 ದಿನಗಳ ವೇತನ ಸಹಿತ ರಜೆ ನೀಡುತ್ತೇವೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ