ಜಹಾಂಗೀರ್​​ಪುರಿ ಘರ್ಷಣೆ: ಮೆರವಣಿಗೆಯನ್ನು ನಿಲ್ಲಿಸಲು ವಿಫಲವಾದ ದೆಹಲಿ ಪೊಲೀಸರಿಗೆ ನ್ಯಾಯಾಲಯ ಛೀಮಾರಿ

| Updated By: ರಶ್ಮಿ ಕಲ್ಲಕಟ್ಟ

Updated on: May 08, 2022 | 8:24 PM

ಕಳೆದ ತಿಂಗಳು ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ವಾಯುವ್ಯ ದೆಹಲಿ ಪ್ರದೇಶದಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಬಗ್ಗೆ ಇಪ್ಪತ್ತು ಜನರನ್ನು ಬಂಧಿಸಲಾಯಿತು. ಈ ಸಂಘರ್ಷದಲ್ಲಿ ಎಂಟು ಪೊಲೀಸರು ಮತ್ತು ನಾಗರಿಕರು ಗಾಯಗೊಂಡರು.

ಜಹಾಂಗೀರ್​​ಪುರಿ ಘರ್ಷಣೆ: ಮೆರವಣಿಗೆಯನ್ನು ನಿಲ್ಲಿಸಲು ವಿಫಲವಾದ ದೆಹಲಿ ಪೊಲೀಸರಿಗೆ ನ್ಯಾಯಾಲಯ ಛೀಮಾರಿ
ದೆಹಲಿ ಪೊಲೀಸ್
Follow us on

ದೆಹಲಿ: ದೆಹಲಿಯ ಜಹಾಂಗೀರ್‌ಪುರಿಯಲ್ಲಿ (Jahangirpuri) ಇತ್ತೀಚೆಗೆ ನಡೆದ ಕೋಮು ಘರ್ಷಣೆಯಲ್ಲಿ (communal clashes) ಭಾಗಿಯಾದ ಎಂಟು ಮಂದಿಯ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ್ದು, ಆರೋಪಿಗಳು ಸ್ಥಳೀಯ ಅಪರಾಧಿಗಳಾಗಿದ್ದು, ಅವರ ಬಿಡುಗಡೆ ಮಾಡಿದರೆ ಸಾಕ್ಷಿಗಳನ್ನು ಬೆದರಿಸಬಹುದು ಎಂದು ಹೇಳಿದೆ. ಕಾನೂನುಬಾಹಿರ ಮೆರವಣಿಗೆಯನ್ನು ತಡೆಯದಿದ್ದಕ್ಕಾಗಿ ನ್ಯಾಯಾಧೀಶರು ದೆಹಲಿ ಪೊಲೀಸರಿಗೆ (Delhi Police) ಛೀಮಾರಿ ಹಾಕಿದ್ದು ಪೊಲೀಸ್ ಮುಖ್ಯಸ್ಥರು ಈ ಬಗ್ಗೆ ತನಿಖೆ ನಡೆಸಬೇಕು. ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಹೊಣೆಗಾರಿಕೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಕಳೆದ ತಿಂಗಳು ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದ ವಾಯುವ್ಯ ದೆಹಲಿ ಪ್ರದೇಶದಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಬಗ್ಗೆ ಇಪ್ಪತ್ತು ಜನರನ್ನು ಬಂಧಿಸಲಾಯಿತು. ಈ ಸಂಘರ್ಷದಲ್ಲಿ ಎಂಟು ಪೊಲೀಸರು ಮತ್ತು ನಾಗರಿಕರು ಗಾಯಗೊಂಡರು. ಪೊಲೀಸರ ಅನುಮತಿಯಿಲ್ಲದೆ ಮೆರವಣಿಗೆ ನಡೆದಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಅಲ್ಪಸಂಖ್ಯಾತ ಸಮುದಾಯದವರೊಂದಿಗೆ ವಾಗ್ವಾದ ನಡೆದಿರುವುದು ನಂತರ ತಿಳಿದುಬಂದಿದೆ. ಅಕ್ರಮ ಮೆರವಣಿಗೆಯನ್ನು ನಿಲ್ಲಿಸಿ ಗುಂಪನ್ನು ಚದುರಿಸುವ ಬದಲು, ಪೊಲೀಸ್ ಅಧಿಕಾರಿಗಳು ಮಾರ್ಗದಲ್ಲಿ ಅದರೊಂದಿಗೆ ಸಾಗುತ್ತಿರುವುದು ಕಂಡುಬಂದಿದೆ ಎಂದು ನ್ಯಾಯಾಲಯ ಹೇಳಿದೆ. “ಇನ್‌ಸ್ಪೆಕ್ಟರ್ ರಾಜೀವ್ ರಂಜನ್ ನೇತೃತ್ವದ ಜಹಾಂಗೀರ್‌ಪುರಿ ಪೊಲೀಸ್ ಠಾಣೆಯ ಸ್ಥಳೀಯ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು ಅಕ್ರಮ ಮೆರವಣಿಗೆಯ ಜೊತೆಯಲ್ಲಿದ್ದರು ಎಂದು ಎಫ್‌ಐಆರ್​​ನಲ್ಲಿದೆ ಎಂದು ನ್ಯಾಯಾಧೀಶರು ಹೇಳಿದರು.

“ಯಾವುದೇ ಅನುಮತಿಯಿಲ್ಲದೆ ನಡೆದ ಮೆರವಣಿಗೆಯನ್ನು ತಡೆಯುವಲ್ಲಿ ಸ್ಥಳೀಯ ಪೊಲೀಸರ ಸಂಪೂರ್ಣ ವೈಫಲ್ಯವನ್ನು ಇದು ಪ್ರಾಥಮಿಕವಾಗಿ ಪ್ರತಿಬಿಂಬಿಸುತ್ತದೆ” ಈ ವಿಷಯವನ್ನು ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆಂದು ತೋರುತ್ತದೆ ಎಂದು ಅವರು ಹೇಳಿದರು.

ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿ ದೇಪೇಂದ್ರ ಪಾಠಕ್ ಅವರು ಮೆರವಣಿಗೆಯ ಸಮಯದಲ್ಲಿ ಪಡೆಯ ಉಪಸ್ಥಿತಿಯನ್ನು ವಿವರಿಸಿ, “ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರ ಜವಾಬ್ದಾರಿ” ಎಂದು ಹೇಳಿದರು.

ಇದನ್ನೂ ಓದಿ
ಜಹಾಂಗೀರ್​​ಪುರಿ ಹಿಂಸಾಚಾರ ಪ್ರಕರಣ; ಪ್ರಮುಖ ಆರೋಪಿ ಅನ್ಸಾರ್ ಕೇಸ್ ದಾಖಲು, ಇಡಿಯಿಂದ ತನಿಖೆ ಆರಂಭ

“ಸನ್ನಿವೇಶವು ಸೂಕ್ಷ್ಮವಾಗಿದ್ದು ಅಲ್ಲಿ ಸಭೆ ಇದ್ದರೆ ಅದು ಹದಗೆಡದಂತೆ ನಾವು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿಯೇ ನಾವು ಸಾಕಷ್ಟು ಪೊಲೀಸರನ್ನು ಹೊಂದಿದ್ದೇವೆ.  ಕನಿಷ್ಠ ಸಮಯದಲ್ಲಿ ಘರ್ಷಣೆಯನ್ನು ನಿಯಂತ್ರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ” ಎಂದು ಅವರು ಏಪ್ರಿಲ್ 19 ರಂದು ಸುದ್ದಿಗಾರರರಿಗೆ ಹೇಳಿದ್ದರು.
“ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗದಂತೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು” ಎಂದು ನ್ಯಾಯಾಧೀಶರು ನಿನ್ನೆ ಹೇಳಿದ್ದು , ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ.

ರಾಮನವಮಿಯ ಸಮಯದಲ್ಲಿ ಜಹಾಂಗೀರ್​​ಪುರಿ ಸೇರಿದಂತೆ ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಹಿಂಸಾಚಾರ ನಡೆದಿತ್ತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

 

Published On - 8:22 pm, Sun, 8 May 22