ತನ್ನನ್ನು ಗೇಲಿ ಮಾಡಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ

ತನ್ನನ್ನು ಗೇಲಿ ಮಾಡಿದ್ದಕ್ಕೆ ಬಾಲಕಿ ಮೇಲೆ ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬ ದಾಳಿ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮುಖರ್ಜಿ ನಗರದ ಲೈಬ್ರರಿಯಲ್ಲಿ ಓದಲು ಬರುತ್ತಿದ್ದ ಬಾಲಕಿಯು ಕೂಡ ಗೇಲಿ ಮಾಡಿದಾಗ ಆರೋಪಿ ಅಲ್ಲಿಯೇ ತರಕಾರಿ ಅಂಗಡಿಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಬಂದು ಆಕೆಗೆ ತಿವಿದಿದ್ದಾನೆ.

ತನ್ನನ್ನು ಗೇಲಿ ಮಾಡಿದ್ದಕ್ಕೆ ಮಹಿಳೆಗೆ ನಡುರಸ್ತೆಯಲ್ಲಿ ಚಾಕುವಿನಿಂದ ಇರಿದ ವ್ಯಕ್ತಿ
ದೆಹಲಿ ಕ್ರೈಂ
Image Credit source: News 18

Updated on: Mar 24, 2024 | 10:10 AM

ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ನಡು ರಸ್ತೆಯಲ್ಲೇ ಚಾಕುವಿನಿಂದ ಪದೇ ಪದೇ ಇರಿದಿರುವ ಘಟನೆ ದೆಹಲಿಯ ಮುಖರ್ಜಿ ನಗರದಲ್ಲಿ ನಡೆದಿದೆ. ಮಾರ್ಚ್ 22 ರಂದು ಈ ಘಟನೆ ನಡೆದಿದೆ. ಮುಖರ್ಜಿ ನಗರದ ವಿದ್ಯಾರ್ಥಿಗಳು ಅಮಾನ್​ನನ್ನು ಗೇಲಿ ಮಾಡಿದ್ದರು. ಆ ಪ್ರದೇಶದಲ್ಲಿ ಓಡಾಡುತ್ತಿದ್ದವರೆಲ್ಲಾ ಆತನನ್ನು ಹುಚ್ಚ ಎಂದು ಕರೆಯುತ್ತಿದ್ದರು. ಮುಖರ್ಜಿ ನಗರದ ಲೈಬ್ರರಿಯಲ್ಲಿ ಓದಲು ಬರುತ್ತಿದ್ದ ಮಹಿಳೆ ಕೂಡ ಗೇಲಿ ಮಾಡಿದಾಗ ಆರೋಪಿ ಅಲ್ಲಿಯೇ ತರಕಾರಿ ಅಂಗಡಿಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಬಂದು ಆಕೆಗೆ ತಿವಿದಿದ್ದಾನೆ.

ಅಲ್ಲಿದ್ದವರ್ಯಾರೋ ಮಹಿಳೆ ಮೇಲೆ ನಡೆಯುತ್ತಿದ್ದ ಹಠಾತ್ ದಾಳಿಯನ್ನು ತಡೆಯಲು ಪ್ರಯತ್ನಿಸಿದ್ದರಿಂದ ಬಾಲಕಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಸಿಸಿಟಿವಿ ದೃಶ್ಯಾವಳಿಯಲ್ಲಿ, ವ್ಯಕ್ತಿ ಹುಡುಗಿಯ ಕಡೆಗೆ ಓಡಿ, ನೆಲಕ್ಕೆ ತಳ್ಳಿ ನಂತರ ನಾಲ್ಕೈದು ಬಾರಿ ಇರಿದಿದ್ದಾನೆ. ನಂತರ ಆತ ಸ್ಥಳದಿಂದ ಓಡಿ ಹೋಗಿದ್ದಾನೆ.

ಆತ ದಾಳಿ ಮಾಡಿದ ಮಹಿಳೆ ಮುಖರ್ಜಿ ನಗರಕ್ಕೆ ಗ್ರಂಥಾಲಯದಲ್ಲಿ ಓದಲು ಬರುತ್ತಿದ್ದಳು. ನಂತರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿದ ನಂತರ ಓಡಿಹೋಗಲು ಪ್ರಯತ್ನಿಸಿದ್ದಾನೆ.

ಮತ್ತಷ್ಟು ಓದಿ: ತಂದೆಯನ್ನು ಕೊಲ್ಲಲು ಮೂವರು ಶೂಟರ್​ಗಳನ್ನು ನೇಮಿಸಿದ್ದ ಬಾಲಕನ ಬಂಧನ

ಅವರು ಆರೋಪಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ, ಶಂಕಿತ ವ್ಯಕ್ತಿ ಮತ್ತೆ ಬಾಲಕಿ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಾನೆ, ಆಗ ಇನ್ನೊಬ್ಬರು ಬಂದು ತಡೆದಿದ್ದಾರೆ. ನಂತರ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ