Manish Sisodia:17 ತಿಂಗಳ ನಂತರ ಜೈಲಿನಿಂದ ಹೊರಬಂದ ಮನೀಶ್ ಸಿಸೋಡಿಯಾ

|

Updated on: Aug 09, 2024 | 7:46 PM

ಇಂದು ನಾನು ನಿಮ್ಮಿಂದ ಮತ್ತು ಬಾಬಾ ಸಾಹೇಬರ ಸಂವಿಧಾನದಿಂದ ಹೊರಬಂದಿದ್ದೇನೆ, ಸರ್ವಾಧಿಕಾರದ ವಿರುದ್ಧ ಮಾತನಾಡುವ ಸಾಮಾನ್ಯ ವ್ಯಕ್ತಿಯನ್ನು ನೀವು ಜೈಲಿಗೆ ಹಾಕಿದರೆ, ಸಂವಿಧಾನ ಅವರನ್ನು ಕಾಪಾಡುತ್ತದೆ. ಇದು ಸಂವಿಧಾನದ ಶಕ್ತಿ, ಅರವಿಂದ್ ಕೇಜ್ರಿವಾಲ್ ಶೀಘ್ರದಲ್ಲೇ ಹೊರಬರುತ್ತಾರೆ ಎಂದು ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಮಾತನಾಡಿದ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

Manish Sisodia:17 ತಿಂಗಳ ನಂತರ ಜೈಲಿನಿಂದ ಹೊರಬಂದ ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ
Follow us on

ದೆಹಲಿ ಆಗಸ್ಟ್ 09: ಆಪಾದಿತ ಮದ್ಯ ನೀತಿ ಹಗರಣದಲ್ಲಿ ದೆಹಲಿ ಮಾಜಿ ಉಪ ಮುಖ್ಯಮಂತ್ರಿಗೆ ಸುಪ್ರೀಂಕೋರ್ಟ್ (Supreme Court) ಜಾಮೀನು ನೀಡಿದ ಕೆಲವೇ ಗಂಟೆಗಳ ನಂತರ ಆಪ್ ನಾಯಕ ಮನೀಶ್ ಸಿಸೋಡಿಯಾ (Manish Sisodia) ಶುಕ್ರವಾರ ಸಂಜೆ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.  ಫೆಬ್ರವರಿ 2023 ರಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಸಿಸೋಡಿಯಾ ಬಂಧಮುಕ್ತರಾಗುತ್ತಿದ್ದಂತೆ ಆಮ್ ಆದ್ಮಿ ಪಕ್ಷದ (AAP) ಕಾರ್ಯಕರ್ತರು  ಸಂಭ್ರಮಾಚರಣೆ ಮಾಡಿದ್ದಾರೆ. ತೆರೆದ ವಾಹನದಲ್ಲಿ ಸಿಸೋಡಿಯಾ  ಮೆರವಣಿಗೆ ನಡೆಸಿದ್ದು , ಕಾರ್ಯಕರ್ತರು ಮತ್ತು ಬೆಂಬಲಿಗರು ಹೂವಿನ ಮಳೆಗೆರೆದು ಅವರನ್ನು ಸ್ವಾಗತಿಸಿದ್ದಾರೆ.

ಇಂದು ನಾನು ನಿಮ್ಮಿಂದ ಮತ್ತು ಬಾಬಾ ಸಾಹೇಬರ ಸಂವಿಧಾನದಿಂದ ಹೊರಬಂದಿದ್ದೇನೆ, ಸರ್ವಾಧಿಕಾರದ ವಿರುದ್ಧ ಮಾತನಾಡುವ ಸಾಮಾನ್ಯ ವ್ಯಕ್ತಿಯನ್ನು ನೀವು ಜೈಲಿಗೆ ಹಾಕಿದರೆ, ಸಂವಿಧಾನ ಅವರನ್ನು ಕಾಪಾಡುತ್ತದೆ. ಇದು ಸಂವಿಧಾನದ ಶಕ್ತಿ, ಅರವಿಂದ್ ಕೇಜ್ರಿವಾಲ್ ಶೀಘ್ರದಲ್ಲೇ ಹೊರಬರುತ್ತಾರೆ ಎಂದು ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ  ಮಾತನಾಡಿದ ಸಿಸೋಡಿಯಾ ಹೇಳಿದ್ದಾರೆ.

ಜೈಲಿನಿಂದ ಬಂಧಮುಕ್ತರಾದ ನಂತರ ಸಿಸೋಡಿಯಾ ಮಾತು


ಸರ್ವಾಧಿಕಾರಿ ಇಡೀ ಪ್ರತಿಪಕ್ಷಗಳನ್ನು ಜೈಲಿಗೆ ಹಾಕುವ ಕನಸು ಕಂಡಿದ್ದರು. ಇದೇ ಸಂವಿಧಾನದ ನೆರವಿನಿಂದ ಅರವಿಂದ್ ಕೇಜ್ರಿವಾಲ್ ಕೂಡ ಜೈಲಿನಿಂದ ಹೊರಬರಲಿದ್ದಾರೆ. ಜೈಲ್ ಕೆ ತಾಲೇ ಟೂಟೇಂಗೆ, ಅರವಿಂದ್ ಕೇಜ್ರಿವಾಲ್ ಚೂಟೇಂಗೆ ಎಂದು ಸಿಸೋಡಿಯಾ ಹೇಳಿದ್ದಾರೆ.

ದೆಹಲಿಯ ವಿವಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ಸಿಸೋಡಿಯಾ ಜೈಲಿನಿಂದ ಹೊರಬರುತ್ತಿದ್ದಂತೆ ಧ್ವಜಗಳನ್ನು ಹಿಡಿದು ಜೋರಾಗಿ ಹರ್ಷೋದ್ಗಾರ ಮಾಡುತ್ತಾ ಎಎಪಿ ಬೆಂಬಲಿಗರ ಗುಂಪು ಸಿಸೋಡಿಯಾ ಅವರ ಆಗಮನಕ್ಕಾಗಿ ಕಾಯುತ್ತಿತ್ತು.

ಪಕ್ಷದ ನಾಯಕರಾದ ಅತಿಶಿ ಮರ್ಲೆನಾ ಮತ್ತು ಸಂಜಯ್ ಸಿಂಗ್ ಅವರೊಂದಿಗೆ ಬಂದಿದ್ದ ಸಿಸೋಡಿಯಾ “ನಿಮ್ಮ ಪ್ರೀತಿ ಮತ್ತು ದೇವರ ದಯೆಯಿಂದ ನಾನು ಹೊರಬಂದಿದ್ದೇನೆ. ಸರ್ವಾಧಿಕಾರಿಗಳು ನಮ್ಮನ್ನು ಜೈಲಿಗೆ ಹಾಕಬಹುದು, ಆದರೆ ಬಾಬಾ ಸಾಹೇಬರ ಸಂವಿಧಾನವು ನಮ್ಮನ್ನು ಉಳಿಸುತ್ತದೆ. ಬೆಳಿಗ್ಗೆ ಈ ಆದೇಶ ಬಂದಾಗಿನಿಂದ, ನನ್ನ ಚರ್ಮದ ಪ್ರತಿ ಇಂಚು ಬಾಬಾಸಾಹೇಬರಿಗೆ ಋಣಿಯಾಗಿದೆ. ಬಾಬಾಸಾಹೇಬರಿಗೆ ಈ ಋಣವನ್ನು ಹೇಗೆ ತೀರಿಸುವುದು ಎಂದು ನನಗೆ ಅರ್ಥವಾಗುತ್ತಿಲ್ಲ.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರ ಪೀಠ ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಷರತ್ತುಗಳನ್ನು ವಿಧಿಸದೆ ಸಿಸೋಡಿಯಾಗೆ ಜಾಮೀನು ನೀಡಿದೆ.

ಆಗಸ್ಟ್ 6 ರಂದು ಸಿಸೋಡಿಯಾ ಅವರ ಮನವಿಯ ತೀರ್ಪನ್ನು ಕಾಯ್ದಿರಿಸಿದ ಪೀಠ, ತ್ವರಿತ ವಿಚಾರಣೆಯ ಹಕ್ಕನ್ನು ನಿರಾಕರಿಸಲಾಗಿದೆ ಎಂದು ತೀರ್ಪು ನೀಡಿತು.

ಇದನ್ನೂ ಓದಿ: ಪರಿಹಾರ ಮತ್ತು ಪುನರ್ವಸತಿ ಪರಿಶೀಲನೆಗಾಗಿ ನಾಳೆ ವಯನಾಡ್‌ಗೆ ಭೇಟಿ ನೀಡಲಿದ್ದಾರೆ ಮೋದಿ

“ಸುಮಾರು 17 ತಿಂಗಳುಗಳ ಸುದೀರ್ಘ ಅವಧಿಯ ಸೆರೆವಾಸ ಮತ್ತು ವಿಚಾರಣೆಯನ್ನು ಪ್ರಾರಂಭಿಸದ ಕಾರಣ, ಮೇಲ್ಮನವಿದಾರ (ಸಿಸೋಡಿಯಾ) ತ್ವರಿತ ವಿಚಾರಣೆಯ ಹಕ್ಕನ್ನು ವಂಚಿತಗೊಳಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಪೀಠವು ತನ್ನ 38 ಪುಟಗಳ ತೀರ್ಪಿನಲ್ಲಿ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Fri, 9 August 24