Land For Jobs Case: ಲಾಲು ಪ್ರಸಾದ್ ಯಾದವ್ ಪುತ್ರಿ ಮನೆಗೆ ಸಿಬಿಐ ದಾಳಿ
ಆರ್ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಪ್ರಶ್ನಿಸಲು ಅವರ ಪುತ್ರಿ ಮಿಸಾ ಭಾರತಿ ಅವರ ಮನೆಗೆ ಇಂದು ಸಿಬಿಐ ದಾಳಿ ನಡೆಸಿದೆ.
ದೆಹಲಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣಕ್ಕೆ (Land For Jobs Case) ಸಂಬಂಧಿಸಿದಂತೆ ಆರ್ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರನ್ನು ಪ್ರಶ್ನಿಸಲು ಅವರ ಪುತ್ರಿ ಮಿಸಾ ಭಾರತಿ ಅವರ ಮನೆಗೆ ಇಂದು (ಮಾ.7) ಸಿಬಿಐ ದಾಳಿ ನಡೆಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ಅವರ ಪತ್ನಿ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮನೆಯ ಮೇಲೆ ಸೋಮವಾರದಂದು ( ಮಾ.6) ದಾಳಿ ನಡೆಸಿತ್ತು. ಈ ಬಗ್ಗೆ ಲಾಲು ಪ್ರಸಾದ್ ಯಾದವ್ ಅವರನ್ನು ಸಿಬಿಐ ಪ್ರಶ್ನಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿತ್ತು.
ಸಿಬಿಐ ಅಧಿಕಾರಿಗಳು ಸೋಮವಾರ ಲಾಲು ಅವರ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ಪಾಟ್ನಾದಲ್ಲಿರುವ ನಿವಾಸ ಮೇಲೆ ದಾಳಿ ಅವರನ್ನು ಅಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಮೊದಲು ವಿಚಾರಣೆ ನಡೆಸುದಾಗಿ ಸಿಬಿಐ ರಾಬ್ರಿ ದೇವಿ ಅವರಿಗೆ ನೋಟಿಸ್ ನೀಡಿದ್ದು, ಸೋಮವಾರ ಅವರನ್ನು ಪ್ರಶ್ನಿಸಿದೆ.
Delhi | A CBI team arrives at the residence of RJD MP Misa Bharti to question party chief and her father Lalu Prasad Yadav in connection with the land-for-job case. pic.twitter.com/KnTm2iPCXq
— ANI (@ANI) March 7, 2023
ಇದನ್ನೂ ಓದಿ: ರೈಲ್ವೆ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಕರಣ; ಲಾಲು ಪ್ರಸಾದ್ ಯಾದವ್ ವಿರುದ್ಧದ ತನಿಖೆ ಪುನರಾರಂಭಿಸಿದ ಸಿಬಿಐ
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿದೆ
ಕೇಂದ್ರೀಯ ತನಿಖಾ ದಳ (ಸಿಬಿಐ) ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಚಾರ್ಜ್ ಶೀಟ್ ಅನ್ನು ಸಲ್ಲಿಸಿದೆ ಮತ್ತು ವಿಶೇಷ ನ್ಯಾಯಾಲಯವು ಮಾರ್ಚ್ 15 ರಂದು ಲಾಲು ಪ್ರಸಾದ್ ಮತ್ತು ಅವರ ಕುಟುಂಬ ಸದಸ್ಯರು ಮತ್ತು ಇತರರನ್ನು ಒಳಗೊಂಡಂತೆ ಆರೋಪಿಗಳಿಗೆ ಸಮನ್ಸ್ ನೀಡಿದೆ.
Published On - 11:14 am, Tue, 7 March 23