Delhi: ಇತ್ತೀಚೆಗಷ್ಟೇ ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಬಾಲಕರು ಮೃತಪಟ್ಟಿದ್ದ ಜಾಗದಲ್ಲೇ ಮತ್ತೋರ್ವ ಬಾಲಕನ ಮೇಲೆ ನಾಯಿಗಳ ದಾಳಿ
ಕಳೆದ ತಿಂಗಳು ಇಬ್ಬರು ಸಹೋದರರು ಬೀದಿ ನಾಯಿ(Stray Dog)ಗಳ ದಾಳಿಯಿಂದ ಮೃತಪಟ್ಟಿದ್ದರು, ಇದೀಗ ಅದೇ ಜಾಗದಲ್ಲಿ ಮತ್ತೋರ್ವ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ.
ಕಳೆದ ತಿಂಗಳು ಇಬ್ಬರು ಸಹೋದರರು ಬೀದಿ ನಾಯಿ(Stray Dog)ಗಳ ದಾಳಿಯಿಂದ ಮೃತಪಟ್ಟಿದ್ದರು, ಇದೀಗ ಅದೇ ಜಾಗದಲ್ಲಿ ಮತ್ತೋರ್ವ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ. ದಕ್ಷಿಣ ದೆಹಲಿಯ ವಸಂತ್ ಕುಂಜ್ ಬಳಿಯ ಅದೇ ಪ್ರದೇಶದಲ್ಲಿ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ. ಬಾಲಕ ವಸಂತ ಕುಂಜ್‌ನ ರಂಗಪುರಿ ಬೆಟ್ಟದ ಬಳಿಯ ತಮ್ಮ ಮನೆಯ ಸಮೀಪವಿರುವ ಅಂಗಡಿಯೊಂದಕ್ಕೆ ಹೋಗುತ್ತಿದ್ದಾಗ ಕನಿಷ್ಠ 14 ನಾಯಿಗಳ ಗುಂಪು ಸುತ್ತುವರೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕ ಸ್ಥಳದಿಂದ ಓಡಿ ಹೋಗಲು ಪ್ರಯತ್ನ ನಡೆಸಿದ್ದ ಆದರೆ ನಾಯಿಗಳು ಆತನ ಮೇಲೆ ದಾಳಿ ನಡೆಸಿ ಕೈಗಳು, ಭುಜಗಳು, ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ಕಚ್ಚಿವೆ. ಸಹಾಯಕ್ಕಾಗಿ ಕೂಗಿಕೊಂಡಿದ್ದು ಕೇಳಿ ಕೆಲವರು ಧಾವಿಸಿ ನಾಯಿಗಳನ್ನು ಓಡಿಸಿದರು. ಆದರೆ ಅಷ್ಟರಲ್ಲಾಗಲೇ ಬಾಲಕ ತೀವ್ರವಾಗಿ ಗಾಯಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದವರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು, ಆತನ ದೇಹದಲ್ಲಿ 12ಕ್ಕಿಂತಲೂ ಹೆಚ್ಚು ಕಡೆ ಗಾಯಗಳಾಗಿರುವುದು ತಿಳಿದುಬಂದಿದೆ. ಚಿಕಿತ್ಸೆ ಬಳಿಕ ಬಾಲಕನನ್ನು ಮನೆಗೆ ಕರೆದೊಯ್ಯಲಾಗಿದೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಆತಂಕಕಾರಿಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮತ್ತಷ್ಟು ಓದಿ: Video: ಸ್ಕೂಟಿಯನ್ನು ಅಟ್ಟಿಸಿಕೊಂಡು ಬಂದ ನಾಯಿಗಳು, ಭಯದಲ್ಲಿ ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದ ಮಹಿಳೆಯರು
ಅಕ್ಕಪಕ್ಕದಲ್ಲಿ ನೂರಾರು ಬೀದಿ ನಾಯಿಗಳಿದ್ದು, ಪಾಲಿಕೆ ಅಧಿಕಾರಿಗಳು ದಾಳಿ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಕಳೆದ ತಿಂಗಳು, ಇದೇ ಪ್ರದೇಶದಲ್ಲಿ ಇಬ್ಬರು ಸಹೋದರರನ್ನು ಬೀದಿ ನಾಯಿ ಮೂರು ದಿನಗಳ ಅವಧಿಯಲ್ಲಿ ಕೊಂದು ಹಾಕಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ