AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮನೆಯ ಗೋವುಗಳ ರಕ್ಷಣೆಗಾಗಿ ಯಾವುದಕ್ಕೂ ಒಂದು ಕತ್ತಿ ಖರೀದಿಸಿಟ್ಟುಕೊಳ್ಳಿ: ವಿಎಚ್​ಪಿ ನಾಯಕಿ ಸಾದ್ವಿ ಸರಸ್ವತಿ

ಕರ್ನಾಟಕದಲ್ಲಿ ಕೆಲವು ರಾಷ್ಟ್ರವಿರೋಧಿಗಳು ಟಿಪ್ಪು ಸುಲ್ತಾನನ್ನು ಹೊಗಳುತ್ತಿದ್ದಾರೆ. ಅಂಥ ಜನರಿಂದಲೂ ದೇಶವನ್ನು ರಕ್ಷಣೆ ಮಾಡಿಕೊಳ್ಳುವುದು ತುಂಬ ಮುಖ್ಯ ಎಂದು ಸಾದ್ವಿ ಸರಸ್ವತಿ ಹೇಳಿದ್ದಾರೆ.

ನಿಮ್ಮ ಮನೆಯ ಗೋವುಗಳ ರಕ್ಷಣೆಗಾಗಿ ಯಾವುದಕ್ಕೂ ಒಂದು ಕತ್ತಿ ಖರೀದಿಸಿಟ್ಟುಕೊಳ್ಳಿ: ವಿಎಚ್​ಪಿ ನಾಯಕಿ ಸಾದ್ವಿ ಸರಸ್ವತಿ
ಸಾಧ್ವಿ ಸರಸ್ವತಿ
Follow us
TV9 Web
| Updated By: Lakshmi Hegde

Updated on: Dec 13, 2021 | 1:32 PM

ಉಡುಪಿ: ನಿಮ್ಮ ನಿಮ್ಮ ಮನೆಯ ಗೋವುಗಳನ್ನು ರಕ್ಷಿಸಿಕೊಳ್ಳಲು, ಕತ್ತಿಯನ್ನು ಖರೀದಿಸಿಟ್ಟುಕೊಳ್ಳಿ ಎಂದು ವಿಶ್ವ ಹಿಂದು ಪರಿಷತ್​ (VHP) ನಾಯಕಿ ಸಾದ್ವಿ ಸರಸ್ವತಿಯವರು ಕರೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ಗಾಂಧಿ ಮೈದಾನದಲ್ಲಿ ವಿಎಚ್​ಪಿ ಮತ್ತು ಭಜರಂಗದಳದಿಂದ ಆಯೋಜಿಸಲಾಗಿದ್ದ ಹಿಂದು ಸಂಗಮ ಸಮಾರಂಭದಲ್ಲಿ ಮಾತನಾಡಿದ ಅವರು, ಗೋಮಾತೆಯ ರಕ್ಷಣೆ ಅತ್ಯಗತ್ಯ ಎಂದು ಹೇಳಿದ್ದಾರೆ.

ಜಗತ್ತಿನಾದ್ಯಂತ ಗೋಮಾತೆಯನ್ನು ಗೌರವಿಸುತ್ತಾರೆ, ಪೂಜಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಹಸುವನ್ನು ಅದರ ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ. ಈ ದೇಶದಲ್ಲಿ ಗೋವು ಹಂತಕರಿಗೆ ಬದುಕಲು ಹಕ್ಕಿಲ್ಲ. ಈಗೀಗಂತೂ ಗೋಶಾಲೆ, ಕೊಟ್ಟಿಗೆಗಳಿಂದ ಗೋವುಗಳನ್ನು ಕದ್ದುಕೊಂಡು ಹೋಗಿ ಕೊಲ್ಲುತ್ತಿರುವ ಘಟನೆಗಳೂ ಬೆಳಕಿಗೆ ಬರುತ್ತಿವೆ. ಇಂಥ ಪ್ರಕರಣವನ್ನು ತಡೆಯಬೇಕು. ಗೋವುಗಳನ್ನು ಸಾಕಿಕೊಂಡವರೆಲ್ಲ ಒಂದೊಂದು ಕತ್ತಿಯನ್ನೂ ಖರೀದಿಸಿಟ್ಟುಕೊಳ್ಳಬೇಕು. ಈ ಮೂಲಕ ಹಸುಗಳ ರಕ್ಷಣೆ ಮಾಡಬೇಕು ಎಂದು ಹೇಳಿದ್ದಾರೆ. ಇಂದು ಅನೇಕರು ಲಕ್ಷಾಂತರ ರೂಪಾಯಿ ಮೌಲ್ಯದ ಫೋನ್​ಗಳನ್ನು ಖರೀದಿಸುತ್ತಿದ್ದಾರೆ. ಅಂದರೆ ಒಂದು ಕತ್ತಿಯನ್ನು ಕೊಳ್ಳುವುದೇನೂ ಅಷ್ಟು ದೊಡ್ಡ ಹೊರೆಯಾಗಲಿಕ್ಕಿಲ್ಲ. ಹೀಗಾಗಿ ಒಂದು ಕತ್ತಿಯನ್ನು ಯಾವುದಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬೇಕು ಹಸುಗಳನ್ನು ಕೊಲ್ಲಲು ಮುಂದಾಗುವವರ ವಿರುದ್ಧ ಕತ್ತಿ ಪ್ರಯೋಗ ತಪ್ಪಲ್ಲ ಎಂದು ಹೇಳಿದ್ದಾರೆ.

ಇನ್ನು ಕರ್ನಾಟಕದಲ್ಲಿ ಕೆಲವು ರಾಷ್ಟ್ರವಿರೋಧಿಗಳು ಟಿಪ್ಪು ಸುಲ್ತಾನನ್ನು ಹೊಗಳುತ್ತಿದ್ದಾರೆ. ಅಂಥ ಜನರಿಂದಲೂ ದೇಶವನ್ನು ರಕ್ಷಣೆ ಮಾಡಿಕೊಳ್ಳುವುದು ತುಂಬ ಮುಖ್ಯ. ಗೋಹತ್ಯೆ, ಮತಾಂತರ, ಲವ್​ ಜಿಹಾದ್​ನಂತಹ ಕೃತ್ಯಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸುವ ಅಗತ್ಯ ಹೆಚ್ಚಾಗಿ ಕಾಣುತ್ತಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿನಯ್ ಗುರೂಜಿ ಗೌರಿಗದ್ದೆ, ಆನೆಗುಂದಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ, ವಿಎಚ್​ಪಿ ನಾಯಕ ಎಂ.ಬಿ.ಪುರಾಣಿಕ್​ ಇತರರು ಇದ್ದರು.

ಇದನ್ನೂ ಓದಿ: Viral Video: ಗುಜರಿ ಕಾರಿನ ಭಾಗಗಳಿಂದ ತಯಾರಾಯ್ತು ಹೆಲಿಕಾಪ್ಟರ್; ಟೇಕಾಫ್ ಆದ ಚಾಪರ್ ವಿಡಿಯೋ ವೈರಲ್

ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು