ಭಾರತ ಪೋಲಿಯೊ ಮುಕ್ತ ದೇಶ ಎಂದು ಘೋಷಣೆಯಾಗಿ 8 ವರ್ಷಗಳ ನಂತರ ಕೊಲ್ಕತ್ತಾದಲ್ಲಿ ಪೋಲಿಯೊ ವೈರಸ್ ಪತ್ತೆ
ಪೋಲಿಯೋ ವೈರಸ್ ಪತ್ತೆಯಾದ ನಂತರ ಮೆತಿಯಾಬುರುಜ್ ಪ್ರದೇಶದಲ್ಲಿ ಎಲ್ಲಿಯೂ ಸಾರ್ವಜನಿಕ ಮಲವಿಸರ್ಜನೆ ಮಾಡಬಾರದು ಎಂದು ಆರೋಗ್ಯ ಇಲಾಖೆ ಹೇಳಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವಂತೆ...
2011ರಲ್ಲಿ ಹೌರಾದಲ್ಲಿ ಕೊನೆಯ ಬಾರಿಗೆ ಮಗುವಿನ ದೇಹದಲ್ಲಿ ಪೋಲಿಯೊ ವೈರಸ್ (Polio virus) ಪತ್ತೆಯಾಗಿತ್ತು. ಇದಾದ ಬಳಿಕ 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (World Health Organization) ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಿಸಿತ್ತು. ಆದರೆ ಎಂಟು ವರ್ಷಗಳ ನಂತರ ಕೋಲ್ಕತ್ತಾದಲ್ಲಿ (Kolkata) ಪೋಲಿಯೊ ವೈರಸ್ ಪತ್ತೆಯಾಗಿದೆ. ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಮೆತಿಯಾಬುರುಜ್ ಪ್ರದೇಶದಲ್ಲಿ ಕೊಳಚೆ ನೀರಿನಲ್ಲಿ ಪೋಲಿಯೊ ರೋಗಾಣುಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮೆತಿಯಾಬುರುಜ್ ಪ್ರದೇಶದಲ್ಲಿ ಕಣ್ಗಾವಲು ಹೆಚ್ಚಿಸಿದೆ. ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. 10 ವರ್ಷಗಳ ನಂತರ ಕೋಲ್ಕತ್ತಾದಲ್ಲಿ ಪೋಲಿಯೊ ವೈರಸ್ ಪತ್ತೆಯಾಗಿದ್ದು ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿದೆ. ಯುನಿಸೆಫ್ ಜೊತೆಗಿನ ಜಂಟಿ ಕಾರ್ಯದಲ್ಲಿ ಮೆತಿಯಾಬುರುಜ್ ಪ್ರದೇಶದಲ್ಲಿ ಪೋಲಿಯೊ ವೈರಸ್ ಪತ್ತೆಯಾಗಿದೆ. ಇಂತಹ ಸಮೀಕ್ಷೆಗಳನ್ನು ಕೋಲ್ಕತ್ತಾದ ವಿವಿಧ ಕೊಳೆಗೇರಿ ಪ್ರದೇಶಗಳಲ್ಲಿ ಆಗಾಗ್ಗೆ ನಡೆಸಲಾಗುತ್ತದೆ.
ಪೋಲಿಯೊ ವೈರಸ್ ಪತ್ತೆಯಾದ ನಂತರ ಮೆತಿಯಾಬುರುಜ್ ಪ್ರದೇಶದಲ್ಲಿ ಎಲ್ಲಿಯೂ ಸಾರ್ವಜನಿಕ ಮಲವಿಸರ್ಜನೆ ಮಾಡಬಾರದು ಎಂದು ಆರೋಗ್ಯ ಇಲಾಖೆ ಹೇಳಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವಂತೆ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶನ ನೀಡಲಾಗಿದೆ. ಅಂತಹ ಮಕ್ಕಳ ಮಲ ಮಾದರಿಗಳನ್ನು ಪರೀಕ್ಷಿಸಲು ಸಹ ಅವರನ್ನು ಕೇಳಲಾಗಿದೆ. ಅದರ ಜತೆಗೆ ಲಸಿಕೆಗೆ ಒತ್ತು ನೀಡಲಾಗಿದೆ.
2011ರಲ್ಲಿ ಹೌರಾದ 12 ವರ್ಷದ ಬಾಲಕಿಗೆ ಪೋಲಿಯೊ ಇರುವುದು ಪತ್ತೆಯಾಗಿತ್ತು. ಮಾರ್ಚ್ 27, 2014 ರಂದು ಭಾರತವನ್ನು ಪೋಲಿಯೊ ಮುಕ್ತ ದೇಶವೆಂದು ಗುರುತಿಸಲಾಯಿತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 3:43 pm, Wed, 15 June 22