Delhi: ಇತ್ತೀಚೆಗಷ್ಟೇ ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಬಾಲಕರು ಮೃತಪಟ್ಟಿದ್ದ ಜಾಗದಲ್ಲೇ ಮತ್ತೋರ್ವ ಬಾಲಕನ ಮೇಲೆ ನಾಯಿಗಳ ದಾಳಿ

ಕಳೆದ ತಿಂಗಳು ಇಬ್ಬರು ಸಹೋದರರು ಬೀದಿ ನಾಯಿ(Stray Dog)ಗಳ ದಾಳಿಯಿಂದ ಮೃತಪಟ್ಟಿದ್ದರು, ಇದೀಗ ಅದೇ ಜಾಗದಲ್ಲಿ ಮತ್ತೋರ್ವ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ.

Delhi: ಇತ್ತೀಚೆಗಷ್ಟೇ ಬೀದಿ ನಾಯಿಗಳ ದಾಳಿಯಿಂದ ಇಬ್ಬರು ಬಾಲಕರು ಮೃತಪಟ್ಟಿದ್ದ ಜಾಗದಲ್ಲೇ ಮತ್ತೋರ್ವ ಬಾಲಕನ ಮೇಲೆ ನಾಯಿಗಳ ದಾಳಿ
ಬೀದಿ ನಾಯಿಗಳು

Updated on: Apr 19, 2023 | 8:36 AM

ಕಳೆದ ತಿಂಗಳು ಇಬ್ಬರು ಸಹೋದರರು ಬೀದಿ ನಾಯಿ(Stray Dog)ಗಳ ದಾಳಿಯಿಂದ ಮೃತಪಟ್ಟಿದ್ದರು, ಇದೀಗ ಅದೇ ಜಾಗದಲ್ಲಿ ಮತ್ತೋರ್ವ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ. ದಕ್ಷಿಣ ದೆಹಲಿಯ ವಸಂತ್​ ಕುಂಜ್ ಬಳಿಯ ಅದೇ ಪ್ರದೇಶದಲ್ಲಿ ಬಾಲಕನ ಮೇಲೆ ನಾಯಿಗಳು ದಾಳಿ ನಡೆಸಿವೆ. ಬಾಲಕ ವಸಂತ ಕುಂಜ್‌ನ ರಂಗಪುರಿ ಬೆಟ್ಟದ ಬಳಿಯ ತಮ್ಮ ಮನೆಯ ಸಮೀಪವಿರುವ ಅಂಗಡಿಯೊಂದಕ್ಕೆ ಹೋಗುತ್ತಿದ್ದಾಗ ಕನಿಷ್ಠ 14 ನಾಯಿಗಳ ಗುಂಪು ಸುತ್ತುವರೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕ ಸ್ಥಳದಿಂದ ಓಡಿ ಹೋಗಲು ಪ್ರಯತ್ನ ನಡೆಸಿದ್ದ ಆದರೆ ನಾಯಿಗಳು  ಆತನ ಮೇಲೆ ದಾಳಿ ನಡೆಸಿ ಕೈಗಳು, ಭುಜಗಳು, ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ಕಚ್ಚಿವೆ. ಸಹಾಯಕ್ಕಾಗಿ ಕೂಗಿಕೊಂಡಿದ್ದು ಕೇಳಿ ಕೆಲವರು ಧಾವಿಸಿ ನಾಯಿಗಳನ್ನು ಓಡಿಸಿದರು. ಆದರೆ ಅಷ್ಟರಲ್ಲಾಗಲೇ ಬಾಲಕ ತೀವ್ರವಾಗಿ ಗಾಯಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದವರು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು, ಆತನ ದೇಹದಲ್ಲಿ 12ಕ್ಕಿಂತಲೂ ಹೆಚ್ಚು ಕಡೆ ಗಾಯಗಳಾಗಿರುವುದು ತಿಳಿದುಬಂದಿದೆ. ಚಿಕಿತ್ಸೆ ಬಳಿಕ ಬಾಲಕನನ್ನು ಮನೆಗೆ ಕರೆದೊಯ್ಯಲಾಗಿದೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಆತಂಕಕಾರಿಯಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Video: ಸ್ಕೂಟಿಯನ್ನು ಅಟ್ಟಿಸಿಕೊಂಡು ಬಂದ ನಾಯಿಗಳು, ಭಯದಲ್ಲಿ ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದ ಮಹಿಳೆಯರು

ಅಕ್ಕಪಕ್ಕದಲ್ಲಿ ನೂರಾರು ಬೀದಿ ನಾಯಿಗಳಿದ್ದು, ಪಾಲಿಕೆ ಅಧಿಕಾರಿಗಳು ದಾಳಿ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಕಳೆದ ತಿಂಗಳು, ಇದೇ ಪ್ರದೇಶದಲ್ಲಿ ಇಬ್ಬರು ಸಹೋದರರನ್ನು ಬೀದಿ ನಾಯಿ ಮೂರು ದಿನಗಳ ಅವಧಿಯಲ್ಲಿ ಕೊಂದು ಹಾಕಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us