ದೆಹಲಿ ಜನವರಿ 04: ಕಾಶ್ಮೀರದ (Kashmir) ಭಯೋತ್ಪಾದನೆ ಘಟನೆಗಳೊಂದಿಗೆ ಸಂಬಂಧ ಹೊಂದಿರುವ ಹಿಜ್ಬುಲ್ ಮುಜಾಹಿದ್ದೀನ್ (Hizbul Mujahideen) ಭಯೋತ್ಪಾದಕನನ್ನು ದೆಹಲಿ ಪೊಲೀಸ್ ವಿಶೇಷ ದಳ (Delhi Police Special Cell)ಗುರುವಾರ ಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಭಯೋತ್ಪಾದಕ ಘಟನೆಗಳಲ್ಲಿ ಭಾಗಿಯಾಗಿರುವ ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಶಂಕಿತ ಕಾರ್ಯಕರ್ತನನ್ನು ದೆಹಲಿ ಪೊಲೀಸ್ ವಿಶೇಷ ದಳವು ಬಂಧಿಸಿದೆ.
ಪೊಲೀಸರ ಪ್ರಕಾರ, ಆರೋಪಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅನೇಕ ಭಯೋತ್ಪಾದಕ ಘಟನೆಗಳಲ್ಲಿ ವಾಟೆಂಡ್ ವ್ಯಕ್ತಿ ಆಗಿದ್ದ.
ಉಗ್ರನನ್ನು ಜಾವೇದ್ ಮಟ್ಟೂ ಎಂದು ಗುರುತಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಲವಾರು ಭಯೋತ್ಪಾದಕ ಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗಿದೆ. ಬಂಧಿತ ಉಗ್ರರ ಹುಡುಕಾಟದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ತೊಡಗಿತ್ತು.
ಜಾವೇದ್ ಅಹ್ಮದ್ ಮಟ್ಟೂ ಬಂಧಿಸಿದರೆ 5 ಲಕ್ಷ ರೂ ಬಹುಮಾನ ಘೋಷಣೆ ಆಗಿತ್ತು. ಈತ ಸೋಪೋರ್ ನಿವಾಸಿಯಾಗಿದ್ದು, ಸೋಪೋರ್‌ನಲ್ಲಿರುವ ಆತನ ಸಹೋದರ ಕಳೆದ ವರ್ಷ ತ್ರಿವರ್ಣ ಧ್ವಜವನ್ನು ಬೀಸುತ್ತಿರುವ ವಿಡಿಯೊ ವೈರಲ್ ಆಗಿತ್ತು.
ಇದನ್ನೂ ಓದಿ:ಕಾಲುವೆ ಬಳಿ ಪೋಲೀಸ್ ಮೃತದೇಹ ಪತ್ತೆ; 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪಂಜಾಬ್ ಪೊಲೀಸ್
ಈ ಬಂಧನವು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪವನ್ನು ಪರಿಗಣಿಸಿ ಗಮನಾರ್ಹ ಪರಿಣಾಮಗಳನ್ನು ಹೊಂದಿದೆ. ಅವರ ಚಟುವಟಿಕೆಗಳೊಂದಿಗೆ ಪಾಕಿಸ್ತಾನಕ್ಕೂ ಈ ಹಿಂದೆ ಸಂಬಂಧವಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Thu, 4 January 24