AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ರಾಜಕೀಯ ಅಖಾಡದಲ್ಲಿ ಕರ್ನಾಟಕದ ಮಾಜಿ IAS-IPS: ಇಬ್ಬರಲ್ಲೂ ಇದೆ ಅದೊಂದು ಸಾಮ್ಯತೆ

Lok Sabha Election 2024: ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ತಿರುವಳ್ಳೂರು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮಾಜಿ ಐಎಎಸ್ ಅಧಿಕಾರಿ ​ಸಸಿಕಾಂತ್​ ಸೆಂಥಿಲ್ ಸ್ಪರ್ಧಿಸುತ್ತಿದ್ದರೇ, ಕೊಯಮತ್ತೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಸ್ಪರ್ಧಿಸುತ್ತಿದ್ದಾರೆ. ಇವರಿಬ್ಬರಲ್ಲು ಇದೆ ಸಾಮ್ಯತೆ.

ತಮಿಳುನಾಡು ರಾಜಕೀಯ ಅಖಾಡದಲ್ಲಿ ಕರ್ನಾಟಕದ ಮಾಜಿ IAS-IPS: ಇಬ್ಬರಲ್ಲೂ ಇದೆ ಅದೊಂದು ಸಾಮ್ಯತೆ
ಸಸಿಕಾಂತ್​ ಸೆಂಥಿಲ್, ಅಣ್ಣಮಲೈ
Follow us
ವಿವೇಕ ಬಿರಾದಾರ
|

Updated on:Mar 24, 2024 | 11:45 AM

ಚೆನ್ನೈ, ಮಾರ್ಚ್​ 24: ಲೋಕಸಭೆ ಚುನಾವಣೆಗೆ (Lok Sabha Election) ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಪ್ರಕಟವಾಗುತ್ತಿವೆ. ಕಾಂಗ್ರೆಸ್ (Congress)​ ಶನಿವಾರ (ಮಾ.23) ರಂದು ನಾಲ್ಕನೇ ಪಟ್ಟಿ ಘೋಷಣೆ ಮಾಡಿದೆ. ಈ ಪಟ್ಟಿಯಲ್ಲಿ 46 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಇದರಲ್ಲಿ ಕಾಂಗ್ರೆಸ್​ ಹೈಕಮಾಂಡ್​ ಮಾಜಿ ಐಎಎಸ್​ ಅಧಿಕಾರಿ ಸಸಿಕಾಂತ್​ ಸೆಂಥಿಲ್ (Sasikanth Senthil)​ ಅವರಿಗೂ ಟಿಕೆಟ್​ ನೀಡಿದ್ದು, ತಿರುವಳ್ಳೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಸಿಕಾಂತ್​ ಸೆಂಥಿಲ್ ಅವರು ಕರ್ನಾಟಕದ ದಕ್ಷಿಣ ಕನ್ನಡದಲ್ಲಿ (Dakshin Kannada) ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು.

ಸಸಿಕಾಂತ್​ ಸೆಂಥಿಲ್​ ಅವರು ಮೂಲತಃ ತಮಿಳುನಾಡಿನವರು. ಇವರು 2009ನೇ ಬ್ಯಾಚ್​​ನ ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿಯಾಗಿದ್ದರು. 2019ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗಲೇ ನಾಗರೀಕ ಸೇವೆಗೆ ರಾಜಿನಾಮೆ ನೀಡಿದರು. ಸಸಿಕಾಂತ್​ ಸೆಂಥಿಲ್ ಅವರು ರಾಜಿನಾಮೆ ನೀಡುವಾಗಲೇ ರಾಜಕೀಯಕ್ಕೆ ಬರುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಕಾಂಗ್ರೆಸ್​ ಪಕ್ಷವನ್ನು ಸೇರಿದರು.

ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲವಿಗೆ ಪ್ರಮುಖ ಪಾತ್ರ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಅಭೂತಪೂರ್ವ ಬಹುಮತದೊಂದಿಗೆ ಗೆಲುವು ಸಾಧಿಸುವಲ್ಲಿ ಸಸಿಕಾಂತ್​ ಸೆಂಥಿಲ್​ ಅವರ ಮಹತ್ವದ ಪಾತ್ರವಿದೆ. ಹೌದು ಕಾಂಗ್ರೆಸ್​ ಸೇರಿದ್ದ ಸಸಿಕಾಂತ್​ ಸೆಂಥಿಲ್​ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್​ ವಾರ್​ ರೂಂನ ಮುಖ್ಯಸ್ಥರಾಗಿದ್ದರು. ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿಯೂ ಪಕ್ಷದ ಸಾಮಾಜಿಕ ಜಾಲತಾಣಗಳ ಉಸ್ತುವಾರಿಯಾಗಿದ್ದರು. ಅಲ್ಲದೆ ಐದು ಗ್ಯಾರೆಂಟಿ ಯೋಜನೆಗಳ ಹಿಂದೆ ಕೂಡ ಸಸಿಕಾಂತ್​​ ಸೆಂಥಿಲ್​ರ ಪಾತ್ರ ಪ್ರಮುಖವಾಗಿತ್ತು.

ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನನ್ನು​ ಗೆಲ್ಲಿಸುವ ಹೊಣೆ ಜಾರಕಿಹೊಳಿಗೆ, ಪ್ರಿಯಾಂಕಾರನ್ನ ಗೆಲ್ಲಿಸುವ ಜವಾಬ್ದಾರಿ ಹೆಬ್ಬಾಳ್ಕರ್​ಗೆ !

ಸಸಿಕಾಂತ್​ಗೂ ಮತ್ತು ಅಣ್ಣಮಲೈಗೂ ಇದೆ ಸಾಮ್ಯತೆ

ಸಸಿಕಾಂತ್ ಸೆಂಥಿಲ್ ಮತ್ತು ಕೆ ಅಣ್ಣಾಮಲೈ ಇಬ್ಬರೂ ಮೂಲತಃ ತಮಿಳುನಾಡಿನವರು ಮತ್ತು ಕರ್ನಾಟಕ ಕೇಡರ್ ಯೂನಿಯನ್ ನಾಗರಿಕ ಸೇವೆಯಿಂದ ಬಂದವರು. ಸಸಿಕಾಂತ್ ಸೆಂಥಿಲ್ ಅವರು 2009ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ಅಣ್ಣಮಲೈ 2011ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. ಇಬ್ಬರೂ ನಾಗರೀಕ ಸೇವೆಗೆ ತ್ಯಜಿಸಿ ರಾಜಕೀಯ ಪ್ರವೇಶಿಸಿದ್ದಾರೆ. ಇಬ್ಬರು ರಾಜಕೀಯ ಸೈದ್ಧಾಂತಿಕವಾಗಿ ವಿರುದ್ಧವಾಗಿರುತ್ತಾರೆ. ತಿರುವಳ್ಳೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೆಂಥಿಲ್ ಮತ್ತು ಕೊಯಮತ್ತೂರಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಅಣ್ಣಾಮಲೈ ಸ್ಪರ್ಧಿಸುತ್ತಿದ್ದಾರೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್​ನಿಂದ ಚುನಾವಣಾ​ ಉಸ್ತುವಾರಿಯಾಗಿ ಸೆಂಥಿಲ್ ಮತ್ತು ಬಿಜೆಪಿಯಿಂದ ಚುನಾವಣಾ ಉಸ್ತುವಾರಿಯಾಗಿ ಅಣ್ಣಾಮಲೈ ಕಾರ್ಯನಿರ್ವಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:45 am, Sun, 24 March 24

VIDEO: ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್
VIDEO: ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್
ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ?
ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ?
ಕಷ್ಟಗಳನ್ನ ದೇವರೇ ಕಲ್ಪಿಸುವುದಾ ಅಥವಾ ಸ್ವಯಂಕೃತ ತಪ್ಪಾ?
ಕಷ್ಟಗಳನ್ನ ದೇವರೇ ಕಲ್ಪಿಸುವುದಾ ಅಥವಾ ಸ್ವಯಂಕೃತ ತಪ್ಪಾ?
Daily horoscope: ಇಂದು ಯಾವೆಲ್ಲಾ ರಾಶಿಗಳ ‘ಯೋಗ’ಬಲ ಹೇಗಿದೆ ತಿಳಿಯಿರಿ
Daily horoscope: ಇಂದು ಯಾವೆಲ್ಲಾ ರಾಶಿಗಳ ‘ಯೋಗ’ಬಲ ಹೇಗಿದೆ ತಿಳಿಯಿರಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಬೆನ್ನು ನೋವಿಗೆ ಕಾರಣವೇನು? ಯೋಗದ ಮೂಲಕ ಪರಿಹರಿಸಿಕೊಳ್ಳುವುದು ಹೇಗೆ?
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ಐದು ದಿನಗಳ ಕಾಲ ಸುಟ್ಟ ಗಾಯಗಳೊಂದಿಗೆ ಜೀವನ್ಮರಣ ಹೋರಾಟ ನಡೆಸಿದ ಬಾಲಕ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ
ವಿದ್ಯುತ್ ಚಿತಾಗಾರದ ಕರೆಂಟ್ ಬಿಲ್ ಬಾಕಿ: ಬಡವಾಯ್ತೇ ಬಿಟಿಡಿಎ