ದೆಹಲಿ ತ್ರಿವಳಿ ಕೊಲೆ, ದುಷ್ಕೃತ್ಯವೆಸಗಿದ್ದು ಮತ್ಯಾರು ಅಲ್ಲ ಸ್ವಂತ ಮಗ
ದೆಹಲಿಯಲ್ಲಿ ತ್ರಿವಳಿ ಕೊಲೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ದಂಪತಿ ಹಾಗೂ ಅವರ ಪುತ್ರಿ ಸೇರಿ ಮೂವರನ್ನು ಯಾರೋ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದರು. ಮಗ ಮಾತ್ರ ಜಾಗಿಂಗ್ ಹೋಗಿದ್ದರಿಂದ ಬಚಾವಾಗಿದ್ದ ಎಂದು ಎಲ್ಲರೂ ನಂಬಿದ್ದರು ಆದರೆ ಆಗಿದ್ದೇ ಬೇರೆ.

ದೆಹಲಿಯಲ್ಲಿ ತ್ರಿವಳಿ ಕೊಲೆ ನಡೆದ 24 ಗಂಟೆಗಳಲ್ಲಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ದಂಪತಿ ಹಾಗೂ ಅವರ ಪುತ್ರಿ ಸೇರಿ ಮೂವರನ್ನು ಯಾರೋ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದರು. ಮಗ ಮಾತ್ರ ಜಾಗಿಂಗ್ ಹೋಗಿದ್ದರಿಂದ ಬಚಾವಾಗಿದ್ದ ಎಂದು ಎಲ್ಲರೂ ನಂಬಿದ್ದರು ಆದರೆ ಆಗಿದ್ದೇ ಬೇರೆ.
ದಕ್ಷಿಣ ದೆಹಲಿಯ ನೆಬ್ ಸರಾಯ್ನಲ್ಲಿ ನಡೆದ ಕೊಲೆ ಹಿಂದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಅದು ಮತ್ಯಾರು ಅಲ್ಲ ಆ ದಂಪತಿಯ ಮಗನೇ ಎಂಬುದು ತಿಳಿದುಬಂದಿದೆ. ತಂದೆ ತನಗೆ ಅವಮಾನ ಮಾಡಿದ್ದರು, ಜತೆಗೆ ಅಷ್ಟೂ ಆಸ್ತಿಯನ್ನು ತನ್ನ ಸಹೋದರಿಗೆ ನೀಡುವುದಾಗಿ ಹೇಳಿದ್ದರು, ಹಾಗಾಗಿ ಅವರ ಮದುವೆ ವಾರ್ಷಿಕೋತ್ಸವದಂದೇ ಅವರನ್ನು ಕೊಲೆ ಮಾಡಲು ನಿರ್ಧರಿಸಿದ್ದೆ ಎಂದು ಆತ ಬಾಯ್ಬಿಟ್ಟಿದ್ದಾನೆ.
ತನ್ನ ಇಡೀ ಕುಟುಂಬವು ಮಲಗಿರುವಾಗ ಕೊಲೆ ಮಾಡಿದ್ದಾನೆ, ರಾಜೇಶ್ ಕುಮಾರ್ (51), ಅವರ ಪತ್ನಿ ಕೋಮಲ್ (46) ಮತ್ತು ಅವರ 23 ವರ್ಷದ ಮಗಳು ಕವಿತಾ ಅವರ ಶವಗಳು ನೆಬ್ ಸರೈನಲ್ಲಿರುವ ಅವರ ಮನೆಯಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾಗಿವೆ.
ಮತ್ತಷ್ಟು ಓದಿ: ದೆಹಲಿ: ಚೂರಿಯಿಂದ ಇರಿದು ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ
ರಾಜೇಶ್ ಮತ್ತು ಕೋಮಲ್ ಅವರ ಮಗ ಅರ್ಜುನ್, 20, ಅವರು ಬೆಳಿಗ್ಗೆ 5.30 ರ ಸುಮಾರಿಗೆ ಬೆಳಗಿನ ವಾಕಿಂಗ್‌ಗೆ ತೆರಳಿದ್ದರು ಮತ್ತು ಹಿಂದಿರುಗಿದಾಗ ಶವಗಳು ಪತ್ತೆಯಾಗಿತ್ತು ಎಂದು ಹೇಳಿದ್ದರು. ಆದರೆ ಮನೆಯಲ್ಲಿ ಕಳ್ಳತನವಾಗಿಲೀ ಯಾವುದೂ ನಡೆದಿರಲಿಲ್ಲ.
ರಾಜೇಶ್, ಕೋಮಲ್ ಮತ್ತು ಕವಿತಾ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಮೃತದೇಹಗಳು ಪತ್ತೆಯಾದ ನಂತರ, ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು, ಇದು ಕುಟುಂಬದ ಹೊರಗಿನವರು ಯಾರೂ ಮನೆಗೆ ಪ್ರವೇಶಿಸಿಲ್ಲ ಎಂದು ಅವರಿಗೆ ಮನವರಿಕೆಯಾಯಿತು.
ಅರ್ಜುನ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ತನಿಖೆ ಬಳಿಕ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು. ಅರ್ಜುನ್ ತಮ್ಮ ಶಾಲಾ ಶಿಕ್ಷಣವನ್ನು ಧೌಲಾ ಕುವಾನ್‌ನ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಮಾಡಿದ್ದ.ದೆಹಲಿ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಬ್ಯಾಚುಲರ್ ಆಫ್ ಆರ್ಟ್ಸ್ ವಿದ್ಯಾರ್ಥಿಯಾಗಿದ್ದಾರೆ.
ತಂದೆ ನಿವೃತ್ತ ಸೈನಿಕರಾಗಿದ್ದು, ಓದಿನ ವಿಚಾರದಲ್ಲಿ ಪದೇ ಪದೆ ಗದರುತ್ತಿದ್ದರು. ಸ್ವಲ್ಪ ದಿನಗಳ ಹಿಂದೆ ಅಕ್ಕಪಕ್ಕದ ಮನೆಯವರ ಮುಂದೆ ಅರ್ಜುನ್ಗೆ ಥಳಿಸಿದ್ದರು. ಅದಕ್ಕೆ ಕೋಪಗೊಂಡು ಎಲ್ಲರನ್ನೂ ಹತ್ಯೆ ಮಾಡಿದ್ದಾನೆ. ಹರ್ಯಾಣ ಮೂಲದ ಕುಟುಂಬವು 15 ವರ್ಷಗಳ ಹಿಂದೆ ದೆಹಲಿಗೆ ಬಂದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ