AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಭಾವನೆಗಳಿರುವವರನ್ನು ಭಗವಾನ್ ರಾಮ ಆಶೀರ್ವದಿಸುವುದಿಲ್ಲ: ರಾಜ್​​ ಠಾಕ್ರೆಯ ಅಯೋಧ್ಯೆ ಭೇಟಿ ಬಗ್ಗೆ ಶಿವಸೇನಾ ಟೀಕೆ

ಜೂನ್ 5 ರಂದು ರಾಜ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಲಿದ್ದು, ಮಹಾರಾಷ್ಟ್ರದ ಸಚಿವ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಜೂನ್ 10 ರಂದು ದೇಶಾದ್ಯಂತದ ಶಿವಸೇನಾ ಕಾರ್ಯಕರ್ತರೊಂದಿಗೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ

ನಕಲಿ ಭಾವನೆಗಳಿರುವವರನ್ನು ಭಗವಾನ್ ರಾಮ ಆಶೀರ್ವದಿಸುವುದಿಲ್ಲ: ರಾಜ್​​ ಠಾಕ್ರೆಯ ಅಯೋಧ್ಯೆ ಭೇಟಿ ಬಗ್ಗೆ ಶಿವಸೇನಾ ಟೀಕೆ
ಸಂಜಯ್ ರಾವುತ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: May 08, 2022 | 6:33 PM

Share

ಮುಂಬೈ: ಧ್ವನಿವರ್ಧಕದ ಗದ್ದಲದ ಕಾವು ಕಡಿಮೆಯಾಗುವ ಮುನ್ನವೇ,  ಶಿವಸೇನಾ (Shiv Sena) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯು (MNS) ಈಗ ತಮ್ಮ ನಾಯಕರ ಅಯೋಧ್ಯೆಗೆ ಭೇಟಿ ಬಗ್ಗೆ ವಾಕ್ಸಮರ ಆರಂಭಿಸಿವೆ. ಜೂನ್ 5 ರಂದು ರಾಜ್ ಠಾಕ್ರೆ (Raj Thackeray) ಅಯೋಧ್ಯೆಗೆ ಭೇಟಿ ನೀಡಲಿದ್ದು, ಮಹಾರಾಷ್ಟ್ರದ ಸಚಿವ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಜೂನ್ 10 ರಂದು ದೇಶಾದ್ಯಂತದ ಶಿವಸೇನಾ ಕಾರ್ಯಕರ್ತರೊಂದಿಗೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಇವರಿಬ್ಬರೂ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಶಿವಸೇನಾದ ಸಂಸದ ಸಂಜಯ್ ರಾವುತ್ ಅವರು ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿಯನ್ನು ಟೀಕಿಸಿದ್ದು ಭಗವಾನ್ ರಾಮನು “ನಕಲಿ ಭಾವನೆಗಳನ್ನು ಮತ್ತು ರಾಜಕೀಯ ಕಾರಣಗಳಿಗಾಗಿ ತನ್ನ ಬಳಿಗೆ ಬರುವವರನ್ನು ಆಶೀರ್ವದಿಸುವುದಿಲ್ಲ” ಎಂದು ಹೇಳಿದ್ದಾರೆ.  “ಇದು ರಾಜಕೀಯವಲ್ಲ, ಆದರೆ ನಮಗೆ ನಂಬಿಕೆಯ ವಿಷಯವಾಗಿದೆ. ಹಿಂದುತ್ವದ ನಿಜವಾದ ಸಾರವನ್ನು ಎತ್ತಿ ಹಿಡಿಯಲು ಆದಿತ್ಯ ಠಾಕ್ರೆ ಅವರನ್ನು ಸಮಾಜದ ವಿವಿಧ ವರ್ಗಗಳಿಂದ ಆಹ್ವಾನಿಸಲಾಗಿದೆ” ಎಂದು ಶಿವಸೇನಾದ ಮುಖ್ಯ ವಕ್ತಾರರು ಹೇಳಿದ್ದಾರೆ. “ಭಗವಾನ್ ರಾಮನು ತನ್ನ ಬಳಿಗೆ ಹೋಗುವವರನ್ನು ನಕಲಿ ಭಾವನೆಗಳೊಂದಿಗೆ ಮತ್ತು ರಾಜಕೀಯ ಕಾರಣಗಳಿಗಾಗಿ ಆಶೀರ್ವದಿಸುವುದಿಲ್ಲ ಮತ್ತು ಅಂತಹ ಜನರು ವಿರೋಧವನ್ನು ಎದುರಿಸಬೇಕಾಗುತ್ತದೆ” ಎಂದು ರಾವತ್ ಹೇಳಿದರು.

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿಯನ್ನು ವಿರೋಧಿಸಿದ್ದಾರೆ. ಉತ್ತರ ಭಾರತೀಯರನ್ನು ಅವಮಾನಿಸಿದಕ್ಕಾಗಿ ಸಾರ್ವಜನಿಕ ಕ್ಷಮೆಯಾಚಿಸುವವರೆಗೂ ರಾಜ್ ಠಾಕ್ರೆ ಅವರನ್ನು ನಗರಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಉತ್ತರ ಭಾರತೀಯರ ಕ್ಷಮೆ ಕೇಳುವವರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ ಠಾಕ್ರೆ ಅವರನ್ನು ಭೇಟಿ ಮಾಡದಂತೆ ಸಿಂಗ್ ಇತ್ತೀಚೆಗೆ ವಿನಂತಿಸಿದ್ದರು.

ಶನಿವಾರದಂದು ಧ್ವನಿವರ್ಧಕದ ಗದ್ದಲದ ನಡುವೆ, ರಾಜ್ ಠಾಕ್ರೆ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ತಮ್ಮ ಮುಂಬರುವ ಅಯೋಧ್ಯೆ ಭೇಟಿಯ ಕುರಿತು ಯಾವುದೇ ಕಾಮೆಂಟ್‌ಗಳನ್ನು ಮಾಡದಂತೆ ಕೇಳಿಕೊಳ್ಳುವಂತೆ ಸಂದೇಶವನ್ನು ನೀಡಿದರು. ರಾಜ್ ಠಾಕ್ರೆ ಅವರ ಅಯೋಧ್ಯೆ ಭೇಟಿಯ ಕುರಿತು ಪಕ್ಷದ ವಕ್ತಾರರಾಗಿ ಕೆಲವು ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಪಕ್ಷದ ಇತರೆ ಕಾರ್ಯಕರ್ತರು ಮಾಧ್ಯಮದವರೊಂದಿಗೆ ಮಾತನಾಡಬಾರದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂದು ಬಾಳ್ ಠಾಕ್ರೆ ಹೇಳುತ್ತಿರುವ ವಿಡಿಯೊ ಹಂಚಿಕೊಂಡ ರಾಜ್ ಠಾಕ್ರೆ

‘ಬಾಳಾಸಾಹೇಬ್ ಠಾಕ್ರೆ ಪರಂಪರೆಗಾಗಿ ಯುದ್ಧ’ ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಎಲ್ಲಾ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಬೇಕು ಎಂಬ ರಾಜ್ ಠಾಕ್ರೆ ಅವರ ಬೇಡಿಕೆಯು ಅವರನ್ನು ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ತಂದಿದೆ. ಯೋಗಿ ಆದಿತ್ಯನಾಥ ಅವರ ಸರ್ಕಾರವು ದೇವಾಲಯಗಳು ಸೇರಿದಂತೆ ಧಾರ್ಮಿಕ ಸ್ಥಳಗಳಿಂದ ನೂರಾರು ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಿದ್ದರಿಂದ ಬಿಜೆಪಿ-ಎಂಎನ್‌ಎಸ್ ಮೈತ್ರಿಯ ಊಹಾಪೋಹಗಳು ಕೂಡ ಹರಡಿವೆ. ರಾಜ್ ಠಾಕ್ರೆ ಅವರು ಮಸೀದಿಗಳಲ್ಲಿ ಧ್ವನಿವರ್ಧಕಗಳ ವಿರುದ್ಧ ಬಾಳಾಸಾಹೇಬ್ ಠಾಕ್ರೆ ಅವರ ಹಳೆಯ ವಿಡಿಯೊವನ್ನು ಹಂಚಿಕೊಂಡಿದ್ದರಿಂದ ಧ್ವನಿವರ್ಧಕದ ಗದ್ದಲದ ಹಿನ್ನೆಲೆಯಲ್ಲಿ ಬಾಳಾಸಾಹೇಬ್ ಠಾಕ್ರೆ ಅವರ ಪರಂಪರೆಗಾಗಿ ಹೋರಾಟ ಪ್ರಾರಂಭವಾಗಿದೆ. ಅವರು ರಾಜ್ ಠಾಕ್ರೆ ತನ್ನ ಶೈಲಿಯನ್ನು ನಕಲಿಸಿದ್ದಕ್ಕಾಗಿ ಬಾಳಾಸಾಹೇಬ್ ಠಾಕ್ರೆ ಟೀಕಿಸಿರುವ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ಶಿವಸೇನಾ ಇದಕ್ಕೆ ಪ್ರತಿಕ್ರಿಯಿಸಿತ್ತು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ