ರಣರಂಗವಾದ ದೆಹಲಿ.. ಹಸಿರು ಮಾರ್ಗದ ಮೆಟ್ರೋ ಸಂಚಾರ ಬಂದ್
ಬಾವುಟ ಕೈಯಲ್ಲಿ ಹಿಡಿದು ದೇಶದ ಬಗ್ಗೆ ಹೆಮ್ಮೆ ಪಡಬೇಕಿದ್ದ ದಿನದಂದೆ ದೇಶದಲ್ಲೊಂದು ಭಯಾನಕ ಘಟನೆ ನಡೆಯುತ್ತಿದೆ. ಸರ್ಕಾರ, ರೈತ, ಪೊಲೀಸರ ನಡುವೆ ಕಾಳಗ ಶುರುವಾಗಿದೆ. ಕೃಷಿ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ ರೈತರು ದೆಹಲಿಗೆ ಕಾಲಿಟ್ಟಿದ್ದಾರೆ. ಆದ್ರೆ ಪೊಲೀಸರು ರೈತರ ಯೋಜನೆಯನ್ನು ವಿಫಲ ಮಾಡಲು ಪಣತೊಟ್ಟಿದ್ದಾರೆ. ಈ ನಡುವೆ ಪೊಲೀಸರು ಮತ್ತು ರೈತರ ನಡುವೆ ಭಾರಿ ಸಂಘರ್ಷ ಉಂಟಾಗುತ್ತಿದೆ.
ದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಮಣ್ಣಿನ ಮಕ್ಕಳ ಸಮರ ಹಿಂಸಾಚಾರಕ್ಕೆ ತಿರುಗುತ್ತಿದೆ. ಸಾವಿರಾರು ರೈತರು ಟ್ರಾಕ್ಟರ್ಗಳ ಮೂಲಕ ಪೊಲೀಸರ ಭದ್ರತೆಯನ್ನು ಭೇದಿಸಿ ಪಾರ್ಲಿಮೆಂಟ್ನತ್ತ ನುಗ್ಗುತ್ತಿದ್ದಾರೆ. ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಮೆಟ್ರೋ ಸಂಚಾರ ಬಂದ್ ಮಾಡಲಾಗಿದೆ.
ಬಾವುಟ ಕೈಯಲ್ಲಿ ಹಿಡಿದು ದೇಶದ ಬಗ್ಗೆ ಹೆಮ್ಮೆ ಪಡಬೇಕಿದ್ದ ದಿನದಂದೆ ದೇಶದಲ್ಲೊಂದು ಭಯಾನಕ ಘಟನೆ ನಡೆಯುತ್ತಿದೆ. ಸರ್ಕಾರ, ರೈತ, ಪೊಲೀಸರ ನಡುವೆ ಕಾಳಗ ಶುರುವಾಗಿದೆ. ಕೃಷಿ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಿ ರೈತರು ದೆಹಲಿಗೆ ಕಾಲಿಟ್ಟಿದ್ದಾರೆ. ಆದ್ರೆ ಪೊಲೀಸರು ರೈತರ ಯೋಜನೆಯನ್ನು ವಿಫಲ ಮಾಡಲು ಪಣತೊಟ್ಟಿದ್ದಾರೆ. ಈ ನಡುವೆ ಪೊಲೀಸರು ಮತ್ತು ರೈತರ ನಡುವೆ ಭಾರಿ ಸಂಘರ್ಷ ಉಂಟಾಗುತ್ತಿದೆ.
ಟ್ರಾಕ್ಟರ್ಗಳ ಮೂಲಕ ಬ್ಯಾರಿಕೇಡ್ಗಳನ್ನು ಉಡಾಯಿಸಿ ರೈತರು ದೊಣ್ಣೆ, ಮಾರಕಾಸ್ತ್ರ ಹಿಡಿದು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ರೆ, ಪೊಲೀಸರು ರೈತರ ಮೇಲೆ ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ ಮಾಡ್ತಿದ್ದಾರೆ. ಒಬ್ಬರನೊಬ್ಬರು ತಡೆಯಲು ಹರ ಸಾಹಸಗಳೇ ನಡೆಯುತ್ತಿದೆ. ಗಣರಾಜ್ಯೋತ್ಸವ ದಿನದಂತೆ ರಾಜಧಾನಿ ರಣರಂಗವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ 11 ಮೆಟ್ರೋ ನಿಲ್ದಾಣಗಳು ಸಂಪೂರ್ಣ ಬಂದ್ ಆಗಿವೆ. ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಮೆಟ್ರೋ ಬಂದ್ ಮಾಡಲಾಗಿದೆ.
#WATCH Protesters break barricade, attack police personnel and vandalise police vehicle at ITO in central Delhi pic.twitter.com/1ARRUX6I8E
— ANI (@ANI) January 26, 2021
ತೀವ್ರ ಸ್ವರೂಪ ಪಡೆದ ಪ್ರತಿಭಟನೆ.. ರೈತರ ಮೇಲೆ ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ