ಕಾಂಗ್ರೆಸ್ ಪ್ರಧಾನ ಕಚೇರಿಗೆ ನುಗ್ಗಿ ಲಾಠಿ ಪ್ರಹಾರ ಮಾಡಿಲ್ಲ; ಆರೋಪ ನಿರಾಕರಿಸಿದ ದೆಹಲಿ ಪೊಲೀಸ್

| Updated By: ರಶ್ಮಿ ಕಲ್ಲಕಟ್ಟ

Updated on: Jun 15, 2022 | 5:34 PM

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿಚಾರಣೆಯ ಮೂರನೇ ದಿನಕ್ಕೆ ಮುಂಚಿತವಾಗಿ ಪೊಲೀಸರು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂದು ವಿಶೇಷ ಸಿಪಿ ತಿಳಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಚೇರಿಗೆ ನುಗ್ಗಿ ಲಾಠಿ ಪ್ರಹಾರ ಮಾಡಿಲ್ಲ; ಆರೋಪ ನಿರಾಕರಿಸಿದ ದೆಹಲಿ ಪೊಲೀಸ್
ಸಾಗರ್ ಪ್ರೀತ್ ಹೂಡಾ
Follow us on

ದೆಹಲಿ: ದೆಹಲಿ ಪೊಲೀಸ್ (Delhi Police) ಸಿಬ್ಬಂದಿ ಕಾಂಗ್ರೆಸ್ (Congress) ಪಕ್ಷದ ಪ್ರಧಾನ ಕಚೇರಿಗೆ ನುಗ್ಗಿ ತಮ್ಮ ನಾಯಕರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಯನ್ನು ದೆಹಲಿ ಪೊಲೀಸರು ಬುಧವಾರ ನಿರಾಕರಿಸಿದ್ದಾರೆ. ದೆಹಲಿಯ ಕಾಂಗ್ರೆಸ್ ಪಕ್ಷದ ಕಚೇರಿಯ ಬಳಿ ನೆಲೆಸಿದ್ದ ಪೊಲೀಸರ ಮೇಲೆ ಹಲವಾರು ಜನರು ಬ್ಯಾರಿಕೇಡ್‌ಗಳನ್ನು ಎಸೆದಿದ್ದಾರೆ. ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿ ‘ಜಗಳ ನಡೆದಿರಬಹುದು ಎಂದು ಹೇಳಿದ ದೆಹಲಿ ಪೊಲೀಸ್‌ನ ವಿಶೇಷ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್ ಪ್ರೀತ್ ಹೂಡಾ ಪೊಲೀಸರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಚೇರಿಗೆ ನುಗ್ಗಿ ಲಾಠಿ ಚಾರ್ಜ್ ನಡೆಸಿರುವುದನ್ನು ನಿರಾಕರಿಸಿದ್ದಾರೆ. ಪೊಲೀಸರು ಯಾವುದೇ ಬಲ ಪ್ರಯೋಗ ಮಾಡಿಲ್ಲ. ನಮ್ಮೊಂದಿಗೆ ಸಹಕರಿಸಲು  ನಾವು ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಹೂಡಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ED) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ (Rahul Gandhi) ವಿಚಾರಣೆಯ ಮೂರನೇ ದಿನಕ್ಕೆ ಮುಂಚಿತವಾಗಿ ಪೊಲೀಸರು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂದು ವಿಶೇಷ ಸಿಪಿ ತಿಳಿಸಿದ್ದಾರೆ. ಇಂದಿನ ಘರ್ಷಣೆಯಲ್ಲಿ ಇದುವರೆಗೆ ಸುಮಾರು 150 ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಇಂದು ಸಭೆಗೆ ಯಾವುದೇ ಅನುಮತಿ ತೆಗೆದುಕೊಂಡಿರಲಿಲ್ಲ. ಅವರ ಪದಾಧಿಕಾರಿಗಳಿಗೆ ಸೆಕ್ಷನ್ 144 ವಿಧಿಸಲಾಗಿರುವ ಪ್ರದೇಶದ (ಇಡಿ ಕಚೇರಿ ಮತ್ತು ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್‌ನ ಪ್ರಧಾನ ಕಚೇರಿಯ ನಡುವೆ) ಬಗ್ಗೆ ತಿಳಿದಿದೆ ಎಂದು ಹೂಡಾ ಹೇಳಿದ್ದಾರೆ.

ಇದನ್ನೂ ಓದಿ
ಕಾಂಗ್ರೆಸ್ ಪ್ರಧಾನ ಕಚೇರಿಯೊಳಗೆ ನುಗ್ಗಿದ ದೆಹಲಿ ಪೊಲೀಸ್; ಮೋದಿ ಸರ್ಕಾರದ ಸೊಕ್ಕು ಮುರಿಯುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್
DK Shivakumar: ನಾವು ಲಂಚ ಪಡೆದಿದ್ದೆವಾ? ಮಂಚಕ್ಕೆ ಹೋಗಿದ್ದೆವಾ? ಬಿಜೆಪಿಗೆ ಹೆದರೋ ಮಾತೇ ಇಲ್ಲ; ಡಿಕೆ ಶಿವಕುಮಾರ್
DK Shivakumar: ಕೊವಿಡ್ ನಿಯಮ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ; ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಡಿಕೆ ಶಿವಕುಮಾರ್ ಹಾಜರು
ಚಾಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, ಶಾಸಕ ನಿರಂಜನ್ ಕುಮಾರ್ಗೆ ಮುಖಭಂಗ


ಸೆಕ್ಷನ್ 144 ವಿಧಿಸಿರುವ ಕಾರಣ ಇಡಿ ಕಚೇರಿಯ ಸುತ್ತಲೂ ಮತ್ತು ಅಕ್ಬರ್ ರಸ್ತೆಯಲ್ಲಿ ಯಾವುದೇ ಸಭೆ ನಡೆಸಬಾರದು ಎಂದು ದೆಹಲಿ ಪೊಲೀಸರು ನಿನ್ನೆ ರಾತ್ರಿ ಕಾಂಗ್ರೆಸ್‌ಗೆ ಲಿಖಿತವಾಗಿ ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ. ಕೆಲವು ಕಾರ್ಮಿಕರು ಇಂದು ಕೂಡ ನಮ್ಮ ಮನವಿಯನ್ನು ಒಪ್ಪದಿದ್ದಾಗ, ನಾವು ಅವರನ್ನು ಬಂಧಿಸಿದ್ದೇವೆ. ಎರಡೂವರೆ ದಿನಗಳಲ್ಲಿ, ಸುಮಾರು 800 ಜನರನ್ನು ಬಂಧಿಸಲಾಯಿತು ಎಂದು ಹೂಡಾ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ಮಾಜಿ ಸಚಿವರು ಸೇರಿದಂತೆ ಇತರರಿಗೆ ಸೌಲಭ್ಯ ಕಲ್ಪಿಸಲಾಗಿಲ್ಲ ಎಂಬ ಕಾಂಗ್ರೆಸ್ ಪಕ್ಷದ ಹೇಳಿಕೆಗಳನ್ನು ತಳ್ಳಿ ಹಾಕಿದ ಪೊಲೀಸ್ ಕಾಂಗ್ರೆಸ್ ಪಕ್ಷದ ಹಿರಿಯ ಪದಾಧಿಕಾರಿಗಳು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಕ್ಯಾಬಿನೆಟ್ ಸಚಿವರು ಮತ್ತು ಸಂಸದರಿಗೆ ಯಾವತ್ತೂ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೂಡಾ ಹೇಳಿದರು. ಅವರು ಇಂದು ಸರಿಯಾಗಿ ಸಹಕರಿಸದಿದ್ದರೂ ನಾವು ಅವರ ಹಿರಿಯ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದಿದ್ದಾರೆ ಪೊಲೀಸ್ ಅಧಿಕಾರಿ.

ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜ್ಯಸಭಾ ಸಂಸದ ಕೆಸಿ ವೇಣುಗೋಪಾಲ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೆಹಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯೊಳಗೆ ಪೊಲೀಸರು ನುಗ್ಗಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:30 pm, Wed, 15 June 22