ಬಿಜೆಪಿಯ ಮಹಿಳಾ ಸದಸ್ಯರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ; ಶಿವಸೇನಾ ಸಂಸದ ಸಂಜಯ್ ರಾವುತ್ ವಿರುದ್ಧ ಪ್ರಕರಣ ದಾಖಲು

| Updated By: ರಶ್ಮಿ ಕಲ್ಲಕಟ್ಟ

Updated on: Dec 13, 2021 | 2:33 PM

Shiv Sena MP Sanjay ಈ ಪದ ಬಳಕೆಗಾಗಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಂದರೆ ಹಿಂದಿ ಡಿಕ್ಷನರಿಗಳ ಪ್ರಕಾರ ಅದರ ಅರ್ಥ ಮೂರ್ಖತನ. ಈ ನಡುವೆಯೂ ಪ್ರಕರಣ ದಾಖಲಾಗಿದ್ದರೆ ಅದು ನನ್ನ ಮೇಲೆ ಒತ್ತಡ ಹೇರುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ! ಎಂದು ರಾವುತ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಮಹಿಳಾ ಸದಸ್ಯರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ; ಶಿವಸೇನಾ ಸಂಸದ ಸಂಜಯ್ ರಾವುತ್ ವಿರುದ್ಧ ಪ್ರಕರಣ  ದಾಖಲು
ಸಂಜಯ್ ರಾವುತ್
Follow us on

ದೆಹಲಿ: ಬಿಜೆಪಿ (BJP) ಮಹಿಳಾ ಸದಸ್ಯರ  ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಶಿವಸೇನಾ ಸಂಸದ ಸಂಜಯ್ ರಾವುತ್  (Shiv Sena MP Sanjay Raut) ವಿರುದ್ಧ ಪೂರ್ವ ದೆಹಲಿಯ ಮಂಡವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಬಿಜೆಪಿಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನೀಡಿದ ದೂರು ಸ್ವೀಕರಿಸಿದ ನಂತರ ಐಪಿಸಿ ಸೆಕ್ಷನ್ 509 (ಮಹಿಳೆಯರ ಗೌರವಕ್ಕೆ ಧಕ್ಕೆ ಬರುವಂತೆ ನಡೆದುಕೊಂಡಿದ್ದಕ್ಕೆ) ಮತ್ತು 500 (ಮಾನನಷ್ಟ) ಅಡಿಯಲ್ಲಿ ರಾವುತ್  ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಡಿಸೆಂಬರ್ 9 ರಂದು ಮರಾಠಿ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ಸಂದರ್ಶನದಲ್ಲಿ ರಾವುತ್ ಅವರು “ಬಿಜೆಪಿ ರಾಜಕೀಯ ಕಾರ್ಯಕರ್ತರ ಪ್ರಾಣ ಮತ್ತು ಅಂಗಗಳ” ವಿರುದ್ಧ ಬೆದರಿಕೆ ಹಾಕಿದರು ಮತ್ತು ನಿಂದನೀಯ ಭಾಷೆಯನ್ನು ಬಳಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿದ್ದಾರೆ. ಡಿಸೆಂಬರ್ 9 ರಂದು, ನಾನು ಟಿವಿಯಲ್ಲಿ ರಾವುತ್ ಅವರ ಸಂದರ್ಶನವನ್ನು ನೋಡುತ್ತಿದ್ದೆ. ಅವರು ಬಿಜೆಪಿಯ ಪಕ್ಷದ ಕಾರ್ಯಕರ್ತರ ಮೇಲೆ ಆಘಾತಕಾರಿ ಕಾಮೆಂಟ್​​ಗಳನ್ನು ಮಾಡಿದ್ದರು. ಅವರ ಸಂದರ್ಶನದಲ್ಲಿ ಅವರು ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ನಿಂದಿಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಜೆಪಿಯ ಮಹಿಳಾ ಘಟಕವು ನಿಮ್ಮನ್ನು ಒತ್ತಾಯಿಸುತ್ತದೆ. ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ಬಿಜೆಪಿಯ ಮಹಿಳಾ ಪಕ್ಷದ ಕಾರ್ಯಕರ್ತರ ಗೌರವದ ಬಗ್ಗೆ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಆಕೆಯ ದೂರನ್ನು ಸ್ವೀಕರಿಸಿದ ಪೊಲೀಸರು ಕಾನೂನು ಅಭಿಪ್ರಾಯ ಪಡೆದು ಶಿವಸೇನಾ ಸಂಸದರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಪದ ಬಳಕೆಯ ಮೇಲೆ ಎಫ್‌ಐಆರ್ ದಾಖಲಿಸಿರುವುದು ಅವರ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ರಾವುತ್ ಹೇಳಿದ್ದಾರೆ. “ ಈ ಪದ ಬಳಕೆಗಾಗಿ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಂದರೆ ಹಿಂದಿ ಡಿಕ್ಷನರಿಗಳ ಪ್ರಕಾರ ಅದರ ಅರ್ಥ ಮೂರ್ಖತನ. ಈ ನಡುವೆಯೂ ಪ್ರಕರಣ ದಾಖಲಾಗಿದ್ದರೆ ಅದು ನನ್ನ ಮೇಲೆ ಒತ್ತಡ ಹೇರುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ! ಅಂದಹಾಗೆ ಕೆಲವು ಬಿಜೆಪಿ ನಾಯಕರು ಮಹಿಳಾ ನಾಯಕರ ವಿರುದ್ಧ ಹೆಚ್ಚು ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ, ಅವರ ವಿರುದ್ಧ ಅಂತಹ ಎಫ್‌ಐಆರ್ ಕೇಳಿಲ್ಲ, ”ಎಂದು ರಾವುತ್ ಟ್ವೀಟ್‌ ಮಾಡಿದ್ದಾರೆ.


ಮಹಾರಾಷ್ಟ್ರದ ಕೆಲವು ಆಮದು ಮಾಡಿಕೊಂಡ ಬಿಜೆಪಿ ನಾಯಕರು ಬಾಲಿಶ ರಾಜಕಾರಣಕ್ಕಾಗಿ ಇಂತಹ ಪದಗಳನ್ನು ಬಳಸಲಾಗಿದೆ. ಆದರೆ ದೆಹಲಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರಾವುತ್ ಹೇಳಿದರು. “ಇದು ಎಸ್‌ಎಸ್‌ಆರ್ (ಸುಶಾಂತ್ ಸಿಂಗ್ ರಜಪೂತ್) ಪ್ರಕರಣಕ್ಕೆ ಹೋಲುತ್ತದೆ, ಮುಂಬೈನಲ್ಲಿ ಏನಾಯಿತು ಎಂಬುದರ ಕುರಿತು ಪಟನಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಆಡಳಿತದಲ್ಲಿ ಕಾನೂನಿನ ಕೈಗಳು ಇಷ್ಟು ಉದ್ದವಾಗಿದೆಯೇ? ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: Kashi Vishwanath corridor ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ